ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವೀಪ್ ರಾಯಭಾರಿಯಾಗಿದ್ದ ಸವಣೂರ ತಾಲೂಕಿನ ಚಿಲ್ಲೂರ ಬಡ್ನಿ ನಿವಾಸಿ ಹನುಮಂತ ಲಮಾಣಿ ಶಿಗ್ಗಾಂವಿ ಉಪಚುನಾವಣೆಯ ಮತದಾನಕ್ಕೆ ಗೈರಾಗಿದ್ದಾರೆ.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಗಾಯಕ ಹನುಮಂತ ಲಮಾಣಿ ಈ ಬಾರಿಯ ಶಿಗ್ಗಾಂವಿ ಉಪಚುನಾವಣೆಯ ಮತದಾನಕ್ಕೆ ಗೈರಾಗಿದ್ದಾರೆ. ಈಗಾಗಲೇ ಹನುಮಂತ ಅವರ ತಂದೆ-ತಾಯಿ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹನುಮಂತ ಅವರು ಚುನಾವಣೆ ರಾಯಭಾರಿ ಆಗಿದ್ದರು. ಎರಡೂ ಚುನಾವಣೆಯಲ್ಲಿ ಹನುಮಂತ ಅವರು ತಮ್ಮ ಗ್ರಾಮ ಚಿಲ್ಲೂರ ಬಡ್ನಿಯಲ್ಲಿರುವ ಮತಗಟ್ಟೆಗೆ ಬಂದು ಮತದಾನ ಮಾಡಿದ್ದರು.ಆದರೆ ಈ ಬಾರಿ ಹನುಮಂತ ‘ಬಿಗ್ಬಾಸ್’ ರಿಯಾಲಿಟಿ ಶೋ ಮನೆಯಲ್ಲಿದ್ದಾರೆ. ಅವರು ಮತದಾನ ಮಾಡಲು ಬಂದಿಲ್ಲ. ತಂದೆ ಮೇಘಪ್ಪ, ತಾಯಿ ಶೀಲವ್ವ ಹಾಗೂ ಸಹೋದರಿ ಅವರು ಮತಗಟ್ಟೆಗೆ ಬಂದು ಮತದಾನ ಮಾಡಿದರು.