ಮನರಂಜನೆಯ ಹಬ್ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪಾಯಿಂಟ್ಸ್ಗಾಗಿ ಕಿತ್ತಾಟ ಶುರುವಾಗಿದೆ. ಭವ್ಯಗೌಡ ಹಾಗೂ ಶೋಭಾ ಶೆಟ್ಟಿ ನಾಯಕತ್ವದಲ್ಲಿ ಎರಡು ತಂಡಗಳನ್ನು ಬಿಗ್ಬಾಸ್ ಮಾಡಿದ್ದಾರೆ.
ಎರಡು ತಂಡಗಳಿಗೆ ಪಾಯಿಂಟ್ಸ್ ಗಳಿಸಲು ಬಿಗ್ಬಾಸ್ ಟಾಸ್ಕ್ಗಳನ್ನು ನೀಡುತ್ತಿದ್ದಾರೆ. ನಿನ್ನೆ ನಡೆದ ಟಾಸ್ಕ್ನಲ್ಲಿ ಭವ್ಯಗೌಡ ನೇತೃತ್ವದ ತಂಡ ಹಣ ಗಳಿಸಿದೆ. ಇದೀಗ ಎದುರಾಳಿ ಸ್ಪರ್ಧಿಗಳ ಹಣವನ್ನು ಕಿತ್ತುಕೊಳ್ಳುವುದು ಚಾಲ್ತಿಯಲ್ಲಿದೆ. ಇದೇ ವಿಚಾರಕ್ಕೆ ಐಶ್ವರ್ಯ ಹಾಗೂ ಚೈತ್ರಾ ನಡುವೆ ಗಲಾಟೆಯಾಗಿದೆ.
https://twitter.com/i/status/1859416441537298733
ಕಲರ್ಸ್ ಕನ್ನಡ ಶೇರ್ ಮಾಡಿರುವ ವಿಡಿಯೋದಲ್ಲಿ ಚೈತ್ರಾ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಐಶ್ವರ್ಯ ನೀವು ಲೋ ಲೇವಲ್ಗೆ ಇಳಿದಿದ್ದಾರೆ ಎಂದೆಲ್ಲ ಮಾತನಾಡಬೇಡಿ ಎನ್ನುತ್ತಾರೆ. ಅದಕ್ಕೆ ಚೈತ್ರಾ ನಾನು ಗುಂಪುಗಾರಿಕೆ ಮಾಡಿಕೊಂಡು ಕುತಂತ್ರವನ್ನು ನಾನು ಮಾಡಲ್ಲ. ಇಬ್ಬರ ಮಧ್ಯೆ ವಾಗ್ಯುದ್ಧ ನಡೆದಿದೆ. ಈ ವೇಳೆ ಚೈತ್ರಾ ಈಗ ಗೊತ್ತಾಯ್ತಲ್ವಾ ಡ್ರಾಮಾ ಕ್ವೀನ್ ಯಾರು ಎನ್ನುತ್ತಾರೆ.
ಅದಕ್ಕೆ ಕೋಪಿಸಿಕೊಂಡ ಐಶ್ವರ್ಯ ಹೌದು, ನಾನು ಡ್ರಾಮಾ ಕ್ವೀನ್ ಎಂದು ಜೋರಾಗಿ ಕಿರುಚುತ್ತಾರೆ. ಅದಕ್ಕೆ ಚೈತ್ರಾ, ನಾನು ಇನ್ಮೇಲೆ ಆಟ ಶುರು ಮಾಡ್ತೀನಿ. ಗುಂಪು ಕಟ್ಟಿಕೊಂಡು ಪ್ಲಾನ್ ಮಾಡಿಕೊಂಡು ಬರಲ್ಲ. ಸಿಂಗಲ್ ಸಿಂಹ ರೀತಿ ಹೊಡೆಯುತ್ತೇನೆ ಎಂದು ಡೈಲಾಗ್ ಹೊಡೆದಿದ್ದಾರೆ. ಶೋಭಾ ಶೆಟ್ಟಿ ನಾಯಕತ್ವದ ಕೆಂಪು ಟೀಮ್‌ನಲ್ಲಿ ಹನುಮಂತ, ಧನರಾಜ್ ಆಚಾರ್, ಗೌತಮಿ ಜಾಧವ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್ ಕಿಶನ್ ಇದ್ದರೆ ಭವ್ಯಾ ಗೌಡ ಅವರ ನೀಲಿ ಟೀಮ್‌ನಲ್ಲಿ ಗೋಲ್ಡ್ ಸುರೇಶ್, ಧರ್ಮ ಕೀರ್ತಿರಾಜ್, ಶಿಶಿರ್ ಶಾಸ್ತ್ರಿ, ತ್ರಿವಿಕ್ರಮ್, ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಇದ್ದಾರೆ. ಈ ಎರಡು ತಂಡಗಳ ಸದಸ್ಯರ ಬಳಿ ಪಾಯಿಂಟ್ಸ್ ಇದ್ದು, ಅದನ್ನು ಕಿತ್ತುಕೊಳ್ಳುವ ಆಟ ಈಗ ಚಾಲ್ತಿಯಲ್ಲಿದೆ.