ಪಾಕ್ ಮತ್ತು ಯುಎಸ್ ಹಳೆಯ ಸ್ನೇಹಿತರು:
ಪ್ರಧಾನಿ ಶೆಹಬಾಜ್ ಷರೀಫ್ ಅವರ ಎಕ್ಸ್ ವಿವಾದ ನಡುವೆ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಮಾತನಾಡಿ, ಪಾಕಿಸ್ತಾನ ಮತ್ತು ಯುಎಸ್ ಹಳೆಯ ಸ್ನೇಹಿತರು ಮತ್ತು ಪಾಲುದಾರರು. ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ನಮ್ಮ ಸಂಬಂಧವು ದಶಕಗಳಷ್ಟು ಹಳೆಯದಾಗಿದೆ. ಟ್ರಂಪ್ ಅವರ 2ನೇ ಅವಧಿಯು ಇಸ್ಲಾಮಾಬಾದ್-ಚೀನಾ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರಲ್ಲ ಎಂದು ಒತ್ತಿ ಹೇಳಿದ್ದಾರೆ.
ಷರೀಫ್ ಎಕ್ಸ್‌ನಲ್ಲಿ ಹೇಳಿದ್ದೇನು?
ಇತ್ತೀಚೆಗೆ ಅಧ್ಯಕೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಟ್ರಂಪ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಪಾಕಿಸ್ತಾನ-ಅಮೆರಿಕದ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ವಿಸ್ತರಿಸಲು ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ವರ್ಷಾರಂಭದಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅತ್ತಾವುಲ್ಲಾ ತರಾರ್, ರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ʻಎಕ್ಸ್ʼ ನಿಷೇಧಿಸುವುದಾಗಿ ಘೋಷಿಸಿದ್ದರು. ಏಕೆಂದರೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಗೆ ಸೇರಿದ ಭಯೋತ್ಪಾದಕರು ದೇಶವಿರೋಧಿ ಚಟುವಟಿಕೆಗಳನ್ನು ಹರಡಲು ʻಎಕ್ಸ್ʼ ವೇದಿಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಇಂತಹ ಪರಿಸ್ಥಿತಿ ಇರುವಾಗ ಪಿಎಂ ಷರೀಫ್ ಅಭಿನಂದನೆ ಸಲ್ಲಿಸಲು ಎಕ್ಸ್ ಖಾತೆ ಬಳಸಿದ್ದು, ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.