ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ದಿನದಂತೆ ಈ ಘಟನೆ ನಡೆದ ದಿನವೂ ಆಕೆಯ ಪತಿ ಕೆಲಸಕ್ಕೆ ಹೋಗಿದ್ದರು. ಆಗ ಮನೆಯಲ್ಲಿ ಒಬ್ಬಳೇ ಇದ್ದ ಆಕೆ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ಆ ಮಹಿಳೆಗೆ 4 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಆದರೆ, ತನ್ನ ಗಂಡ ಕಪ್ಪಗಿದ್ದಾನೆ ಎಂದು ಆಕೆ ಕೊರಗುತ್ತಿದ್ದಳು. ತನ್ನ ಮದುವೆಯಿಂದ ಅವಳು ಸಂತೋಷವಾಗಿರಲಿಲ್ಲ. ಆಕೆಯ ಆತ್ಮಹತ್ಯೆಯ ನಂತರ ಸುತ್ತಮುತ್ತಲಿನವರನ್ನು ವಿಚಾರಿಸಿದಾಗ ಆ ಮಹಿಳೆಗೆ ಪತಿ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ.
ತನಗೆ ಇನ್ನೂ ಸುಂದರವಾದ ಗಂಡ ಬೇಕಾಗಿತ್ತು ಎಂಬ ಕೊರಗು ಆ ಮಹಿಳೆಗೆ ಕಾಡುತ್ತಿತ್ತು. ವೈವಾಹಿಕ ಜೀವನದಲ್ಲಿ ಆಕೆ ಖುಷಿಯಾಗಿರಲಿಲ್ಲ. ಸ್ಥಳೀಯ ಜನರ ಪ್ರಕಾರ, ಆಕೆಯ ಪತಿ ಕಪ್ಪಗಿದ್ದು, ಅವಳು ಬಿಳಿ ಬಣ್ಣದ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದಳು.
ಈ ಪ್ರಕರಣವು ಹತ್ರಾಸ್ನ ಸಿಯಾಲ್ ಖೇಡಾ ಮೊಹಲ್ಲಾದಲ್ಲಿ ನೆಲೆಸಿರುವ ತೌಫಿಕ್ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆಯಷ್ಟೇ ಆತ 25 ವರ್ಷದ ಸಿಮ್ರಾನ್ ಅವರನ್ನು ವಿವಾಹವಾಗಿದ್ದರು. ಸಿಮ್ರಾನ್ ಬರೌಲಾದ ಅಲಿಗಢದ ಜಫರಾಬಾದ್ ನಿವಾಸಿಯಾಗಿದ್ದರು. ತೌಫಿಕ್ ತನ್ನ ಪತ್ನಿಯೊಂದಿಗೆ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ. ತೌಫಿಕ್ ಕೆಲಸಕ್ಕೆ ತೆರಳಿದ ಬಳಿಕ ಆತನ ಪತ್ನಿ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.
ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದ ಸಿಮ್ರಾನ್ನನ್ನು ನೋಡಿದ ಅಕ್ಕಪಕ್ಕದ ಕೆಲವರು ಆಕೆಯ ಪತಿಗೆ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಮಹಿಳೆಯ ತಾಯಿಯ ಕಡೆಯವರೂ ಅಲ್ಲಿಗೆ ಬಂದಿದ್ದರು.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಕುರಿತು ಮೃತನ ಸಹೋದರ ಫಕ್ರುದ್ದೀನ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ತನ್ನ ಸಹೋದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಲ್ಕು ತಿಂಗಳ ಹಿಂದೆ ತೌಫಿಕ್ ಎಂಬಾತನಿಗೆ ತಂಗಿಯನ್ನು ಮದುವೆ ಮಾಡಿಸಿದ್ದೆ. ತಂಗಿಗೆ ಹುಡುಗ ಇಷ್ಟವಾಗಲಿಲ್ಲ. ಇದರಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಅನುಮಾನವಿದೆ ಎಂದಿದ್ದಾರೆ.