Actress Ramya: ಸ್ಯಾಂಡಲ್​ವುಡ್ ಮೋಹಕ ತಾರೆಗೆ ಕೂಡಿ ಬಂತು ಕಂಕಣ ಭಾಗ್ಯ?

public wpadmin

ಮೋಹಕ ತಾರೆ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದೆಯಂತೆ. ನಟಿ ರಮ್ಯಾ ಅವರು ಇದೇ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸ್ಯಾಂಡಲ್​ವುಡ್ ಕ್ವೀನ್ ಮದುವೆ ಬಗ್ಗೆ ವರದಿ ಆಗಿದೆ.

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇದೇ ವರ್ಷ ಮದುವೆ ಆಗ್ತಿದ್ದಾರೆ ಎನ್ನಲಾಗ್ತಿದೆ. ನವೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಿದ್ಧತೆ ನಡೆಸಿದ್ದಾರೆ. ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ ಎನ್ನಲಾಗ್ತಿದೆ.
ನಟಿ ರಮ್ಯಾ ಅವರು ಉದ್ಯಮಿಯೊಬ್ಬರನ್ನು ಕೈ ಹಿಡಿಯಲಿದ್ದಾರೆ ಎನ್ನುವ ಮಾತು ಕೇಳಿ ಬರ್ತಿದೆ. ಆ ಉದ್ಯಮಿ ಯಾರು ಎನ್ನುವ ವಿಚಾರ ಬಯಲಾಗಿಲ್ಲ, ಹುಡುಗನ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ರಮ್ಯಾ ಮದುವೆ ವಿಚಾರ ಸದ್ಯದಲ್ಲೇ ರಿವೀಲ್ ಆಗೋ ಸಾಧ್ಯತೆ ಇದೆ.

ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ಅವರಿಗೆ ಇದೀಗ 41 ವರ್ಷ ವಯಸ್ಸಾಗಿದ್ದು, ಇದೀಗ ನಟಿ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ. ಶೀಘ್ರವೇ ಗುಡ್ ನ್ಯೂಸ್ ಹಂಚಿಕೊಳ್ಳಲಿದ್ದಾರೆ.
ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಜತೆಗೆ ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ನಿರ್ಮಾಣ ಸಂಸ್ಥೆ ಮೂಲಕ ಹೊಸ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ಮೋಹಕ ತಾರೆ ರಮ್ಯಾ ಜರ್ನಿ ಆರಂಭಿಸಿ 20 ವರ್ಷ ಕಳೆದಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ರಮ್ಯಾ ಈಗಲೂ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಮೆರೆಯುತ್ತಿದ್ದಾರೆ.

ಸ್ಯಾಂಡಲ್​ವುಡ್​ ಕ್ವೀನ್ ಆಗಿರುವ ಮೋಹಕತಾರೆ ರಮ್ಯಾಗೆ ಈ ಪಟ್ಟ ಸುಲಭವಾಗಿ ಸಿಕ್ಕಿಲ್ಲ. 20 ವರ್ಷಗಳ ತನ್ನ ಸಿನಿ ಕೆರಿಯರ್​ನಲ್ಲಿ ರಮ್ಯಾ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಸಿನಿಮಾ ಸಕ್ಸಸ್ ಜೊತೆ ಫೇಲ್ಯೂರ್​ಗಳು ಕೂಡ ರಮ್ಯಾಗೆ ಪಾಠ ಕಲಿಸಿವೆಯಂತೆ. ಕನ್ನಡದ ಸೂಪರ್​ ಸ್ಟಾರ್​ಗಳ ಜೊತೆ ತೆರೆ ಮೇಲೆ ಮಿಂಚಿದ ರಮ್ಯಾ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
2003 ರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಅಭಿ ಚಿತ್ರ ಭರ್ಜರಿ ಪ್ರದರ್ಶನ ಕಂಡಿತ್ತು. ಬಳಿಕ ರಮ್ಯಾ ಮಾಡಿ ಎಕ್ಸ್​​ಕ್ಯೂಸ್​ ಮಿ ಸಿನಿಮಾ ಕೂಡ ಸೂಪರ್ ಹಿಟ್​ ಆಗ್ತಿದ್ದಂತೆ ಚಂದನವನದಲ್ಲಿ ಚೆಂದುಳ್ಳಿ ಚೆಲುವೆಗೆ ಡಿಮ್ಯಾಂಡ್​ ಹೆಚ್ಚಾಯ್ತು. ಸ್ಯಾಂಡಲ್​ವುಡ್​ನಲ್ಲಿ ರಮ್ಯ ಚೈತ್ರಕಾಲ ಶುರುವಾಯ್ತು.
ಆಕಾಶ್, ಅಮೃತಧಾರೆ, ಆದಿ, ಸೇವಂತಿ ಸೇವಂತಿ, ಲಕ್ಕಿ, ಮುಸ್ಸಂಜೆ ಮಾತು, ಜೊತೆ ಜೊತೆಯಲಿ, ಸಂಜು ವೆಡ್ಸ್​ ಗೀತಾ ಸೇರಿದಂತೆ ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿ ರಮ್ಯಾ ನಟಿಸಿದ್ದಾರೆ. ಎರಡು ದಶಕಗಳಿಂದ ಸ್ಯಾಂಡಲ್​ವುಡ್​ ಕ್ವೀನ್​ ಆಗಿದ್ದಾರೆ. ಬಣ್ಣದ ಲೋಕಕ್ಕೆ ಬ್ರೇಕ್​ ಕೊಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿರುವ ರಮ್ಯಾಗೆ ಈಗಲೂ ಅಪಾರ ಅಭಿಮಾನಿ ಬಳಗವಿದೆ.

ರಮ್ಯಾ ಅವರು ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಇವರು 2011 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು 2013ರ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ಲೋಕಸಭಾ ಪ್ರವೇಶ ಮಾಡಿದರು.

TAGGED:
Share This Article
Leave a comment