ಫಿಟ್ನೆಸ್ ವಿಷಯದಲ್ಲಿ ವಾಕಿಂಗ್ ಹಾಗೂ ರನ್ನಿಂಗ್ ಎರಡೂ ಅದ್ಭುತ ಪ್ರಯೋಜನಗಳನ್ನೊಳಗೊಂಡಿದೆ. ಎಲ್ಲರಿಗೂ ರನ್ನಿಂಗ್ ಮಾಡಲು ಸಾಧ್ಯವಿಲ್ಲ ಆದರೆ ವಾಕಿಂಗ್ ಅನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಸಾಕಷ್ಟು ಜನರಿಗೆ ಆರೋಗ್ಯ ವೃದ್ಧಿಸುವಲ್ಲಿ ತೂಕ ಇಳಿಕೆಯಲ್ಲಿ ರನ್ನಿಂಗ್ ಒಳ್ಳೆಯದೇ, ವಾಕಿಂಗ್ ಒಳ್ಳೆಯದೇ? ಎಂಬ ಸಂದೇಹ ಬಂದೇ ಬರುತ್ತದೆ. ಆದರೆ ರನ್ನಿಂಗ್ನಿಂದ ಹೇಗೆಲ್ಲಾ ಪ್ರಯೋಜನವಿದೆಯೋ ಅದೇ ರೀತಿ ವಾಕಿಂಗ್ ಮಾಡುವುದರಿಂದ ಇನ್ನೂ ಹೆಚ್ಚು ಪ್ರಯೋಜನಗಳಿವೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ರನ್ನಿಂಗ್ ಬದಲಿಗೆ ವಾಕಿಂಗ್ ಆಯ್ದುಕೊಂಡಿರುವವರು ಸ್ವತಃ ವಾಕಿಂಗ್ನಿಂದಿರುವ ಏಳು ಪ್ರಯೋಜನಗಳ ಬಗ್ಗೆ ತಿಳಿಸಿದ್ದು, ಖಂಡಿತ ರನ್ನಿಂಗ್ ಮಾಡಬೇಕಾ, ವಾಕಿಂಗ್ ಮಾಡಬೇಕಾ ಎಂಬ ಗೊಂದಲದಲ್ಲಿರುವವರಿಗೆ ಪರಿಹಾರ ನೀಡಲಿದೆ.
ಆಯುಷ್ಯ ದೀರ್ಘವಾಗುತ್ತದೆ
ಆಯುಷ್ಯ ದೀರ್ಘವಾಗುತ್ತದೆ
ನಡಿಗೆಯನ್ನು ಒಂದು ವ್ಯಾಯಾಮದಂತೆ ನೀವು ನಿರ್ವಹಿಸಿದರೆ ಖಂಡಿತ ಇದು ನಿಮ್ಮ ಆಯುಷ್ಯವನ್ನು ವೃದ್ಧಿಸುತ್ತದೆ. ನಮ್ಮ ಕೀಲುಗಳು ನಾವು ಚಲಿಸಿದಂತೆ ಸಕ್ರಿಯಗೊಳ್ಳುತ್ತವೆ.
ನಮ್ಮ ಚಟುವಟಿಕೆಯ ಮಟ್ಟವನ್ನಾಧರಿಸಿ ಹೃದಯ ರಕ್ತವನ್ನು ಪ್ರವಹಿಸುತ್ತದೆ ಹಾಗೂ ನಮ್ಮ ಆಮ್ಲಜನಕದ ಅಗತ್ಯಗಳಿಗೆ ಅನುಸಾರವಾಗಿ ಶ್ವಾಸಕೋಶಗಳು ಹಿಗ್ಗುತ್ತವೆ, ಕುಗ್ಗುತ್ತವೆ. ಯಾವುದೇ ರೀತಿಯ ದೈಹಿಕ ವ್ಯಾಯಾಮಗಳಿರಲಿ ಮುಖ್ಯವಾಗಿ ಚಲನೆಗೆ ಆದ್ಯತೆ ನೀಡಲಾಗುತ್ತದೆ ನಮ್ಮ ದೇಹವನ್ನು ಚಲಿಸುವುದಕ್ಕೆ ಅಗತ್ಯವಾಗಿರುವಂತೆ ರೂಪಿಸಲಾಗಿದೆ.
ಎಲ್ಲರಿಗೂ ಒಂದು ಭಾವನೆ ಇದೆ ಬೆವರಿಳಿಸಿ ಮಾಡುವ ವರ್ಕೌಟ್ಗಳು ಮಾತ್ರ ಪ್ರಯೋಜನ ನೀಡುತ್ತದೆ ಆದರೆ ಕಡಿಮೆ ಇಂಟೆನ್ಸಿಟಿಯುಳ್ಳ ನಡಿಗೆಯನ್ನು ನಿರಂತರವಾಗಿ ಕಟ್ಟುನಿಟ್ಟಾಗಿ ಮಾಡಿದರೆ ಕೂಡ ಪ್ರಯೋಜನ ಇದ್ದೇ ಇದೆ. ಅದರ ಒಂದು ಪ್ರಯೋಜನ ಎಂದರೆ ನಮ್ಮ ಆಯುಷ್ಯದ ವೃದ್ಧಿಯಾಗಿದೆ.
ಮಾನಸಿಕ ಆರೋಗ್ಯಕ್ಕೆ ಉತ್ತಮ
ವ್ಯಾಯಾಮದಲ್ಲಿ ನಮ್ಮ ಮಿತಿಗಿಂತ ಕೊಂಚ ಪ್ರಯತ್ನ ಪಡುವುದು ಹಾಗೂ ಹೃದಯದ ಬಡಿತವನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಆದರೆ ನಿಮ್ಮ ಸಂಪೂರ್ಣ ಆರೋಗ್ಯಕ್ಕೆ ಈ ನಿಯಮದ ಅಗತ್ಯವೇ ಇಲ್ಲ ಎಂದು ತಜ್ಞರು ಹೇಳುತ್ತಾರೆ.
ನಿಮ್ಮ ಮನಸ್ಸು ಹಾಗೂ ದೇಹವನ್ನು ಒಂದಕ್ಕೊಂದು ಸಂಯೋಜಿಸಿ ಮಾಡುವ ವ್ಯಾಯಾಮಗಳೇ ಸ್ವಾಸ್ಥ್ಯಕ್ಕೆ ಕೊಡುಗೆ ನೀಡುತ್ತವೆ ಎಂಬುದು ಅವರ ಸಲಹೆಯಾಗಿದೆ.
ಹಾಗಾಗಿ ನಡಿಗೆಯನ್ನು ಕಡೆಗಣಿಸದಿರಿ. ಏಕೆಂದರೆ ಪ್ರಶಾಂತ, ಪರಿಶುದ್ಧ ವಾತಾವರಣದಲ್ಲಿ ನಡೆಯುವಾಗ ನಿಮ್ಮ ಮನಸ್ಸು ಕೂಡ ಶಾಂತಗೊಳ್ಳುತ್ತದೆ ನಿಮಗೆ ಗೊತ್ತಿಲ್ಲದಂತೆ ನಿಮ್ಮ ದೇಹದೊಂದಿಗೆ ಮನಸ್ಸು ಒಗ್ಗೂಡಿ ಚೇತರಿಕೆಯನ್ನುಂಟು ಮಾಡುತ್ತದೆ. ಹಾಗಾಗಿ ಮಾನಸಿಕ ಪ್ರಯೋಜನವುಳ್ಳ ವ್ಯಾಯಾಮಕ್ಕೂ ಆದ್ಯತೆ ನೀಡಿ.
ಹಲ್ಲುನೋವಿಗೆ ಸಿಂಪಲ್ ಮನೆಮದ್ದು!ಇನ್ನಷ್ಟು ಸುದ್ದಿ…
ಗಾಯವಾಗುವ ಅಪಾಯ ಕಡಿಮೆ ಇರುತ್ತದೆ
ರನ್ನಿಂಗ್ ಅಥವಾ ಓಟ ಆರೋಗ್ಯದ ವಿಷಯದಲ್ಲಿ ಉತ್ತಮವಾಗಿದ್ದರೂ ಓಟಕ್ಕೂ ಮುನ್ನ ನೀವು ಕೆಲವೊಂದು ವಿಷಯಗಳನ್ನು ಅರಿತುಕೊಳ್ಳಬೇಕಾಗುತ್ತದೆ.
ಓಡುವ ಸಮಯದಲ್ಲಿ ಮಸಲ್ ಕ್ರ್ಯಾಂಪ್ಗಳಾಗುವುದು, ಗಾಯಗಳಾಗುವುದು ಸಹಜವಾಗಿರುತ್ತದೆ. ದೇಹಕ್ಕೆ ಬೇಗನೇ ಆಯಾಸವಾಗುತ್ತದೆ. ಓಟದ ವಿಧಕ್ಕೆ ದೇಹ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.
ಆದರೆ ನಡಿಗೆಯ ವಿಷಯದಲ್ಲಿ ಇಂತಹ ಯಾವುದೇ ಅಪಾಯಗಳಿರುವುದಿಲ್ಲ. ಒಮ್ಮೆಗೆ ವೇಗವಾಗಿ ನಡೆಯಲಾಗದಿದ್ದರೆ ನಿಧಾನವಾಗಿ ನಿಮ್ಮ ವಾಕಿಂಗ್ ಅನ್ನು ಆರಂಭಿಸಬಹುದಾಗಿದೆ.
ಹೃದಯ ರಕ್ತನಾಳದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ
ಹೃದಯ ರಕ್ತನಾಳದ ಆರೋಗ್ಯಕ್ಕೆ ನಡಿಗೆ ಕೊಡುಗೆ ನೀಡುತ್ತದೆ. ವಾಕಿಂಗ್ ಅಥವಾ ನಡಿಗೆಯಲ್ಲಿ ದೇಹ, ಮನಸ್ಸಿಗೆ ಯಾವುದೇ ಒತ್ತಡವಿರುವುದಿಲ್ಲ. ಪ್ರಶಾಂತ ವಾತಾವರಣದಲ್ಲಿ, ಯಾವುದೇ ಒತ್ತಡವಿಲ್ಲದೆ ನಡಿಗೆಯನ್ನು ಕೈಗೊಳ್ಳುವುದು ಹೃದಯ ರಕ್ತನಾಳದ ಆರೋಗ್ಯವನ್ನು ವೃದ್ಧಿಸುತ್ತದೆ.
ನಿದ್ರೆಯ ಗುಣಮಟ್ಟ ಉತ್ತಮಗೊಳ್ಳುತ್ತದೆ
ಮೊದಲೇ ಹೇಳಿದಂತೆ ನಡಿಗೆಯಿಂದ ಮಾನಸಿಕ ಪ್ರಶಾಂತತೆ ದೊರೆಯುತ್ತದೆ ಇದರಿಂದ ನಿದ್ರೆಯ ಗುಣಮಟ್ಟ ಕೂಡ ಉತ್ತಮಗೊಳ್ಳುತ್ತದೆ. ಯಾವುದೇ ರೀತಿಯ ಆತಂಕ, ಖಿನ್ನತೆಗೆ ಮನಸ್ಸು ಒಳಗಾಗುವುದಿಲ್ಲ ಹೀಗಾಗಿ ಪ್ರಶಾಂತ ನಿದ್ರೆ ನಮ್ಮದಾಗುತ್ತದೆ
ದೀರ್ಘಕಾಲದ ಕಾಯಿಲೆಗಳು ಕಡಿಮೆ ಸಂಭವಿಸುತ್ತವೆ
ನಮ್ಮ ದೇಹದ ಆರೋಗ್ಯ ಪ್ರಯೋಜನಗಳೊಂದಿಗೆ ವಾಕಿಂಗ್ ಸಂಬಂಧ ಹೊಂದಿದೆ. ವಿವಿಧ ದೀರ್ಘಕಾಲದ ಕಾಯಿಲೆಗಳೊಂದಿಗೆ ಹೋರಾಡುತ್ತದೆ. ದೇಹವನ್ನು ವಾಕಿಂಗ್ ಬಲಪಡಿಸುತ್ತದೆ ಇದರೊಂದಿಗೆ ವಿವಿಧ ರೋಗಗಳೊಂದಿಗೆ ಹೋರಾಡುವುದಕ್ಕೆ ಕೂಡ ದೇಹವನ್ನು ಸಿದ್ಧಪಡಿಸುತ್ತದೆ.
ಉತ್ಪಾದಕತೆಯನ್ನು ಹೆಚ್ಚಿಸುತ್ತದೆ
ಸುತ್ತಲಿನ ವಾತಾವರಣವನ್ನು ಗಮನಿಸಿಕೊಂಡು ದಿನವನ್ನು ರೂಪಿಸಲು ನಡಿಗೆ ಕಲಿಸುತ್ತದೆ. ಕೆಲಸ ಅಥವಾ ವೈಯಕ್ತಿಕ ಜೀವನದಲ್ಲಿ ಸಿಲುಕಿಕೊಂಡಿರುವವರಿಗೆ ಕೂಡ ಒಂದು ಸರಳ ನಡಿಗೆ ತಾಜಾ ದೃಷ್ಟಿಕೋನಗಳು ಮತ್ತು ನವೀನ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ.