Jio Electric Cycle:ಒಮ್ಮೆ ಚಾರ್ಜ್‌ ಮಾಡಿ 80 ಕಿ.ಮೀ. ಓಡಿಸಿ! ಕಡಿಮೆ ಬೆಲೆಗೆ ಜಿಯೋ ಸೈಕಲ್​!

jio electric cycle

public wpadmin

ಈಗಂತೂ ಪ್ರತಿಯೊಬ್ಬರ ಮನೆಯಲ್ಲಿಯೂ ಗಾಡಿ ಇರುವುದು ಅನಿವಾರ್ಯವಾಗಿಬಿಟ್ಟಿದೆ. ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಒಂದೊಂದು ಬೈಕ್​, ಕಾರು. ಹೀಗೆ ಇರುವುದು ಕೂಡ ಮಾಮೂಲಾಗಿಬಿಟ್ಟಿದೆ. ಇವುಗಳ ಸಹವಾಸ ಬಿಟ್ಟು ಮಹಾನಗರಗಳಲ್ಲಿ ಬಸ್​, ಮೆಟ್ರೋ ಏರಿ ಹೋಗುವವರ ಸಂಖ್ಯೆಯೂ ಅಧಿಕವಾಗುತ್ತಿದ್ದರೂ, ದಿನದಿಂದ ದಿನಕ್ಕೆ ಏರುತ್ತಿರುವ ಇವುಗಳ ದರವನ್ನು ನೋಡಿದವರು ಅದಕ್ಕಿಂತ ಸ್ವಂತ ವಾಹನವೇ ಬೆಸ್ಟ್​ ಎಂದುಕೊಂಡು ಪುನಃ ಸ್ವಂತ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಜನರ ಅನುಕೂಲಕ್ಕಾಗಿ ಇರಬೇಕಾಗಿರುವ ಸಾರ್ವಜನಿಕ ವಾಹನಗಳು ಬೇಕಾಬಿಟ್ಟೆ ದರ ಏರಿಸುತ್ತಿರುವುದರಿಂದ ಜನರು ಸ್ವಂತ ವಾಹನ ಬಳಸುವುದು ಅನಿವಾರ್ಯವಾಗಿದ್ದು, ಇದರಿಂದ ಮೊದಲೇ ಹಾಳಾಗಿರುವ ಪರಿಸರ ಮತ್ತಷ್ಟು ಹಾಳಾಗುವಂತೆ ಮಾಡಲಾಗುತ್ತಿದೆ..

ಪರಿಸರದ ಮೇಲಿನ ಕಾಳಜಿಯಿಂದಾಗಿಯೇ ಇದೀಗ ಎಲೆಕ್ಟ್ರಿಕ್​ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಎಲೆಕ್ಟ್ರಿಕಲ್​ ವಾಹನಗಳ ಪ್ರಪಂಚದಲ್ಲಿ ಕ್ರಾಂತಿಕಾರಿ ಬೆಳವಣಿಗೆಯೂ ಆಗುತ್ತಿದೆ. ಅಂಥದ್ದೇ ಮತ್ತೊಂದು ಕ್ರಾಂತಿ ಈಗ ಜಿಯೋ ಮಾಡಿದೆ. ಎಲೆಕ್ಟ್ರಿಕಲ್​ ಕಾರು, ಬೈಕು ಎಲ್ಲವೂ ಆಯ್ತು, ಇದೀಗ ಬೈಸಿಕಲ್​ ಕೂಡ ಎಲೆಕ್ಟ್ರಿಕಲ್​ ಆಗುತ್ತಿದೆ. ಪರಿಸರ ಸಂರಕ್ಷಣೆಯ ಜೊತೆಜೊತೆಗೆ ಆರೋಗ್ಯವನ್ನೂ ರಕ್ಷಿಸುವ ಸಲುವಾಗಿ ಇಂಥದ್ದೊಂದು ನೂತನ ಪ್ರಯೋಗಕ್ಕೆ ಕೈಹಾಕಿದೆ ಜಿಯೋ ಕಂಪೆನಿ.

ಬೆಂಗಳೂರು ಟ್ರಾಫಿಕ್​ ಜಾಮನ್ನು ಹಾಡಿ ಹೊಗಳಿದ ಉದ್ಯಮಿ ಆನಂದ್​ ಮಹೀಂದ್ರಾ: ಕಾರಣ ಅವ್ರ ಬಾಯಲ್ಲೇ ಕೇಳಿ!

ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಡಿಜಿಟಲ್ ಸೇವಾ ಪೂರೈಕೆದಾರ ಕಂಪನಿಯಾದ ಜಿಯೋ ಈಗ ಎಲೆಕ್ಟ್ರಿಕಲ್​ ಬೈಕ್​ ಕ್ಷೇತ್ರಕ್ಕೂ ಕೈಹಾಕಿದ್ದು, ವಿದ್ಯುತ್​ ಚಾಲಿತ ಸೈಕಲ್ ಬಿಡುಗಡೆಗೆ ಮುಂದಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿಲೋ ಮೀಟರ್​ವರೆಗೂ ಇದು ಚಲಿಸಲಿದೆ ಎನ್ನಲಾಗಿದೆ. ಕಂಪೆನಿಯು ಹೇಳಿಕೊಂಡಂತೆ, ಇದು ಹೈಟೆಕ್ ಎಲೆಕ್ಟ್ರಿಕ್ ಸೈಕಲ್ ಆಗಿದೆ. ಪರಿಸರದ ಮೇಲೆ ಕಾಳಜಿಯ ಜೊತೆಗೆ ಆರೋಗ್ಯ ಕಾಪಿಡುವ ಹಾಗೂ ಆರ್ಥಿಕವಾಗಿಯೂ ಜನರಿಗೆ ಹೊರೆಯಾಗದ ರೀತಿಯಲ್ಲಿ ಇದನದ್ನು ರೂಪಿಸಲಾಗಿದೆ. ನಗರದ ಪ್ರದೇಶದಲ್ಲಿ ವಾಸಿಸುವವರಿಗೂ ಇದು ದೊಡ್ಡ ಮಟ್ಟದಲ್ಲಿ ಅನುಕೂಲಕರ ವಾತಾವರಣ ಕಲ್ಪಿಸಲಿದೆ. ಗ್ರಾಮೀಣ ಪ್ರದೇಶದ ನಿವಾಸಿಗಳಿಗೂ ಇದು ಬೆಸ್ಟ್​ ಚಾಯ್ಸ್​ ಆಗಿದೆ ಎನ್ನುವುದು ಜಿಯೋ ಮಾತು.

ಇದು ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ಪೋರ್ಟಿ ಮತ್ತು ಸ್ಟೈಲಿಶ್ ವಿನ್ಯಾಸವನ್ನು ಇದು ಹೊಂದಿದೆ. ಪುರುಷರು ಮಾತ್ರವಲ್ಲದೇ ಮಹಿಳೆಯರಿಗೂ ಅನುಕೂಲ ಆಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸ್ಟೈಲಿಶ್ ಎಲ್‌ಇಡಿ ಲೈಟ್‌ಗಳು, ಡಿಜಿಟಲ್ ಡಿಸ್‌ಪ್ಲೇ ಮತ್ತು ಡೈಮಂಡ್ ಫ್ರೇಮ್ ಜೋಡಿಸಲಾಗಿದ್ದು, ಇದು ಆಕರ್ಷಕ ಲುಕ್​ ನೀಡುತ್ತಿದೆ. ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಲ್ಪಟ್ಟ ಈ ಇ-ಸೈಕಲ್ ಇದಾಗಿದೆ. ಲಿಥಿಯಂ-ಐಯಾನ್ ಬ್ಯಾಟರಿಯನ್ನು ಇದು ಒಳಗೊಂಡಿದೆ. ಇದು ಹಗುರ ಮತ್ತು ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ಕಂಪೆನಿ ಹೇಳಿದೆ.

ಡಿಜಿಟಲ್ ಡಿಸ್‌ಪ್ಲೇ, ಜಿಪಿಎಸ್ ಟ್ರ್ಯಾಕಿಂಗ್, ಸ್ಮಾರ್ಟ್ ಕನೆಕ್ಟಿವಿಟಿ ಮತ್ತು ರಿವರ್ಸ್ ಮೋಡ್‌ನಂತಹ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ವಾಟರ್​ ಪ್ರೂಫ್​ ವಿನ್ಯಾಸ ಮತ್ತು ಶಾಕ್ ಅಬ್ಸಾರ್ಬರ್ ಅಳವಡಿಸಲಾಗಿದ್ದು, ಯಾವುದೇ ರಸ್ತೆಯ ಪರಿಸ್ಥಿತಿಯಲ್ಲಿ ಸುಗಮ ಚಾಲನೆಗೆ ಪರಿಪೂರ್ಣವಾಗಿಸುತ್ತದೆ. ಈ ಸೈಕಲ್ ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಅಪ್ಲಿಕೇಶನ್‌ಗೆ ಸಂಪರ್ಕ ಮತ್ತು ನೈಜ-ಸಮಯದ ಬ್ಯಾಟರಿ ಸ್ಥಿತಿ ನವೀಕರಣಗಳಂತಹ ಹಲವಾರು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೊಂದಾಣಿಕೆ ಮಾಡಬಹುದಾದ ಹ್ಯಾಂಡಲ್‌ಬಾರ್‌ಗಳನ್ನು ಇದು ಒಳಗೊಂಡಿದೆ.

Share This Article
Leave a comment