ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನ ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದ್ದರು. ನಟ ಧನ್ನೀರ್, ಶುಶಾಂತ್ ನಾಯ್ಡು ಹಾಗೂ ಹೇಮಂತ್ ಎನ್ನುವವರ ಜೊತೆ ಆಗಮಿಸಿದ ವಿಜಯಲಕ್ಷ್ಮೀ ದರ್ಶನ್ ಜೊತೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ದರ್ಶನ್‌ಗೆ ಒಂದು ಬ್ಯಾಗ್‌ನಲ್ಲಿ ಬಟ್ಟೆ ಹಾಗೂ ಇನ್ನೊಂದು ಬ್ಯಾಗ್‌ನಲ್ಲಿ ಡ್ರೈ ಫೂಟ್ಸ್‌ನ್ನ ನೀಡಿದ್ದಾರೆ.
ಬಳಿಕ ಜಾಮೀನು ವಿಚಾರವಾಗಿ ವಕೀಲರು ಹಾಗೂ ಪತ್ನಿ ವಿಜಯಲಕ್ಷ್ಮೀ ಜೊತೆ ಚರ್ಚೆ ನಡೆಸಿದ್ದರಂತೆ. ನಂತರ ಆತ್ಮೀಯ ಸ್ನೇಹಿತರಾದ ಧನ್ನೀರ್, ಹೇಮಂತ್ ರನ್ನ ತಬ್ಬಿ ದರ್ಶನ್ ಭಾವುಕರಾಗಿದ್ದರು ಎನ್ನಲಾಗಿದೆ. ಇದರ ನಡುವೆಯೇ ನಟ ದರ್ಶನ್ ಅವರಿಗೆ ಜೈಲಾಧಿಕಾರಿಗಳು ಗುಡ್ ನ್ಯೂಸ್ ಒಂದನ್ನು ನೀಡಿದ್ದರು
ಹೌದು, ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್‌ಗೆ ಟಿವಿ ಭಾಗ್ಯ ಸಿಕ್ಕಿದೆ. ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಟಿವಿ ಅಳವಡಿಸಲಾಗಿದೆ. ಆದ್ರೆ ಕೇವಲ ಡಿಡಿ ಮಾತ್ರ ಬರುತ್ತೆ ಬೇರೆ ಯಾವುದೇ ಖಾಸಗಿ ಚಾನೆಲ್‌ಗಳ ಸಂಪರ್ಕ ಇಲ್ಲ.
ಇನ್ನು ಟಿವಿ ಬೆನ್ನಲ್ಲೇ ಹಾಸಿಗೆ, ದಿಂಬು, ಪ್ಲಾಸ್ಟಿಕ್ ಚೇರ್‌ಗೂ ದರ್ಶನ್ ಮನವಿ ಮಾಡಿದ್ದು. ಇದಕ್ಕೆ ಕೋರ್ಟ್‌ನಲ್ಲೂ ಮನವಿ ಸಲ್ಲಿಸಿದ್ದಾರೆ. ನಟ ದರ್ಶನ್ ಅವರಿಗೆ ಬೆನ್ನು ನೋವಿದೆ. ಹಾಗಾಗಿ ಹಾಸಿಗೆ, ದಿಂಬು ವ್ಯವಸ್ಥೆಗೆ ಮನವಿ ಮಾಡಿದ್ದರು. ಜೈಲು ಮ್ಯಾನ್ಯುಯೆಲ್‌ನಲ್ಲಿ ಇದ್ದರೆ ಕೊಡ್ತಾರೆ ಅಂತ ಜಡ್ಜ್ ನಿನ್ನೆ ತಿಳಿಸಿದ್ದಾರೆ. ಇಂದು ಪರಿಶೀಲಿಸಿ ಹಾಸಿಗೆ, ದಿಂಬು ಕೊಡುವ ಸಾಧ್ಯತೆ ಇದೆ.
ನಿನ್ನೆ ಸಂಜೆ ಹೈ ಸೆಕ್ಯುರಿಟಿ ಸೆಲ್ ಗೆ ಜೈಲಾಧಿಕಾರಿಗಳು ಟಿವಿ ಆಳವಡಿಸಿದ್ದಾರೆ. ಬಳ್ಳಾರಿ ಜೈಲಿಗೆ ಬಂದಾಗಿನಿಂದಕೂ ನಟ ದರ್ಶನ್ ಅವರು ಟಿವಿಗೆ ಬೇಡಿಕೆಯಿಟ್ಟಿದ್ದರು. ಆದರೆ ಟಿವಿ ಕೆಟ್ಟು ಹೋಗಿದ್ದರಿಂದ ಸೆಲ್ ಗೆ ಆಳವಡಿಸುವುದು ವಿಳಂಬ ಆಗಿತ್ತು ಇದರಿಂದ ನಿತ್ಯ ನಟ ದರ್ಶನ್ ಟಿವಿಗಾಗಿ ಮನವಿ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ಸದ್ಯ ನಟ ದರ್ಶನ್ ಹೈ ಸೆಕ್ಯುರಿಟಿ ಜೈಲಿನ ವಾರ್ಡ್ ನಲ್ಲಿದ್ದು, ಇತರೇ ಕೈದಿಗಳ ಸಂಪರ್ಕ ಇಲ್ಲದೇ ಏಕಾಂಗಿಯಾಗಿದ್ದಾರೆ. ನಿನ್ನೆ ನಟ ದರ್ಶನ್ ಅವರನ್ನು ಅವರ ಪತ್ನಿ ಹಾಗೂ ಸ್ನೇಹಿತರು ಭೇಟಿ ಆಗಿದ್ದರು. ಆಪ್ತರ ಭೇಟಿ ಬಳಿಕ ಅವರು ಲವಲವಿಕೆಯಿಂದ ದ್ದಾರೆ ಎನ್ನಲಾಗಿದೆ.
ಉಳಿದಂತೆ ನಟ ದರ್ಶನ್ ಆಯಂಡ್ ಗ್ಯಾಂಗ್‌ಗೆ ಸೆಪ್ಟೆಂಬರ್ 30ರ ವರೆಗೆ ಜೈಲೂಟ ಖಾಯಂ ಆಗಿದೆ. ನ್ಯಾಯಾಂಗ ಬಂಧನ ಅವಧಿ ಅಂತ್ಯವಾದ ಹಿನ್ನೆಲೆ ವಿಡಿಯೋ ಕಾನ್ಸರೆನ್ಸ್ ಮೂಲಕ ಡಿ ಗ್ಯಾಂಗ್ ಕೋರ್ಟ್‌ಗೆ ಹಾಜರಾಗಿತ್ತು. ಇದೇ ವೇಳೆ ಬಾಕಿ ಇದ್ದ CFSL ವರದಿಗಳನ್ನು ತನಿಖಾಧಿಕಾರಿ ಕೋರ್ಟ್‌ಗೆ ಸಲ್ಲಿಸಿದ್ರು. ಇದರ ಜೊತೆಗೆ ಕೆಲವು ಟೆಕ್ನಿಕಲ್ ಎವಿಡೆನ್ಸ್‌ಗಳನ್ನೂ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.