ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 8ನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಕಿಚ್ಚ ಸುದೀಪನ ಎಂಟ್ರಿಯಾಗಿದೆ. ವಾರದ ಕತೆ ನಡೆಸಿಕೊಡಲು ಕಿಚ್ಚ ಸುದೀಪ್ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಇಡೀ ವಾರ ಬಿಗ್ಬಾಸ್ ಮನೆಯಲ್ಲಿ ಏನೆಲ್ಲಾ ಆಯ್ತು? ಈ ವಾರದ ಬೆಸ್ಟ್ ಯಾರು, ಈ ವಾರ ಅತಿ ಕಳಪೆ ಆಟ ಆಡಿದ ಸ್ಪರ್ಧಿಗಳು ಯಾರು ಅಂತ ಕಿಚ್ಚ ಸುದೀಪ್ ಹೇಳಲಿದ್ದಾರೆ. ಹೊಸದಾಗಿ ರಿಲೀಸ್ ಆದ ಪ್ರೋಮೋದಲ್ಲಿ ವೇದಿಕೆಗೆ ಬಂದ ಕಿಚ್ಚ ಸುದೀಪ್ ಚೈತ್ರಾ ಕುಂದಾಪುರ ಅವರ ಆಟದ ಬಗ್ಗೆ ಪ್ರಸ್ಥಾಪ ಮಾಡಿದ್ದಾರೆ.
https://www.instagram.com/p/DCbRWUmNCSx/?utm_source=ig_embed&utm_campaign=embed_video_watch_again
ಚಾಲೆಂಜಾಗಿ ಅಂತ ಬಂದಾಗ ಮುಖ್ಯವಾಗಿ ಮೊದಲು ಬರುವುದೇ ನಂಬಿಕೆ. ನಂಬಿಕೆ ಇಟ್ಟು ಸೋತವರು ಇದ್ದಾರೆ, ನಂಬಿಕೆಗೆ ಮೋಹ ಮಾಡಿದವರು ಇದ್ದಾರೆ ಅಂತ ಹೇಳಿದ್ದಾರೆ. ದ್ರೋಹ ಮಾಡಿದವರಿಗೆ ಪಾಠ ಹೇಳಲು, ನಂಬಿ ಕೆಟ್ಟವರಿಗೆ ಧೈರ್ಯ ತುಂಬಲು ಈ ವಾರದ ಪಂಚಾಯಿತಿಗೆ ಕಪ್ಪು ಬಟ್ಟೆ ಧರಿಸಿ ಕಿಚ್ಚ ಸುದೀಪ್ ಬಂದಿದ್ದಾರೆ.