ಬೆಳಗಾವಿ | ಕೆರೆಯಲ್ಲಿ ತಾಯಿ, ಮಗನ ಮೃತದೇಹ ಪತ್ತೆ

public wpadmin

ಬೆಳಗಾವಿ: ಅಂದಾಜು 40 ವರ್ಷದ ತಾಯಿ ಜೊತೆ ಮಗನ ಶವ ಭಾರತೀಯ ಸೇನೆ ವ್ಯಾಪ್ತಿಯಲ್ಲಿರುವ ಹಿಂಡಲಗಾ ಗಣಪತಿ ದೇವಸ್ಥಾನದ ಮುಂಭಾಗದಲ್ಲಿರುವ ಕೊಳದಲ್ಲಿ ಪತ್ತೆಯಾಗಿದೆ.

ತಡರಾತ್ರಿ ಬಂದು ಗಣಪತಿ ಕೊಳದಲ್ಲಿ ಬಿದ್ದು ತಾಯಿ ಮತ್ತು ಮಗ ಇಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 

ಬೆಳಗಾವಿ (Belagavi) ತಾಲೂಕಿನ ಕಲಕಾಂಬ ಗ್ರಾಮದ ಕವಿತಾ ಬಸವಂತ ಜುನೇಬೆಳಗಾಂವಕರ್, ಸಮರ್ಥ ಬಸವಂತ ಜುನೇಬೆಳಗಾಂವಕರ್ ಶವ ಸಿಕ್ಕಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕ್ಯಾಂಪ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Share This Article
Leave a comment