ನಿರ್ದೇಶಕ ಗುರುಪ್ರಸಾದ್ (Guruprasad) ಅವರೊಂದಿಗೆ ‘ಮಠ’, ‘ಎದ್ದೇಳು ಮಂಜುನಾಥ’, ‘ರಂಗನಾಯಕ’ ಸಿನಿಮಾಗಳಲ್ಲಿ ಜಗ್ಗೇಶ್ ಕೆಲಸ ಮಾಡಿದ್ದರು. ಇದೀಗ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರೋದ್ದಕ್ಕೆ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬಕ್ಕೆ ಸಹಾಯ ಮಾಡಲು ಜಗ್ಗೇಶ್ ಮುಂದಾಗಿದ್ದಾರೆ. ಗುರುಪ್ರಸಾದ್ ಅವರ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ನಿಮ್ಮ ಬೆಳವಣಿಗೆಯ ಹಿಂದೆ ಒಬ್ಬ ಗುರು ಇರಬೇಕು. ಯಾರಿಗೆ ಒಳ್ಳೆಯ ಗುರು ಇರುತ್ತಾರೆ ಅವರು ಸಕ್ಸಸ್ ಆಗುತ್ತಾರೆ. ಅವರಿಗೆ ಗುರು ಇರಲಿಲ್ಲ. ಆದರೆ ತಾಯಿಯೇ ಅವರಿಗೆ ಗುರು ಆಗಿದ್ದರು. ಅವರಿಗೂ ಬೈಯುತ್ತಿದ್ದರು. ಅದೆಲ್ಲಾ ನಮಗೆ ಸಹಿಸಿಕೊಳ್ಳೋಕೆ ಆಗುತ್ತಿರಲಿಲ್ಲ. ಆದರೆ ಗುರುಪ್ರಸಾದ್ ಮಗುವಿಗೆ ಸಹಾಯ ಮಾಡುತ್ತೇನೆ. ಸಂಕಲ್ಪ ಮಾಡಿಕೊಂಡಿದ್ದೇನೆ, ಅದನ್ನು ಹೇಳೋಕೆ ಹೋಗಲ್ಲ. ಸಹಾಯವನ್ನು ಅವರಿಗೆ ತಲುಪಿಸುತ್ತೇನೆ ಎಂದು ಜಗ್ಗೇಶ್ ತಿಳಿಸಿದ್ದಾರೆ.
ಗುರುಪ್ರಸಾದ್ ಮೊದಲ ಹೆಂಡತಿಗೆ ನನ್ನ ಮೇಲೆ ಅಪಾರ ಗೌರವವಿತ್ತು. ನಿನ್ನ ತಪ್ಪುಗಳು ಆಕೆ ಕ್ಷಮಿಸುತ್ತಾಳೆ ಸಂಸಾರ ಸರಿ ಮಾಡಿಕೋ ಎಂದು ಗುರುಪ್ರಸಾದ್‌ಗೆ ತಿಳಿ ಹೇಳಿದ್ದೆ, 2ನೇ ಮದುವೆ ವಿಚಾರಕ್ಕೆ ಎರಡು ಮೆಟ್ಟಿನ ಏಟು ಹೊಡೆಯುತ್ತಾಳೆ ಅಷ್ಟೇ. ನಾವು ಯಾವತ್ತು ದ್ವೇಷದಿಂದ ಸಾಯಬಾರದು. ಇಂದಿನ ಅವನ ಸ್ಥಿತಿಗೆ ಕುಡಿತದ ಚಟವೇ ಕಾರಣ ಎಂದಿದ್ದಾರೆ. ‘ಮಠ’ ಸಿನಿಮಾ ಮಾಡುವಾಗ ಆರಂಭ ದಿನದ ಗುರು ಅವರನ್ನು ನೆನಪಿಸಿಕೊಂಡ್ರೆ ಆಶಾವಾದಿ ಆಗಿದ್ದರು. ಹೀಗೆಲ್ಲಾ ಯಾಕೆ ಆಯ್ತು ಗೊತ್ತಿಲ್ಲ.
ನಮ್ಮಿಬ್ಬೀರ ಜಗಳದ ನಂತರ ಅವರ ಸಹವಾಸಗಳು ಎಲ್ಲಾ ಜೇಂಜ್ ಆಯಿತು. ಅವರ ಜೊತೆ ಕೆಲಸ ಮಾಡುತ್ತಿದ್ದ ಒಳ್ಳೆಯ ಕೆಲಸಗಾರರು ಬಿಟ್ಟು ಹೋದರು. ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲಿ ತಬಲಾ ನಾಣಿ ಕೊಡುಗೆ ತುಂಬಾ ಇದೆ. ಅವರಿಗೆ ತುಂಬಾ ಸಹಕಾರ ನೀಡುತ್ತಿದ್ದರು. ಆ ನಂತರ ಎಲ್ಲರೂ ಬಿಟ್ಟು ಹೋದರು.
ಇನ್ನೂ ‘ರಂಗನಾಯಕ’ ಸಿನಿಮಾ ಟೈಮ್‌ನಲ್ಲಿ ಕಾಲ್ ಮಾಡಿ ಕೆಟ್ಟದಾಗಿ ಬೈಯುತ್ತಿದ್ದರು. ನೀನು ಒಬ್ಬ ಹೀರೋನಾ ಎನ್ನುತ್ತಿದ್ದರು. ಅಲ್ಲಿಂದ ಒಡನಾಟ ಕಮ್ಮಿಯಾಯಿತು ಎಂದು ಜಗ್ಗೇಶ್ ವಿವರಿಸಿದರು.