ಇಂದಿನ ರಾಶಿ ಭವಿಷ್ಯ
20-11-2024, ಬುಧವಾರ
ಮೇಷ
ನಿಮ್ಮ ರಹಸ್ಯವು ಬೆಳಕಿಗೆ ಬರಬಹುದು ಎಂಬ ಭೀತಿಯು ಇರಲಿದೆ. ದುರಭ್ಯಾಸಗಳು ನಿಮಗೆ ಅಪಕೀರ್ತಿ ತರಬಹುದು. ಯಾವುದನ್ನೇ ಒಪ್ಪಿಕೊಳ್ಳುವುದಾದರೂ ನಿಮಗೆ ಬಲವಾದ ಕಾರಣ ಬೇಕಾಗುತ್ತದೆ. ಇಂದು ನಿಮ್ಮ ವ್ಯಾಪಾರದಲ್ಲಿ ಕಠಿಣ ಶ್ರಮವಿದ್ದೂ ಕಡಿಮೆ ಲಾಭವನ್ನು ಪಡೆಯಬೇಕಾಗುವುದು. ಇಂದಿನ ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ. ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಪುಣ್ಯಸ್ಥಳಕ್ಕೆ ಕಾರಣಾಂತರಗಳಿಂದ ಹೋಗಲಾಗದು. ಪಾಲುದಾರಿಕೆಯಲ್ಲಿ ಅಧಿಕಾರದ ಬಗ್ಗೆ ಅಸಮಾಧಾನ ಹೆಚ್ಚಾಗುವುದು. ಪುರುಷ ಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜತೆ ಆಪ್ತವಾದ ಮಾತುಕತೆ ಇರಲಿದೆ. ಇಂದು ನಿಮಗೆ ಸಾಕಷ್ಟು ಸಮಯ ಇರಲಿದ್ದು ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯುವಿರಿ. ಏನಾದರೂ ಸಹಾಯವನ್ನು ನಿಮ್ಮ ಬಳಿ ಪರಿಚಿತರು ಕೇಳಿಬರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ.
ವೃಷಭ
ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ಸರಿಯಾದ ಸಮಯಕ್ಕೆ ಸೂಕ್ತವಾದ ಕೆಲಸವು ಆಗಿಬಿಡುವುದು. ಯಾವುದನ್ನೇ ಪಡೆಯುವುದಿದ್ದರೂ ಸುಲಭಕ್ಕೆ ಸಿಕ್ಕುವುದಿಲ್ಲ. ಕುಟುಂಬಕ್ಕೆ ಅಗತ್ಯವಾದ ಪದಾರ್ಥಗಳನ್ನು ಖರೀದಿಸುವಿರಿ. ನಿಮಗಾಗಿ ಕಾಯುವವರಿಗೆ ನೀವಿಂದು ಬೇಸರ ತರಿಸಬಹುದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಎಲ್ಲರೆದುರು ಮುಖಭಂಗವನ್ನು ಎದುರಿಸಬೇಕಾದೀತು. ವೈವಾಹಿಕ ಜೀವನದ ಕನಸು ಕಾಣುವಿರಿ. ನಿಮ್ಮ ದೂರಾಲೋಚನೆಯು ವಾಸ್ತವಕ್ಕೆ ಹತ್ತಿರವಾಗಿ ಇಲ್ಲ. ಏನನ್ನಾದರೂ ಸಾಧಿಸಬೇಕು ಎನ್ನುವ ಕ್ಷಣಕಾಲವಿದ್ದು ಮರೆಯಾಗುವುದು. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು.
ಮಿಥುನ
ಆತ್ಮೀಯತೆಯಿಂದ ಮನಸ್ಸಿಗೆ ಬಾಧೆ ಬರುವುದು. ಸಾಲವನ್ನು ತೀರಿಸಲು ಮತ್ತೊಂದು ಸಾಲವನ್ನು ಮಾಡಬೇಕಾಗುವುದು. ಇಂದು ನೀವು ಮನೆಯ ಹಿರಿಯರಿಗೆ ಗೌರವ ತರುವ ಕಾರ್ಯವನ್ನು ಮಾಡುವಿರಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಒಬ್ಬರಿಗೆ ಸಹಾಯ ಮಾಡಿದರೆ ಮತ್ತೊಬ್ಬರಿಗೆ ತೊಂದರೆ. ನೂತನ ವಾಹನದ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ಹಿತಶತ್ರು ನಿಮ್ಮ ಪತನವನ್ನೇ ನಿರೀಕ್ಷಿಸುತ್ತ ಕುಳಿತಿರುವರು. ವೈವಾಹಿಕ ಜೀವನ ಆರಂಭದ ದಿನಗಳಲ್ಲಿ ಸಂತೋಷವೇ ಇರುವುದು. ಪರಸ್ಪರ ದುಃಖವನ್ನು ಹಂಚಿಕೊಂಡು ದಂಪತಿಗಳು ಹಗುರಾಗುವುದು. ವಾಹನ ವ್ಯವಸ್ಥೆಯಿಂದ ಅನನಕೂಲವಾಗುವ ಸಾಧ್ಯತೆ ಇದೆ. ಆಸ್ತಿಯ ವಿಚಾರಕ್ಕೆ ದಾಯಾದಿ ಕಲಹವಾಗಬಹುದು. ನಿಮ್ಮವರ ಪ್ರೀತಿಗೆ ನೀವು ಮನಸೋಲುವಿರಿ.
ಕರ್ಕಾಟಕ
ಇಂದಿನ ಕೆಲಸವನ್ನು ಅಶಿಸ್ತಿನಿಂದ ಮಾಡಿ ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಹಳೆಯ ವ್ಯವಸ್ಥೆಗೆ ನೀವು ಪುನಃ ಹೋಗಬೇಕಾಗಬಹುದು. ಪಾಲುದಾರಿಕೆಯನ್ನು ಬಿಡುವ ಆಲೋಚನೆ ಬರಬಹುದು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಆಭರಣ ಮುಂತಾದ ಬಹು ಮೌಲ್ಯದ ವಸ್ತುವನ್ನು ಖರೀದಿಸುವಿರಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ಸಮಾಚಾರ ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜತೆ ಮಾತನಾಡಿ ನೆಮ್ಮದಿ ಪಡೆಯುವಿರಿ. ನಿಮ್ಮ ದೂರ ಪ್ರಯಾಣಕ್ಕೆ ಕುಟುಂಬದಿಂದ ಒಪ್ಪಿಗೆ ಸಿಗದು. ಇನ್ನೊಬ್ಬರ ನೋವಿಗೆ ಸ್ಪಂದಿಸುವ ನಿಮ್ಮ ಗುಣವು ಮೆಚ್ಚುಗೆಯಾಗಿ ಇದೇ ಪ್ರೀತಿಗೆ ದಾರಿ ಮಾಡಿಕೊಡಬಹುದು. ನಿಮಗೆ ಸಿಕ್ಕ ವ್ಯಕ್ತಿಗಳನ್ನು ಉಳಿಸಿಕೊಳ್ಳಿ. ಇನ್ನೊಬ್ಬರ ಜತೆ ಸಂಬಂಧ ಬೆಳೆಸುವಿರಿ.
ಸಿಂಹ
ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಬಂಧುಗಳ ಜತೆ ಆಕಸ್ಮಿಕವಾಗಿ ಮನಸ್ತಾಪ ಕಾಣಿಸೀತು. ವಿವಾಹದ ಕಾರಣಕ್ಕೆ ನಿಮಗೆ ಕೋಪ ಬರುವ ಸಾಧ್ಯತೆ ಇದೆ. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲಾಗದೇ ಬೇಸರವಾವುವುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಸುಧಾರಿಸಿದ ಆರೋಗ್ಯವು ನಿಮಗೆ ಉತ್ಸಾಹವನ್ನು ನೀಡುತ್ತದೆ. ಜೀವನದ ಆಕಸ್ಮಿಕ ತಿರುವುಗಳಿಗೆ ನೀವು ಚಿಂತೆಗೆಡುವುದಿಲ್ಲ. ಹಣದ ಉಳಿತಾಯಕ್ಕೆ ಉಪಾಯದ ಅಗತ್ಯವು ಕಾಣಿಸಿಕೊಳ್ಳುವುದು. ಅಧ್ಯಯನದಲ್ಲಿ ಚುರುಕುತನ ಬೇಕು. ಉದ್ಯೋಗದ ಕೆಲವು ರಹಸ್ಯಗಳನ್ನು ನೀವು ಇಂದು ತಿಳಿದುಕೊಳ್ಳುವಿರಿ. ವಿಷಯಾಸಕ್ತಿಯು ಇಂದು ಅಧಿಕವಾಗಿ ಇರುವುದು. ನಿಮ್ಮ ಇಂದಿನ ಕೆಲಸಗಳು ಬೇಗನೆ ಮುಕ್ತಾಯವಾಗುವುದು.
ಕನ್ಯಾ
ಉದ್ಯೋಗದಲ್ಲಿ ಯಾರದೋ ಕಾರಣಕ್ಕೆ ಅತಂತ್ರ ಸ್ಥಿತಿ ಬರಬಹುದು. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮನಸ್ಸು ಸ್ವಸ್ಥವಾಗಿ ಇರದು. ಮಕ್ಕಳ ಕಾರಣದಿಂದ ನಿಮಗೆ ಕೆಟ್ಟ ಮಾತನ್ನು ಕೇಳಬೇಕಾದೀತು. ಅಪರಿಚಿತರ ಕರೆಯು ನಿಮ್ಮನ್ನು ಹೆದರಿಸಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಇಂದು ನಿಮಗೆ ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ಬೆಂಕಿಯ ಸಣ್ಣ ಕಿಡಿಯಾದರೂ ಅದು ಇರುವಲ್ಲಿಯೇ ಇರಬೇಕು. ನಿಮ್ಮ ವ್ಯವಹಾರದಲ್ಲಿ ಹೊಸ ಬದಲಾವಣೆಯನ್ನು ಮಾಡಲು ನೀವು ಯೋಚಿಸುತ್ತಿದ್ದರೆ ಯಶಸ್ವಿಯಾಗುವಿರಿ. ಕೌಶಲವನ್ನು ಎಲ್ಲರ ಮುಂದೂ ತೋರಿಸಲಾರಿರಿ. ಎಲ್ಲವನ್ನೂ ತಿಳಿದೂ ನೀವು ಸುಮ್ಮನಿರುವುದು ಇಷ್ಟವಾಗದು. ಅಧಿಕಾರಿಗಳ ವರ್ಗದಿಂದ ಗೌರವ ಸಿಗಬಹುದು. ನಿಮ್ಮವರಿಗೆ ನಿಮ್ಮ ಸರಿಯಾದ ಪರಿಚಯ ಆಗದು. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ.
ತುಲಾ
ಇಂದು ನೀವು ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಿಟ್ಟನ್ನು ಕಡಿಮೆ ಮಾಡಿಸುವಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು. ಸಾಮಾಜಿಕವಾದ ನ್ಯಾಯ ಪಡೆಯಲು ಹೋರಾಟ ಮಾಡಬೇಕಾಗುವುದು. ಮುಂದೆ ಬರುವ ಅವಕಾಶಕ್ಕೆ ಈಗಲೇ ಉದ್ಯೋಗವನ್ನು ಕೈಚೆಲ್ಲಿ ಕುಳಿತಿರುವುದು ಮೂರ್ಖತನವಾದೀತು. ವ್ಯಾವಹಾರಿಕ ಒಪ್ಪಂದವು ಕೊನೆಯ ಹಂತದಲ್ಲಿ ಇದ್ದು ಕೆಲವು ಅಸಮಾಧಾನಕರ ಮಾತನ್ನು ಕೇಳಬೇಕಾದೀತು. ನ್ಯಾಯಾಲಯದ ಮಾತಿಗೆ ನೀವು ತಲೆಬಾಗುವಿರಿ. ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ನಿಮ್ಮ ಸದ್ಭಾವವನ್ನು ಇತರರು ಆಡಿಕೊಳ್ಳಬಹುದು.
ವೃಶ್ಚಿಕ
ಇಂದು ನಿಮ್ಮ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ಒಂದು ವೇಳೆ ಕರಲ ಪೂರ್ಣ ಮಾಡಲು ಪ್ರಯತ್ನಿಸಿದರೂ ಯಶಸ್ವಿಯಾಗದು. ನೀವು ಇತರರಿಂದ ಗೌರವಕ್ಕೆ ಪಾತ್ರರಾಗುವಿರಿ. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಬಹುದು. ಮೊದಲು ದೃಷ್ಟಿ ಇಟ್ಟು, ನಂತರ ಹೆಜ್ಜೆ ಇಡಿ. ಉದ್ಯೋಗದ ಒತ್ತಡವು ಮನೆಯಲ್ಲಿ ನೆಮ್ಮದಿಯಿಂದ ಇರಲು ಬಿಡದು. ಎಲ್ಲವನ್ನೂ ನಿಮ್ಮ ನೇರಕ್ಕೆ ತರುವುದು ಕಷ್ಟವಾದೀತು. ಸುಪ್ತಪ್ರಜ್ಞೆಯು ಮುಂದಾಗುವುದನ್ನು ತಿಳಿಸುವುದು. ಉದ್ವೇಗದ ಸಂದರ್ಭದಲ್ಲಿ ಕಳವಳಗೊಂಡರೆ ಅಧ್ವಾನವಾಗಬಹುದು. ನಿಮ್ಮ ಸಂಶೋಧನೆಗೆ ನಿರ್ದಿಷ್ಟ ಗುರಿಯ ಅವಶ್ಯಕತೆ ಇರಲಿದೆ. ಆಸ್ತಿಯ ವಿಚಾರವಾಗಿ ತಂದೆಯ ಕಡೆಯಿಂದ ನಿಮಗೆ ಸಿಂಹಪಾಲು ಸಿಗುವುದು.
ಧನುಸ್ಸು
ಯಾರೋ ಮಾಡಿದ ಸಾಲವು ನಿಮಗೆ ಶೂಲವಾಗಬಹುದು. ಇತರರ ಬೆಂಬಲವಿರುವ ಕಾರಣ ವ್ಯಾಪಾರದ ಹಿನ್ನಡೆಗೆ ಅಂಜಲಾರಿರಿ. ನಿಮ್ಮ ಮಾತು ಅಹಂಕಾರದಂತೆ ಕೇಳಿಸುವುದು. ಸಂಯಮವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಎಲ್ಲವನ್ನೂ ಅನುಮಾನ ದೃಷ್ಟಿಯಿಂದ ನೋಡುವ ಅಭ್ಯಾಸ ಬೇಡ. ಹಿಂದೆ ಮಾಡಿದ ಖರ್ಚಿನ ತಪ್ಪಿಗೆ ಇಂದು ತಿಳಿವಳಿಕೆ ಬರಬಹುದು. ನಿಮಗೆ ನಿಮ್ಮ ಹಳೆಯ ಜವಾಬ್ದಾರಿಯ ಪದವಿಯೇ ಸಿಗಲಿದೆ. ಒತ್ತಡದಿಂದ ಹೊರಬರಲು ಮಾರ್ಗವು ಸಿಗಲಿದೆ. ಇಂದು ನಿಮ್ಮ ಸಂಗಾತಿಯನ್ನು ಖರೀದಿಗೆ ಕರೆದೊಯ್ಯುವಿರಿ. ನೀವು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ಕೆಲವು ಮಾಹಿತಿಯನ್ನು ಪಡೆದುಕೊಳ್ಳುವಿರಿ. ಹೆಣ್ಣು ಮಕ್ಕಳು ತಾಯಿಯಿಂದ ಲಾಭವನ್ನು ಪಡೆಯುವರು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹೆಚ್ಚಾದೀತು. ನಿಮ್ಮ ವೃತ್ತಿಯು ನಿಮಗೆ ಸಂತೋಷವನ್ನು ಕೊಡದೇ ಇರುವುದು. ಕೆಲವನ್ನು ನೀವು ಸರಳವಾಗಿ ಮಾಡಿಕೊಳ್ಳುವುದು ಉತ್ತಮ.
ಮಕರ
ಯಾವುದೋ ಯೋಚನೆಯಲ್ಲಿ ಮತ್ತೇನನ್ನೋ ಮಾಡಿಕೊಳ್ಳುವಿರಿ. ಇಂದಿನ ನಿಮ್ಮ ಅನಾರೋಗ್ಯದಿಂದ ವ್ಯಾಪಾರದಲ್ಲಿ ಉತ್ಸಾಹ ಕಡಿಮೆ ಆಗಲಿದೆ. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಹಣಕಾಸಿನ ವ್ಯವಹಾರದಲ್ಲಿ ಇಂದು ಎಲ್ಲರಿಂದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಯಾರಿಗೋ ನಿಮ್ಮಿಂದ ಹಣವು ಕೈತಪ್ಪಿ ಹೋಗಬಹುದು. ಸಂಗಾತಿಯ ಜತೆ ಒಡನಾಟವು ಹೆಚ್ಚಿರಲಿದೆ. ಇಂದು ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವಿರಿ. ತಂದೆಯ ಶ್ರಮವನ್ನು ಕಂಡು ಮಕ್ಕಳು ನೋಯುವರು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ನಿಮ್ಮ ಕೆಲಸದ ಬಗ್ಗೆ ನೀವೇ ಹೇಳಿಕೊಳ್ಳುವಿರಿ. ನೀವು ಎಲ್ಲರ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರ ಮಾಡುವಿರಿ. ಬಂಧುಗಳ ಭೇಟಿಯಿಂದ ಸಂತೋಷ ಸಿಗಲಿದೆ. ಇಂದು ಸಂಗಾತಿಯ ಪ್ರೀತಿಯಿಂದ ವಂಚಿತರಾಗುವಿರಿ.
ಕುಂಭ
ಕುಟುಂಬದ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಧರವನ್ನು ತೆಗೆದುಕೊಳ್ಳದೇ ಎಲ್ಲರ ಅಭಿಪ್ರಾಯವನ್ನು ಪಡೆದು ಮುಂದುವರಿಯಿರಿ. ನಿಮ್ಮ ಕೆಲಸವು ಅನೇಕರಿಗೆ ಉಪಯೋಗವಾಗಬಹುದು. ಮಂಗಲ ಸಂದರ್ಭವು ನಿಮಗೆ ಅನಿರೀಕ್ಷಿತವಾಗಿ ಬರಬಹುದು. ಅದನ್ನು ಪೂರ್ಣ ಮನಸ್ಸಿನಿಂದ ಸ್ವೀಕರಿಸಿ. ನಿಮ್ಮ ಭಾವನೆಗಳನ್ನು ಇತರರು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. ರಾಜಕಾರಣಿಗಳಿಗೆ ತೊಳಲಾಟವು ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ಕುಟುಂಬದ ನೇರ ಮಾತುಗಳು ನಿಮಗೆ ಸಹಿಸಲು ಶಕ್ಯವಾಗದೇ ಬೇಸರಿಸುವಿರಿ. ಊಹಿಸಿದಷ್ಟು ಮಾರ್ದವವು ಸಂಗಾತಿಯ ಸ್ವಭಾವದಲ್ಲಿ ಇರದು. ತಾಳ್ಮೆಯಿಂದ ನೀವು ಜಯಿಸುವಿರಿ. ಸ್ವತಂತ್ರ ನಿರ್ಧಾರವು ನಿಮಗೆ ಭಯ ಹುಟ್ಟಿಸೀತು. ಯಂತ್ರೋಪಕರಣಗಳು ದುರಸ್ತಿಗೆ ಬರಬಹುದು. ಯಾರಿಂದಲಾದರೂ ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು.
ಮೀನ
ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು. ಸಂಗಾತಿಯ ನೋವಿಗೆ ಸ್ಪಂದಿಸಲು ಕಷ್ಟವಾದೀತು. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮ್ಮೊಳಗೆ ಆತಂಕ ಸೃಷ್ಟಿಸುವುದು. ಮಾನಸಿಕವಾಗಿ ಆಗುವ ಸಣ್ಣ ಬಾಧೆಗಳಿಗೆ ಅತಿಯಾದ ಲಕ್ಷ್ಯ ಬೇಡ. ನಿರ್ಲಕ್ಷ್ಯವೇ ಅದರ ಧ್ಯೇಯವಾಗಲಿ. ಸಾಲದಿಂದ ಸ್ವಲ್ಪ ಸಮಾಧಾನ ಸಿಗಲಿದೆ. ಇದು ನಿಮ್ಮ ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮವನ್ನು ಕೊಡುವುದು. ನಿಮಗೆ ಸಂಬಂಧಿಸದ ವಿಚಾರಕ್ಕೆ ನೀವು ಮಧ್ಯ ಪ್ರವೇಶ ಮಾಡುವುದು ಬೇಡ. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವುದು ಉಚಿತ. ಮಕ್ಕಳ ತಿರುಗಾಟವನ್ನು ಕಡಿಮೆ ಮಾಡಲು ಹೇಳುವಿರಿ. ಸರಿಯಾದ ಸಮಯಕ್ಕೆ ಆಹಾರವನ್ನು ಸ್ವೀಕರಿಸಿ. ಪ್ರಯಾಣದ ಆಯಾಸವು ವಿಶ್ರಾಂತಿಯಿಂದ ದೂರಾಗುವುದು.