ಬಿಗ್ಬಾಸ್ ಮನೆಯಲ್ಲಿ ಇವತ್ತು ಕಿಚ್ಚನ ಪಂಚಾಯ್ತಿ ನಡೆಯಲಿದೆ. ತಪ್ಪು ಮಾಡಿದ ಯಾವೆಲ್ಲ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ಬಿಗ್ಬಾಸ್ ವೀಕ್ಷಕರು ಫುಲ್ ಎಕ್ಸೈಟ್ ಆಗಿದ್ದಾರೆ. ಇದರ ನಡುವೆ ನಿನ್ನೆ ರಜತ್ ಜೈಲು ಸೇರಿದ ಮೇಲೆ ಮನೆಯಲ್ಲಿ ಏನಾಯ್ತು ಅನ್ನೋದ್ರ ಬಗ್ಗೆ ಪ್ರೊಮೋ ಒಂದನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ.
ವಿಡಿಯೋದಲ್ಲಿ ರಜತ್ ಅವರು, ಬಿಗ್ಬಾಸ್ ಮನೆಯ ಇತರೆ ಸ್ಪರ್ಧಿಗಳನ್ನು ಚೆನ್ನಾಗಿ ಆಟವಾಡಿಸಿದಂತೆ ಕಾಣ್ತಿದೆ. ನಿನ್ನೆಯ ದಿನ ರಜತ್ ಬಿಗ್ಬಾಸ್ ಮನೆಯಲ್ಲಿರುವ ಜೈಲು ಸೇರಿದ್ದಾರೆ. ಕಳಪೆ ಮತ್ತು ಉತ್ತಮ ವಿಚಾರದಲ್ಲಿ ಬಹುತೇಕ ಸ್ಪರ್ಧಿಗಳು ರಜತ್ ಅವರ ಹೆಸರನ್ನು ತೆಗೆದುಕೊಂಡರು. ಪರಿಣಾಮ ರಜತ್ ಬೇಸರದಲ್ಲಿ ಜೈಲಿಗೆ ಹೋಗಿದ್ದಾರೆ.
https://twitter.com/i/status/1860140590127808647
ಜೈಲು ಸೇರಿದ ರಜತ್ಗೆ ಶಿಕ್ಷೆಯ ಮುಂದುವರಿದ ಭಾಗವಾಗಿ ಅಡುಗೆಗೆ ಬೇಕಾಗಿದ್ದ ತರಕಾರಿಗಳನ್ನು ಕಟ್ ಮಾಡಿಕೊಡಬೇಕಿತ್ತು. ಅಂತೆಯೇ ನಿರ್ಗಮಿತ ಕ್ಯಾಪ್ಟನ್ ಭವ್ಯಗೌಡ ಅವರು ಅಡುಗೆಗೆ ಬೇಕಾದ ತರಕಾರಿಗಳನ್ನು ಕಟ್ ಮಾಡುವಂತೆ ರಜತ್ಗೆ ನೀಡುತ್ತಾರೆ. ಅದಕ್ಕೆ ತಿರುಗೇಟು ನೀಡಿರುವ ರಜತ್, ನಾನು ಕಟ್ ಮಾಡುತ್ತೇನೆ, ಆದರೆ ಎರಡು ಗಂಟೆ ಕಾಯಬೇಕು. ಅದು ಕೂಡ ನನಗೆ ಹೆಂಗೆ ಬೇಕೋ ಹಾಗೆ ಕಟ್ ಮಾಡ್ತೇನೆ. ನನಗೆ ಕಳಪೆ ಕೊಡ್ತಾರೆ, ಕಾಯಿರಿ. ನನಗೆ ಅನಿಸಿದಾಗ ಕಟ್ ಮಾಡಿಕೊಡ್ತೀನಿ.. ಏನ್ ಮಾಡ್ತೀರಿ ಇವಾಗ? ಏನೂ ಮಾಡೋಕೆ ಆಗಲ್ಲ. ನಂಗೂ ಹೊಟ್ಟೆ ಉರಿತಾ ಇಲ್ವಾ? ಎಂದು ತಮಾಷೆ ಮಾಡಿದ್ದಾರೆ.