BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್​ಗೆ ಫುಲ್​ ಕ್ಲಾಸ್​; ಬಾಗಿಲು ಓಪನ್​ ಇದೆ ಎಂದ ಬಾದ್​ ಷಾ!

public wpadmin

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 54ನೇ ದಿನಕ್ಕೆ ಕಾಲಿಟ್ಟಿದೆ. ಈ ಐವತ್ತು ದಿನಗಳಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅದರಲ್ಲೂ ಬಿಗ್​ಬಾಸ್​ ಮನೆಗೆ 50ನೇ ದಿನಕ್ಕೆ ಎಂಟ್ರಿ ಕೊಟ್ಟಿದ್ದ ಸ್ಪರ್ಧಿಗಳು ಸುದ್ದಿಯಲ್ಲಿದ್ದಾರೆ.

ಹೌದು, ಬಿಗ್​ಬಾಸ್​ ಮನೆಗೆ ಹನುಮಂತನ ಬಳಿಕ ಶೋಭಾ ಶೆಟ್ಟಿ ಹಾಗೂ ರಜತ್​​ ಕಿಶನ್​ ಎಂಟ್ರಿ ಕೊಟ್ಟಿದ್ದರು. ಬಿಗ್​ಬಾಸ್​ ಮನೆಗೆ ಬಂದ ದಿನದಲ್ಲೇ ವಿಶೇಷ ಅಧಿಕಾರವನ್ನು ಪಡೆದುಕೊಂಡಿದ್ದರು. ಇದಾದ ಬಳಿಕ ಶೋಭಾ ಶೆಟ್ಟಿ ಅದ್ಭುತವಾಗಿ ಟಾಸ್ಕ್​ ಆಡುವ ಮೂಲಕ ಕಮಾಲ್​ ಮಾಡಿದ್ದರು. ಆದರೆ ರಜತ್​ ಟಾಸ್ಕ್​ವೊಂದನ್ನು ಆಡುವಾಗ ಗೋಲ್ಡ್​ ಸುರೇಶ್​ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು.

https://www.instagram.com/colorskannadaofficial/reel/DCtbGwpxsRQ

ಆದರೆ ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಅವರು ನೇರ ನೇರವಾಗಿ ಅವಾಚ್ಯ ಶಬ್ದಗಳನ್ನು ಬಳಸಿದ ರಜತ್​ಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. ಸದ್ಯ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಅವರು, ರಜತ್​ ಕನ್ನಡದಲ್ಲಿ ತುಂಬಾ ಪದಗಳು ಇವೆ ಮಾತನಾಡೋಕೆ, ಆದರೆ ಕೆಲವೊಂದಕ್ಕೆ ಅದರದ್ದೇ ಆದ ತೂಕಗಳಿವೆ. ಆ ಪದವನ್ನೇ ನನ್ನ ಮುಂದೆ ಹೇಳಿ ಅಂತ ಕೇಳಿದ್ದಾರೆ. ಆಗ ರಜತ್​ ಫುಲ್ ಸೈಲೆಂಟ್ ಆಗಿದ್ದಾರೆ. ಮತ್ತೆ ಕಿಚ್ಚ ಸುದೀಪ್​ ಅವರು ನೆಕ್ಸ್ಟ್ ಟೈಮ್ ಬಾಗಿಲು ಇದೆ ಹೊರಗಡೆ ಹೋಗೋದಕ್ಕೆ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.

Share This Article
Leave a comment