Actor Darshan: ಮರ್ಮಾಂಗಕ್ಕೆ ಹಲ್ಲೆ, ಕರೆಂಟ್ ಶಾಕ್​! ರೇಣುಕಾಸ್ವಾಮಿ ದೇಹದ ಮೇಲೆ 39 ಗಾಯದ ಗುರುತು!

public wpadmin

ರೇಣುಕಾಸ್ವಾಮಿ ಕೇಸ್ನಲ್ಲಿ ನಟಿ ಪವಿತ್ರಾ ಗೌಡ ಎ1 ಆಗಿದ್ದಾರೆ. ನಟ ದರ್ಶನ್ ಎ2 ಆಗಿದ್ದಾರೆ. ಮುಂದುವರಿದಿದ್ದಾರೆ. ದರ್ಶನ್ ವಿರುದ್ಧ ಗಂಭೀರ ಆರೋಪಗಳು ಕೂಡ ಚಾರ್ಜ್ ಶೀಟ್ನಲ್ಲಿ ಇದೆ ಎನ್ನಲಾಗ್ತಿದೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಕೊಲೆ ನಡೆದಿದೆ ಎನ್ನಲಾಗ್ತಿದ್ದು, ಎಲ್ಲಾ ಸಾಕ್ಷಿಗಳು ಕೂಡ ನಟ ದರ್ಶನ್, ಪವಿತ್ರಾ ಗೌಡ ಅವರನ್ನೇ ಬೊಟ್ಟು ಮಾಡಿ ತೋರಿಸಿದೆ ಎನ್ನಲಾಗ್ತಿದೆ. ದರ್ಶನ್ ಮತ್ತು ಸಹಚರರನ್ನು ತನಿಖೆ ನಡೆಸಿ ಹಲವು ಸಾಕ್ಷಿ ಸಂಗ್ರಹಿಸಿದ್ದಾರೆ. ಸುಮಾರು 3,991 ಪುಟಗಳ ಚಾರ್ಜ್ಶೀಟ್ನನ್ನು ಪೊಲೀಸರು ಸಲ್ಲಿಸಲಿದ್ದಾರೆ. ಆದರೆ ಚಾರ್ಜ್ ಶೀಟ್ ನಲ್ಲಿ ಕೆಲವೊಂದು ಸಂಗತಿಗಳು ಶಾಕಿಂಗ್ ಆಗಿದೆ. ಚಾರ್ಜ್ ಶೀಟ್ ಪುಟಗಳ ಸಂಖ್ಯೆ ಕೇಳಿ ದರ್ಶನ್ ಗೆ ಟೆನ್ಷನ್ ಕೂಡ ಶುರುವಾಗಿದೆ ಎನ್ನಲಾಗ್ತಿದೆ.

ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಸಿದ್ದು, ಬಳಿಕ ಶೆಡ್ ನಲ್ಲಿ ಹಲ್ಲೆ ಮಾಡಿದ್ದು ದರ್ಶನ್ ಅನ್ನೋದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ನಟ ದರ್ಶನ್ ಕೊಲೆ ಕೇಸ್ ಮುಚ್ಚಿ ಹಾಕಲು ಲಕ್ಷ, ಲಕ್ಷ ಹಣ ಕೂಡ ಖರ್ಚು ಮಾಡಿದ್ದಾರೆ ಎಂದು ಚಾರ್ಜ್​ ಶೀಟ್​ನಲ್ಲಿ ಉಲ್ಲೇಖವಾಗಿದೆ. ದರ್ಶನ್ ಕೊಲೆ ನಡೆದ ಸ್ಥಳದಲ್ಲಿ ಇರುವುದು ಹಾಗೂ ಕೊಲೆ ಬಳಿಕ ಸ್ಥಳದಿಂದ ಹೋಗಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ ಆಗಿದ್ದು, ಇದಕ್ಕೆ ಸಾಕ್ಷ್ಯಗಳು ಕೂಡ ಸಿಕ್ಕಿವೆ. ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾದ್ದಾರೆ ಎನ್ನುವ ವಿಚಾರ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ರೇಣುಕಾಸ್ವಾಮಿ ಮರ್ಮಾಂಗಕ್ಕೆ ಹೊಡೆದಿರುವುದು ಮರಣೋತ್ತರ ವರದಿಯಲ್ಲಿ ಖಚಿತವಾಗಿದೆ. ಅಷ್ಟೇ ಅಲ್ಲದೇ ರೇಣುಕಾಸ್ವಾಮಿ ದೇಹದ 39 ಭಾಗಗಳಲ್ಲಿ ಗಾಯಗಳು ಕೂಡ ಕಂಡು ಬಂದಿದೆ. ಜೊತೆಗೆ ಆತನ ದೇಹದಲ್ಲಿ 2 ಮೂಳೆಗಳು ಕೂಡ ಮುರಿದಿದೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಮೇಲಿನ ಭೀಕರ ಹಲ್ಲೆ ಬಗ್ಗೆ ಚಾರ್ಜ್ ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಕೂಡ ಬಯಲಾಗಿದೆ. ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯದ ಗುರುತು ಪತ್ತೆ ಆಗಿದ್ದು, ಅಷ್ಟೇ ಅಲ್ಲದೆ ಆರೋಪಿಗಳ ಹೊಡೆತಕ್ಕೆ ರೇಣುಕಾಸ್ವಾಮಿ ಎದೆಯ ಮೂಳೆ ಮುರಿದಿದೆ. ತಲೆಗೆ ಗಾಯವಾಗಿದೆ ಎಂದು ಚಾರ್ಜ್​ಶೀಟ್​ ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗ್ತಿದೆ.

ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತಂದ ದರ್ಶನ್​ ಗ್ಯಾಂಗ್​ ಪಟ್ಟಣಗೆರೆ ಶೆಡ್​ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ರು ಎನ್ನಲಾಗ್ತಿದೆ. ಜೂನ್ 8 ರಂದು ನಡೆದಿದ್ದ ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 9 ರಂದು ಮೃತದೇಹ ಪತ್ತೆ ಆಗಿತ್ತು. ಮೃತದೇಹ ಸಿಗ್ತಿದ್ದಂತೆ ಮೂವರು ಆರೋಪಿಗಳು ಪೊಲೀಸ್​ ಠಾಣೆಯಲ್ಲಿ ಸರೆಂಡರ್​ ಆದ್ರು. ಬಳಿಕ ಜೂನ್ 10 ರಂದು ಮೂವರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ದರ್ಶನ್​ ಹಾಗೂ ಪವಿತ್ರಾ ಗೌಡ ಹೆಸರು ಬಯಲಾಗಿತ್ತು.

Share This Article
Leave a comment