ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (K.L Rahul) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನು ಅಥಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ದೇವರ ಸುಂದರ ಆಶೀರ್ವಾದ 2025ರಲ್ಲಿ ಬರಲಿದೆ’ ಎಂದು ಅಥಿಯಾ ದಂಪತಿ ಪೋಷಕರಾಗುತ್ತಿರುವ ಖುಷಿಯ ಸುದ್ದಿಯನ್ನು ತಿಳಿಸಿದ್ದಾರೆ. ಈ ಜೋಡಿಗೆ ಪೂಜಾ ಹೆಗ್ಡೆ, ಅಹಾನ್ ಶೆಟ್ಟಿ, ಸುನೀಲ್ ಶೆಟ್ಟಿ, ವಿಕ್ರಾಂತ್ ಮಾಸ್ಸಿ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.
ಅಂದಹಾಗೆ, ಕಳೆದ ವರ್ಷ ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಅಥಿಯಾ ಅದ್ಧೂರಿಯಾಗಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.