ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿದೆ. ಪಕ್ಕಾ ಮಾಸ್ ಆಗಿ ನಟ ಎಂಟ್ರಿ ಕೊಟ್ಟಿದ್ದಾರೆ. ಕಮಲ್ ಹಾಸನ್ ಹುಟ್ಟುಹಬ್ಬದಂದು (ನ.7) ಚಿತ್ರದ ಟೀಸರ್ ರಿವೀಲ್ ಮಾಡುವ ಮೂಲಕ ಅವರ ಅಭಿಮಾನಿಗಳಿಗೆ ಚಿತ್ರತಂಡ ಸರ್ಪ್ರೈಸ್ ಗಿಫ್ಟ್ ಕೊಟ್ಟಿದೆ.
ರಿಲೀಸ್ ಆಗಿರುವ ಟೀಸರ್‌ನಲ್ಲಿ ಕಮಲ್ ಹಾಸನ್ ಮಾಸ್ & ಕ್ಲಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ವಿಕ್ರಮ್ ಸಿನಿಮಾದ ನಂತರ ಮತ್ತೆ ಖಡಕ್ ಅವತಾರ ತಾಳಿದ್ದಾರೆ. ಈ ಚಿತ್ರದಲ್ಲಿ ಸಿಂಬು, ತ್ರಿಷಾ ಕೂಡ ನಟಿಸಿದ್ದಾರೆ. ‘ಥಗ್ ಲೈಫ್’ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ.
‘ಥಗ್ ಲೈಫ್’ ಚಿತ್ರ ತಮಿಳು, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಮುಂದಿನ ವರ್ಷ ಜೂನ್ 5ರಂದು ರಿಲೀಸ್ ಆಗಲಿದೆ. ಹಲವು ವರ್ಷಗಳ ಬಳಿಕ ಕಮಲ್ ಮತ್ತು ಮಣಿರತ್ನಂ ಜೊತೆಯಾಗಿ ಕೆಲಸ ಮಾಡಿರುವ ಥಗ್ ಲೈಫ್ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.