ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ದರ್ಶನ್ ನೋಡಲು 9ನೇ ಬಾರಿ ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ಕೊಟ್ಟಿದ್ದಾರೆ. ಅತ್ತಿಗೆ ವಿಜಯಲಕ್ಷ್ಮಿ ದಿನಕರ್ ತೂಗುದೀಪ ಕೂಡ ಜೈಲಿಗೆ ಭೇಟಿ ನೀಡಿದ್ದಾರೆ.
ಬೇಲ್ ರಿಜೆಕ್ಟ್ ಆದ ಬಳಿಕ ಮೊದಲ ಬಾರಿಗೆ ವಿಜಯಲಕ್ಷ್ಮಿ , ದಿನಕರ್, ಚಂದ್ರು, ಸುಶಾಂತ್ ನಾಯ್ಡು ಸೇರಿದಂತೆ 6 ಜನ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಪ್ರತಿ ಬಾರಿಯಂತೆ ಇಂದು (ಅ.18) ಕೂಡ ಎರಡು ಬ್ಯಾಗ್ಗಳಲ್ಲಿ ಬಟ್ಟೆ, ಡ್ರೈ ಫ್ರೂಟ್ಸ್, ಬೇಕರಿ ತಿನಿಸುಗಳನ್ನು ತಂದಿದ್ದಾರೆ. ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ದರ್ಶನ್ಗೆ ಚಿಕಿತ್ಸೆಗೆ ಸಹಕರಿಸುವಂತೆ ಪತ್ನಿ ಮನವಿ ಮಾಡಿದ್ದಾರೆ. ಆ ನಂತರ ಕಾನೂನು ಸಮರದ ಕುರಿತು ಚರ್ಚಿಸಿದ್ದಾರೆ.
ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ಜೂನ್ 11ರಂದು ದರ್ಶನ್ ಅರೆಸ್ಟ್ ಆಗಿದ್ದರು.