ಫ್ರಿಡ್ಜ್ ಇಲ್ಲದ ಅಡುಗೆಮನೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟ. ತರಕಾರಿಗಳಿಂದ ಹಿಡಿದು ಸಾಸ್, ಜಾಮ್, ಹಾಲು, ಮೊಸರು ಮುಂತಾದ ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ನಾವು ರೆಫ್ರಿಜರೇಟರ್ ಅನ್ನು ಬಳಸುತ್ತೇವೆ.
ಫ್ರಿಡ್ಜ್ ಆಹಾರ ಪದಾರ್ಥಗಳನ್ನು ಕೆಡದಂತೆ ರಕ್ಷಿಸುವುದಲ್ಲದೆ, ಅವುಗಳ ಗುಣಮಟ್ಟವನ್ನು ಕಾಪಾಡುತ್ತದೆ. ಅದೇ ರೀತಿ ಆಹಾರ ಪದಾರ್ಥಗಳ ಹೊರತಾಗಿ ಇತರ ಕೆಲವು ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳ ಗುಣಮಟ್ಟವು ಹಾಗೇ ಉಳಿಯುತ್ತದೆ. ಬೇರೆ ಯಾವ ವಸ್ತುಗಳನ್ನು ನೀವು ಫ್ರಿಡ್ಜ್‌ನಲ್ಲಿ ಶೇಖರಿಸಿಡಬಹುದು ಎಂಬುದನ್ನು ತಿಳಿಯೋಣ ಬನ್ನಿ…
ನೀವು ತ್ವಚೆಯ ಆರೈಕೆಗೆ ಬಳಸುವ ಕ್ರೀಮ್, ಆಂಟಿ ಏಜಿಂಗ್ ಕ್ರೀಮ್, ಸುಕ್ಕು ಕ್ರೀಮ್ ಇತ್ಯಾದಿಗಳನ್ನು ಸಂಗ್ರಹಿಸಲು ಫ್ರಿಜ್ ಅನ್ನು ಬಳಸಬಹುದು. ಕೋಣೆಯ ಉಷ್ಣಾಂಶದಲ್ಲಿ ಅವುಗಳನ್ನು ಇರಿಸುವಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ, ನೀವು ಅವುಗಳನ್ನು ರೆಫ್ರಿಜರೇಟರ್ನಲ್ಲಿ ಇರಿಸಿದರೆ, ಅವುಗಳ ಗುಣಮಟ್ಟ ಕಾಯ್ದುಕೊಳ್ಳುತ್ತವೆ ಮತ್ತು ಅವುಗಳನ್ನು ದೀರ್ಘಕಾಲದವರೆಗೂ ಬಳಸಬಹುದು.
ಇನ್ನು ಕಣ್ಣಿನ ಆರೈಕೆಗೆ ಬಳಸುವ ಕೂಲ್ ಕ್ರೀಮ್‌ನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದರೆ, ಕಣ್ಣುಗಳು ಹೆಚ್ಚು ಫ್ರೆಶ್ ಆಗಿ ಕಾಣುತ್ತವೆ. ಅಷ್ಟೇ ಅಲ್ಲ, ಆ ರೀತಿ ಬಳಕೆ ಮಾಡುವುದರಿಂದ ಕಣ್ಣುಗಳ ಊತ ಮತ್ತು ಕೆಂಪು ಬಣ್ಣವನ್ನು ದೂರವಿಡುತ್ತದೆ.
ನಿಮ್ಮ ಲಿಪ್ಸ್ಟಿಕ್ ಒಡೆಯಲು ಮತ್ತು ಕರಗಲು ಪ್ರಾರಂಭಿಸಿದರೆ, ಅದನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ. ಅನೇಕ ಬಾರಿ, ಲಿಪ್ಸ್ಟಿಕ್ನಲ್ಲಿರುವ ತೈಲಗಳು ಕೋಣೆಯ ಉಷ್ಣಾಂಶದಲ್ಲಿ ಕ್ರಮೇಣ ಹಾಳಾಗುತ್ತವೆ. ರೆಫ್ರಿಜರೇಟರ್ನಲ್ಲಿ ಇಡುವುರಿಂದ ಅದು ಹಾಳಾಗುವುದನ್ನು ತಪ್ಪಿಸಬಹುದು.
ನೀವು ಮಾರುಕಟ್ಟೆಯಿಂದ ಪೂಜಾ ಹೂವುಗಳನ್ನು ಖರೀದಿಸಿದರೆ, ಅವುಗಳನ್ನು ಮೂರು-ನಾಲ್ಕು ದಿನಗಳವರೆಗೆ ಸಂರಕ್ಷಿಸಿಡಬಹುದು. ಹೌದು, ಆ ಹೂಗಳನ್ನು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಡಬಹುದು. ತಂಪಾದ ವಾತಾವರಣದಲ್ಲಿ, ಹೂವಿನ ಎಲೆಗಳು ಮತ್ತು ಕಾಂಡಗಳು ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ. ಇಷ್ಟೇ ಅಲ್ಲ, ನೀವು ಯಾರಿಗಾದರೂ ಹೂವುಗಳನ್ನು ಉಡುಗೊರೆಯಾಗಿ ನೀಡಲು ಯೋಚಿಸುತ್ತಿದ್ದರೆ ಮತ್ತು ಅವುಗಳನ್ನು ಮುಂಚಿತವಾಗಿ ಖರೀದಿಸಿದರೆ, ನೀವು ಅವುಗಳನ್ನು ದೀರ್ಘಕಾಲದವರೆಗೆ ಇರಿಸಿಕೊಳ್ಳಲು ರೆಫ್ರಿಜರೇಟರ್ ಅನ್ನು ಬಳಸಬಹುದು.
ಕೋಣೆಯ ಉಷ್ಣತೆಯು ಅಧಿಕವಾಗಿದ್ದರೆ, ಪರ್ಫ್ಯೂಮ್ ಗುಣಮಟ್ಟವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪರ್ಫ್ಯೂಮ್‌ನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಹುದು. ಆಗ ಅದರ ಗುಣಮಟ್ಟವು ದೀರ್ಘಕಾಲದವರೆಗೆ ಉತ್ತಮವಾಗಿರುತ್ತದೆ. ರೆಫ್ರಿಜಿರೇಟರ್‌ನಲ್ಲಿ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಮತ್ತು ಯೀಸ್ಟ್ ಅನ್ನು ಇರಿಸಬಹುದು. ನೀವು ಅವುಗಳು ಹಾಳಾಗುವುದನ್ನು ತಪ್ಪಿಸಬಹುದು.