Guruprasad: ನಿರ್ದೇಶಕ ಗುರುಪ್ರಸಾದ್ ಅವರ ಸಾವಿಗೆ ಇದೇ ಕಾರಣನಾ? 10 ದಿನದಿಂದ ಯಾರು ಸಂಪರ್ಕ ಮಾಡಲಿಲ್ಲವೇಕೆ?

public wpadmin

50 ವರ್ಷದ ಗುರುಪ್ರಸಾದ್ ಅವರು ಕನ್ನಡದ ಐದು ಚಿತ್ರಗಳನ್ನ ನಿರ್ದೇಶಿಸಿ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದರು. ಆದರೆ ಇಂದು ಕೊಳೆತ ಸ್ಥಿತಿಯಲ್ಲಿ ಗುರುಪ್ರಸಾದ್ ಶವ ಪತ್ತೆಯಾಗಿದೆ.

  • ಬೆಂಗಳೂರು: ಕನ್ನಡದ ಖ್ಯಾತ ನಿರ್ದೇಶಕ ಮಠ ಗುರುಪ್ರಸಾದ್ ಅವರು ಮೃತದೇಹ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಮಠ ಹಾಗೂ ಎದ್ದೇಳು ಮಂಜುನಾಥ ಖ್ಯಾತಿ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ ಗುರುಪ್ರಸಾದ್ ಅವರ ಮೃತದೇಹ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
  • 50 ವರ್ಷದ ಗುರುಪ್ರಸಾದ್ ಅವರು ಕನ್ನಡದ ಐದು ಚಿತ್ರಗಳನ್ನ ನಿರ್ದೇಶಿಸಿ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದರು. ಆದರೆ ಇಂದು ಕೊಳೆತ ಸ್ಥಿತಿಯಲ್ಲಿ ಗುರುಪ್ರಸಾದ್ ಶವ ಪತ್ತೆಯಾಗಿದೆ. 10 ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಇತ್ತೀಚಿನ ದಿನಗಳಲ್ಲಿ ಗುರುಪ್ರಸಾದ್ ಅವರು ಸ್ನೇಹಿತರಿಂದಲೂ ದೂರ ಉಳಿದಿದ್ದರಂತೆ.
  • ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ವಾಸನೆ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಅಘಾತ ಎದುರಾಗಿದ್ದು, ಪ್ರತಿಭಾವಂತ ನಿರ್ದೇಶಕನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ.
  • ಎದ್ದೇಳು ಮಂಜುನಾಥ ಸಿನಿಮಾ ಬಳಿಕ ಗುರುಪ್ರಸಾದ್ ಅವರು ಮಾಡಿರುವ ಎಲ್ಲಾ ಸಿನಿಮಾಗಳು ವಿಭಿನ್ನ ಪ್ರಯತ್ನದಿಂದ ಮೂಡಿ ಬಂದಿದೆ. ತಮ್ಮ ಸಿನಿಮಾಗಳ ಮೂಲಕ ಜನರಿಗೆ ಒಂದು ಸ್ಪಷ್ಟ ಸಂದೇಶ ರವಾನೆ ಮಾಡುತ್ತಿದ್ದರು. ಗುರುಪ್ರಸಾದ್ ಅವರು ತಮ್ಮ ಕೊನೆಯ ಚಿತ್ರವನ್ನು ನಟ ಜಗ್ಗೇಶ್ ಅವರೊಂದಿಗೆ ಮಾಡಿದ್ದರು. ಆದರೆ ರಂಗ ನಾಯಕ ಸಿನಿಮಾ ನಿರೀಕ್ಷಿತ ಯಶಸ್ಸನ್ನು ಪಡೆದುಕೊಂಡಿರಲಿಲ್ಲ.
  • ರಂಗನಾಯಕ ಸಿನಿಮಾ ಬಳಿಕ ಅವರಿಗೆ ಬೇರೆ ಯಾವುದೇ ಸಿನಿಮಾಗಳು ಇರಲಿಲ್ಲವಂತೆ. ರಂಗನಾಯಕ ಸೋಲು ಅವರನ್ನು ಆರ್ಥಿಕ ಸಂಷಕ್ಟಕಕ್ಕೆ ದೂಡಿತ್ತಂತೆ. ಆರ್ಥಿಕ ಸಂಕಷ್ಟದಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆದರೆ ಗುರುಪ್ರಸಾದ್ ಅವರ ಮೃತದೇಹ ಬಳಿ ಏನೆಲ್ಲಾ ಸಿಕ್ಕಿದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಿದೆ.
  • ಸದ್ಯ ಸ್ಥಳಕ್ಕೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೂಲತಃ ಕನಕಪುರದವರಾದ ಗುರುಪ್ರಸಾದ್ ಅವರು, ಬೆಂಗಳೂರಿಗೆ ಶಿಫ್ಟ್ ಆಗಿ ಆಗಾಗ ಕನಕಪುರಕ್ಕೆ ಭೇಟಿ ನೀಡುತ್ತಿದ್ದರು. ಆದರೆ ರಂಗನಾಯಕ ಸಿನಿಮಾ ಬಳಿಕ ಸ್ನೇಹಿತರು, ಆಪ್ತರಿಂದ ದೂರವಾಗಿದ್ದರಂತೆ.
  • ಘಟನೆ ಬೆಳಕಿಗೆ ಬಂದ ಬಳಿಕ ಅವರ ಸ್ನೇಹಿತರನ್ನು ಸಂಪರ್ಕ ಮಾಡಿದ ಸಂದರ್ಭದಲ್ಲಿ ಗುರುಪ್ರಸಾದ್ ಅವರು ಇತ್ತೀಚೆಗೆ ನಮ್ಮ ಸಂಪರ್ಕದಿಂದ ದೂರ ಉಳಿದಿದ್ದರು ಎಂದು ತಿಳಿಸಿದ್ದಾರೆ. ರಂಗನಾಯಕ ಸಿನಿಮಾ ಸೋಲನ್ನು ಗುರುಪ್ರಸಾದ್ ಅವರ ಮೇಲೆಯೇ ಹಾಕಲಾಗಿತ್ತು. ಇದರಿಂದ ಅವರಿಗೆ ಹೊಸ ಅವಕಾಶಗಳು ಲಭ್ಯವಾಗಿರಲಿಲ್ಲವಂತೆ. ಹಣಕಾಸಿನ ವ್ಯವಹಾರದಲ್ಲೂ ಸಂಕಷ್ಟ ಎದುರಿಸಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಅವರು ಸಾವಿಗೆ ಶರಣಾಗಿದ್ದಾರಾ? ಸಾವಿಗೆ ಕಾರಣ ಏನು ಅನ್ನೋದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.
  • ಕಳೆದ 08 ತಿಂಗಳಿನಿಂದ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಟಾಟಾ ನ್ಯೂ ಹಾವೆಲ್ ಅಪಾರ್ಟ್​ಮೆಂಟ್ ನಲ್ಲಿ ಏಕಾಂಕಿಯಾಗಿ ವಾಸಿಸುತ್ತಿದ್ದರಂತೆ. ಸದ್ಯ ಸ್ಥಳಕ್ಕೆ ದೌಡಾಯಿಸಿರುವ ಮಾದನಾಯಕನಹಳ್ಳಿ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಫ್ಲ್ಯಾಟ್ ಡೋರ್ ಆಗಿರುವ ಕಾರಣ ಕೀಗಾಗಿ ನಿವಾಸ ಹೊರಗಡೆ ಕಾಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೀ ಸಿಕ್ಕ ಬಳಿಕ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಿದ್ದಾರೆ. (ಸತೀಶ್ ಕನಕಪುರ, ನ್ಯೂಸ್​18 ಕನ್ನಡ, ಬೆಂಗಳೂರು)
Share This Article
Leave a comment