ಎಆರ್ ರೆಹಮಾನ್ 23ನೇ ವಯಸ್ಸಿನಲ್ಲಿ ಧರ್ಮ ಬದಲಾಯಿಸಿದ್ದು ಯಾಕೆ? ಅಸಲಿ ಕಾರಣ ಏನು?

public wpadmin

ಆಸ್ಕರ್-ವಿಜೇತ ಹಾಗೂ ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಇದೀಗ ಪತ್ನಿ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಹಿಂದೂವಾಗಿದ್ದ ಇವರು ರೆಹಮಾನ್ ಆಗಿದ್ದು ಹೇಗೆ? ಕಾರಣ ಏನು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ. ಈ ಸುದ್ದಿ ಅಭಿಮಾನಿಗಳನ್ನ ಬೆಚ್ಚಿ ಬೀಳಿಸಿದೆ.

ಮದುವೆಯಾಗಿ 29 ವರ್ಷಗಳ ಬಳಿಕ ಎ ಆರ್ ರೆಹಮಾನ್, ಪತ್ನಿ ಸೈರಾ ಬಾನುಗೆ ವಿಚ್ಛೇದನ ನೀಡಿದ್ದಾರೆ. ಈ ಸಂಬಂಧ ಸೈರಾ ಪರ ವಕೀಲರು ಪತ್ರ ಬರೆದು ವಿಚ್ಛೇದನಕ್ಕೆ ಕಾರಣ ನೀಡಿದ್ದಾರೆ. ಇದೇ ವೇಳೆ ಎಆರ್ ರೆಹಮಾನ್ ಅವರಿಗೆ ಸಂಬಂಧಿಸಿದ ವಿಚಾರಗಳು ಸುದ್ದಿ ಆಗಿದೆ. ಮುಸ್ಲಿಂ ಧರ್ಮಕ್ಕೆ ಎಆರ್ ರೆಹಮಾನ್ ಮಂತಾತಗೊಂಡು ಹಲವು ವರ್ಷಗಳೇ ಕಳೆದು ಹೋಗಿದೆ.

ದಿಲೀಪ್ ಕುಮಾರ್ (ರೆಹಮಾನ್) ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಹಿಂದೂ ಮತ್ತು ತಾಯಿ ಮುಸ್ಲಿಂ ಆಗಿದ್ರು. ಆ ಸಮಯದಲ್ಲಿ ಅವರ ಇಡೀ ಕುಟುಂಬ ಹಿಂದೂ ಧರ್ಮವನ್ನು ಅನುಸರಿಸಿತು. ಆದರೆ 1984 ರಲ್ಲಿ ದಿಲೀಪ್ ಕುಮಾರ್ ತಮ್ಮ ತಾಯಿಯೊಂದಿಗೆ ಇಸ್ಲಾಂಗೆ ಮತಾಂತರಗೊಂಡರು. ದಿಲೀಪ್ ಕುಮಾರ್ ಆಗಿದ್ದವರು ಅಲ್ಲಾ ರಖಾ ರೆಹಮಾನ್ (ಎಆರ್ ರೆಹಮಾನ್) ಆಗಿ ಬದಲಾದ್ರು. ತನ್ನ ಧರ್ಮವನ್ನು ಬದಲಾಯಿಸಲು ಘಟನೆಯೊಂದು ಕಾರಣವಾಗಿತ್ತು ಎನ್ನಲಾಗ್ತಿದೆ.

ಎಆರ್ ರೆಹಮಾನ್ ಅವರ ತಂದೆ ಆರ್ ಕೆ ಶೇಖರ್ ಮಲಯಾಳಂ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ರೆಹಮಾನ್ ಬಾಲ್ಯವು ಹೋರಾಟದಿಂದ ತುಂಬಿತ್ತು. ರೆಹಮಾನ್ ಕೇವಲ ಒಂಬತ್ತು ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು. ಇದಾದ ನಂತರ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಯ್ತು.

ಮನೆಯಲ್ಲಿದ್ದ ಸಂಗೀತ ವಾದ್ಯಗಳನ್ನು ಮಾರಬೇಕಾದ ಸ್ಥಿತಿ ಬಂದಿತ್ತು. ಬಳಿಕ ತನ್ನೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ್ರು. ಎಆರ್ ರೆಹಮಾನ್ ತನಗಾಗಿಯೇ ಬೇರೆಯದೇ ಜಾಗವನ್ನು ಸೃಷ್ಟಿಸಿಕೊಂಡರು. ಎಆರ್ ರೆಹಮಾನ್ ತಮ್ಮ 11ನೇ ವಯಸ್ಸಿನಲ್ಲಿ ಗೆಳೆಯ ಶಿವಮಣಿ ಅವರೊಂದಿಗೆ ‘ರೆಹಮಾನ್ ಬ್ಯಾಂಡ್ ರೂಟ್ಸ್’ ಆರಂಭಿಸಿದರು. ಇದರಲ್ಲಿ ಅವರು ಸಿಂಥಸೈಜರ್ ನುಡಿಸಲು ಪ್ರಾರಂಭಿಸಿದರು. ಅದರೊಂದಿಗೆ ಅವರು ಪ್ರಸಿದ್ಧ ಚೆನ್ನೈ ಬ್ಯಾಂಡ್ ‘ನೆಮೆಸಿಸ್ ಅವೆನ್ಯೂ’ ಅನ್ನು ರಚಿಸಿದರು. ಲಂಡನ್‌ನ ಟ್ರಿನಿಟಿ ಕಾಲೇಜಿನಿಂದ ವಿದ್ಯಾರ್ಥಿವೇತನವನ್ನು ಪಡೆದ ನಂತರ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತವನ್ನು ಅಧ್ಯಯನ ಮಾಡಿದ್ರು.  

ರೆಹಮಾನ್ 1992 ರಲ್ಲಿ ನಿರ್ದೇಶಕ ಮಣಿರತ್ನಂ ಅವರ ರೋಜಾ ಸಿನಿಮಾ ಮೂಲಕ ಮೊದಲ ಬ್ರೇಕ್ ಪಡೆದರು. ಈ ಚಿತ್ರದ ಸಂಗೀತವು ರೆಹಮಾನ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಚೊಚ್ಚಲ ಚಿತ್ರಕ್ಕಾಗಿ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ್ರು. ಇದರ ನಂತರ, ರೆಹಮಾನ್ ತಮ್ಮ ಅದ್ಭುತ ಸಂಗೀತ ಶೈಲಿಯಿಂದ ಬಾಲಿವುಡ್ನಿಂದ ಹಾಲಿವುಡ್ ಗೆ ಅಳಿಸಲಾಗದ ದಾಖಲೆ ಮಾಡಿದ್ದಾರೆ. .

ಸೂಫಿ ಸಂತರೊಬ್ಬರ ಸೂಚನೆಯಂತೆ ಎಆರ್ ರೆಹಮಾನ್ 23ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡು ಅಲ್ಲಾ ರಹಾ ರಹಮಾನ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಕಷ್ಟಪಡುತ್ತಾ ಒಂದೊಂದೆ ಮೆಟ್ಟಿಲುಗಳನ್ನು ಏರಿ ರೆಹಮಾನ್ ಇದೀಗ ಭಾರತ ಶ್ರೀಮಂತ ಮ್ಯೂಸಿಕ್ ಡೈರೆಕ್ಟರ್ ಆಗಿ ಬೆಳೆದಿದ್ದಾರೆ.
ಸೂಫಿ ಸಂತರೊಬ್ಬರ ಸೂಚನೆಯಂತೆ ಎಆರ್ ರೆಹಮಾನ್ 23ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡು ಅಲ್ಲಾ ರಹಾ ರಹಮಾನ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಕಷ್ಟಪಡುತ್ತಾ ಒಂದೊಂದೆ ಮೆಟ್ಟಿಲುಗಳನ್ನು ಏರಿ ರೆಹಮಾನ್ ಇದೀಗ ಭಾರತ ಶ್ರೀಮಂತ ಮ್ಯೂಸಿಕ್ ಡೈರೆಕ್ಟರ್ ಆಗಿ ಬೆಳೆದಿದ್ದಾರೆ.

Share This Article
Leave a comment