Kichcha Sudeep: ಅಮ್ಮನಿಲ್ಲದ ನೋವು ಈಗ ನನಗೆ ಅರ್ಥವಾಗ್ತಿದೆ ಎಂದ್ರು ಸುದೀಪ್! ಕಿಚ್ಚನ ಕಣ್ಣಂಚಲ್ಲಿ ತುಂಬಿತು ನೀರು!

public wpadmin

ಅಮ್ಮನಿಲ್ಲದ ನೋವು ಕಿಚ್ಚ ಸುದೀಪ್ ಅವರನ್ನು ಕಾಡ್ತಿದೆ. ಬಿಗ್ ಬಾಸ್ ವೇದಿಕೆ ಮೇಲೂ ಅಮ್ಮನನ್ನು ನೆನೆದು ಸುದೀಪ್ ಭಾವುಕರಾದ್ರು. ಅಪ್ಪ-ಅಮ್ಮನಿಲ್ಲದ ಐಶ್ವರ್ಯಾ ಜೊತೆ ಮಾತಾಡ್ತಾ ಕಿಚ್ಚ ಸುದೀಪ್ ಭಾವುಕರಾದ್ರು. ​

  • ಕಿಚ್ಚ ಸುದೀಪ್ ಅವರ ತಾಯಿಯ ನಿಧನಕ್ಕೆ ಬಿಗ್ ಬಾಸ್ ವೇದಿಕೆ ಮೇಲೆ ನಮನ ಸಲ್ಲಿಸಿದ್ರು. ವಾಸುಕಿ ವೈಭವ್ ಬಂದು ಕೋಟಿಗೊಬ್ಬ-2 ಚಿತ್ರದ ಪರಪಂಚ ನೀನೆ ಹಾಡು ಹಾಡಿದ್ರು. ಈ ಹಾಡು ಆದ್ಮೇಲೆ ವಾಸುಕಿಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ರು. ವಾಸುಕಿ ವೈಭವ್‌ ಕೂಡ ನೆಲಕ್ಕೆ ತಲೆ ಹೆಚ್ಚಿ ಕಿಚ್ಚನಿಗೆ ನಮಸ್ಕಾರ ಹೇಳಿದರು. ನಿಮ್ಮ ತಾಯಿ ನನಗೂ ಪ್ರೀತಿ ತೋರಿಸಿದ್ದಾರೆ. ಅವರ ಬಗ್ಗೆ ಒಂದಷ್ಟು ಹೇಳಿ ಅಂತಲೇ ವಾಸುಕಿ ಕೇಳಿದ್ರು.
  • ಆಗ ಸುದೀಪ್ ಒಂದೇ ಮಾತು ಹೇಳಿದ್ರು. ಬಿಗ್ ಬಾಸ್ ವೇದಿಕೆ ಮೇಲೆ ನಾನು ನನ್ನ ಅಮ್ಮನ  ಬಗ್ಗೆ ಹೇಳೋಕೆ ಬೇಸರ ಏನೂ ಇಲ್ಲ. ಹಾಗೆ ಅಮ್ಮ ಬಿಗ್ ಬಾಸ್ ತುಂಬಾನೆ ಇಷ್ಟಪಡ್ತಿದ್ದರು. ಅಷ್ಟು ಬಿಟ್ರೆ ಮತ್ತೇನೂ ಇಲ್ಲ ಅಂತಲೇ ಸುದೀಪ್ ಮುನ್ನಡೆದರು.
  • ಸುದೀಪ್ ತಮ್ಮ ಅಮ್ಮನ ಬಗ್ಗೆ ಹೆಚ್ಚು ಮಾತಾಡ್ತಾರೆ ಅನ್ನೋ ನಿರೀಕ್ಷೆ ಮಾಡಿದ್ದರು. ಗೊತ್ತೇ ಇರದ ವಿಚಾರವನ್ನ ಹೇಳುತ್ತಾರೆ ಅಂದುಕೊಂಡಿದ್ದರು. ತಮ್ಮ ಅಮ್ಮನ ಬಗ್ಗೆ ಒಂದೇ ಲೈನ್ ಅಲ್ಲಿ ಮಾತು ಮುಗಿಸಿದರು. ಬಳಿಕ ಸ್ಪರ್ಧಿಗಳ ಜೊತೆ ಕಿಚ್ಚನ ಪಂಚಾಯಿತಿ ಶುರು ಮಾಡಿದ್ರು. ಕೂಲ್ ಆಗಿಯೇ ಎಲ್ಲರ ಜೊತೆ ಮಾತಾಡಿದ ಕಿಚ್ಚ ಕೆಲವರಿಗೆ ಕಿವಿ ಮಾತು ಹೇಳಿದ್ರು.
  • ಹನುಮಂತುವಿಗೆ ಕಿಚ್ಚನ ಚಪ್ಪಾಳೆ ನೀಡಿದ್ರು. ಬಳಿಕ ಬಿಗ್​ ಬಾಸ್ ಸ್ಪರ್ಧಿಗಳಿಗೆ ಮನೆಯವರು ಕಳಿಸಿದ ಪತ್ರದ ಬಗ್ಗೆ ಕೂಡ ಚರ್ಚೆ ಮಾಡಿದ್ರು. ಎಲ್ಲರಿಗೂ ಪತ್ರ ಬಂದು ಆದ್ರೆ ಐಶ್ವರ್ಯಾಗೆ ಪತ್ರ ಬರಲಿಲ್ಲ. ಈ ಬಗ್ಗೆ ಮಾತಾಡಿದ ಸುದೀಪ್, ಮಂಜು ಅವರು ತಮಗೆ ಬಂದ ಪತ್ರವನು ಹೆಸರು ತೆಗೆದು ನಿಮಗೆ ನೀಡಿದ್ರು ಎಂಬ ವಿಚಾರವನ್ನು ಐಶ್ವರ್ಯಾ ಹೇಳಿದ್ರು. ಈ ವೇಳೆ ಐಶ್ವರ್ಯಾ. ಮಂಜುವನ್ನು ಹಗ್ ಮಾಡಿಕೊಂಡ್ರು.
  • ಪತ್ರ ಬರಲಿಲ್ಲ ಎಂದು ನೀವು ಕಣ್ಣೀರು ಹಾಕಿದ್ರಿ. 2 ವಾರದ ಹಿಂದೆ ಈ ನೋವು ನನಗೆ ಅರ್ಥವಾಗುತ್ತಿರಲಿಲ್ಲ. ಆದ್ರೆ 2 ವಾರದ ನಂತ್ರ ಸ್ವಲ್ಪ, ಸ್ವಲ್ಪವೇ ನನಗೆ ಅರ್ಥವಾಗ್ತಿದೆ ಎಂದು ಸುದೀಪ್ ಹೇಳಿದ್ರು. ಅಮ್ಮನಿಲ್ಲದ ನೋವಿನ ಬಗ್ಗೆ ಮಾತಾಡುತ್ತಾ ಕಿಚ್ಚನ ಕಣ್ಣು ತುಂಬಿಕೊಂಡಿತ್ತು.
  • ನನ್ನ ಕಡೆಯಿಂದ ನಿಮಗೆ ಏನೋ ಕಳ್ಸಿದ್ದೇನೆ ನೋಡಿ, ತುಂಬಾ ಚಿಕ್ಕದು ಎಂದು ಕಿಚ್ಚ ಒತ್ತಿ ಒತ್ತಿ ಹೇಳ್ತಿದ್ರು. ಐಶ್ವರ್ಯಾ ಸ್ಟೋರ್ ರೂಮಿಗೆ ಹೋಗಿ ಗಿಫ್ಟ್ ತೆಗೆದುಕೊಂಡು ಬಂದ್ರು. ಅದರಲ್ಲಿ ಚಿಕ್ಕಿ ಇತ್ತು, ಸ್ವೀಟ್ ಕಳಿಸಿದ್ರು. ಇದನ್ನು ನೋಡಿ ಐಶ್ವರ್ಯಾ ಖುಷಿಯಾದ್ರು. ಇದ್ರಲ್ಲಿ ಪ್ರೀತಿ ತುಂಬಿದೆ ಸರ್ ಇದು ಚಿಕ್ಕದಲ್ಲ, ನನ್ನ ಪಾಲಿಗೆ ದೊಡ್ಡದು ಎಂದು ಐಶ್ ಹೇಳಿದ್ರು. ನಾವು ಇರುವ ಸಂದರ್ಭದಲ್ಲಿ ನಿಮಗೆಲ್ಲಾ ಅಡುಗೆ ಮಾಡಿ ಕಳಿಸೋದು ನನಗೆ ಆಗಲ್ಲ ಎಂದು ಸುದೀಪ್ ಹೇಳಿದ್ರು.
  • ಅಮ್ಮನ ಅಗಲಿಕೆಯ ದುಃಖದಲ್ಲಿದ್ದ ಸುದೀಪ್​ ಕಳೆದ ವಾರ ಕಿಚ್ಚನ ಪಂಚಾಯಿತಿ ಶೋ ನಡೆಸಿಕೊಡಲಿಲ್ಲ. ಈ ವಾರ ವೇದಿಕೆ ಮೇಲೆ ಬಂದ್ರು ಅದೇ ಸ್ಟೈಲ್​​ನಲ್ಲೇ ಸ್ಪರ್ಧಿಗಳಿಗೆ ಸುದೀಪ್​ ಕ್ಲಾಸ್​ ತೆಗೆದುಕೊಂಡಿದ್ದಾರೆ. ಮೋಕ್ಷಿತಾ ಹಾಗೂ ಮಂಜುಗೆ ಕೂಲ್​ ಆಗಿಯೇ ಕಿವಿ ಮಾತು ಹೇಳಿದ ಕಿಚ್ಚ ಶೋ ಬಗ್ಗೆ ಹೇಳಿದ್ದೇನು ಗೊತ್ತಾ?
  • ಮೋಕ್ಷಿತಾ ಕೇವಲ 10 ವಾರ ಇದ್ದು ಹೋಗ್ತಾರೆ ಎಂದಿದ್ದ ತ್ರಿವಿಕ್ರಮ್ ಮೇಲೆ ಮೋಕ್ಷಿತಾ ರಾಂಗ್ ಆಗಿದ್ರು. ನಿಮ್ಮ ಕೋಪಕ್ಕೆ ಕಾರಣ ಏನು? ಮೊದಲೇ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಸುದೀಪ್ ಕೇಳಿದ್ರು. ಇದಕ್ಕೆ ಉತ್ತರಿಸಿದ ಮೋಕ್ಷಿತಾ, ಮಂಜು ಕೇಳೋದು ಬೇಡ ಅಂದಿದ್ರು ಅದಕ್ಕೆ ನಾನು ಕೇಳಿರಲಿಲ್ಲ ಎಂದು ಮೋಕ್ಷಿತಾ ಹೇಳಿದ್ರು.
  • ಮೋಕ್ಷಿತಾ ಮಾತು ಕೇಳಿದ ಕಿಚ್ಚ ಸುದೀಪ್, ಮನಸ್ಸಿನ ಮಾತು ಹೇಳೋಕೆ ಅಪ್ಪಣೆ ಬೇಡ ಎಂದು ಮನವರಿಕೆ ಮಾಡಿಕೊಟ್ರು. ಈ ವೇಳೆ ಸುದೀಪ್, ಈ ಸೀಸನ್ ಬೇಡ ಅಂದ್ರು ಬಿಡಲಿಲ್ಲಾ, ಸಾಕಪ್ಪಾ ಬಿಟ್ಟುಬಿಡ್ರಪ್ಪಾ ಅಂದ್ರು ಬಿಡ್ತಿಲ್ಲ. ಮುಂದಿನ ಸೀಸನ್, ಮುಂದಿನ ಸೀಸನ್ ಅಂತ ಮಾಡಿಸಿದ್ರು.
  • ನಾನು ಮಾಡಲ್ಲ ಎನ್ನುತ್ತಿದ್ದಂತೆ. ವೇದಿಕೆಗೆ ಅವರು ಬರ್ತಾರೆ? ಇವರು ಬರ್ತಾರೆ ಎಂದು 2-3 ಹೆಸರುಗಳು ಕೇಳಿ ಬರ್ತಾನೆ ಇದೆ. ನಾನು ಯಾರೋ ಬಂದು ನನ್ನ ವೇದಿಕೆ ಕಿತ್ತುಕೊಳ್ತಾರೆ ಎನ್ನುವ ಯೋಚನೆ ಮಾಡ್ಬೇಕಾ? ಅಥವಾ ವೇದಿಕೆ ಮೇಲೆ ನಾನು ನಿಂತ್ರೆನೇ ಈ ವೇದಿಕೆಗೆ ತೂಕ ಜಾಸ್ತಿ ಅನ್ನೋ ಕಾನ್ಫಿಡೆನ್ಸ್ ನಲ್ಲಿ ನಿಲ್ಬೇಕಾ ಎಂದು ಹೇಳಿದೆ ಕಿಚ್ಚ ಸುದೀಪ್, ಮೀಸೆ ತಿರುಗಿದ್ರು.
Share This Article
Leave a comment