ಇದು ಮಾಡ್ರೆನ್ ಯುಗ, ಜನ ಬದಲಾಗಿದ್ದಾರೆ, ಜಗತ್ತು ಮುಂದುವರಿದಿದೆ. ಅದೇ ರೀತಿ ಡೇಟಿಂಗ್ ಈಗ ಯುವಜನತೆಯಲ್ಲಿ ಟ್ರೆಂಡ್ ಆಗಿದೆ. ಅದರಲ್ಲೂ ಯುವ ಜನತೆಯಲ್ಲಿ ಬ್ಲೈಂಡ್ ಡೇಟ್ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿರುವುದನ್ನು ನೀವು ಗಮನಿಸಬಹುದು.
ವರದಿ ಪ್ರಕಾರ, ಸಾಮಾಜಿಕ ಜಾಲತಾಣ ಮತ್ತು ಡೇಟಿಂಗ್ ಅಪ್ಲಿಕೇಶನ್ಗಳ ಮೂಲಕ ಜನರು ಪರಸ್ಪರ ವೈಯಕ್ತಿಕವಾಗಿ ತಿಳಿದಿಲ್ಲದಿದ್ದರೂ ಸಹ ಡೇಟಿಂಗ್ಗೆ ಹೋಗಲು ನಿರ್ಧರಿಸುತ್ತಾರೆ. ಈ ಅನುಭವವು ಥ್ರಿಲ್ಲಿಂಗ್ ಆಗಿದ್ದರೂ, ಹುಡುಗಿಯರಿಗೆ ಅನೇಕ ಅಪಾಯಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆಯಿಂದಿರುವುದು ಬಹಳ ಮುಖ್ಯ ಮತ್ತು ಈ ಪ್ರವೃತ್ತಿಯನ್ನು ಸಾಧ್ಯವಾದಷ್ಟು ತಪ್ಪಿಸುವುದು ಬಹಳ ಉತ್ತಮ.
ಸುರಕ್ಷತೆಯ ಬಗ್ಗೆ ಕಾಳಜಿ: ಬ್ಲೈಂಡ್ ಡೇಟಿಂಗ್ಗೆ ಹೋಗುವ ಹುಡುಗಿಯರಿಗೆ ಸುರಕ್ಷತೆಗೆ ಸಂಬಂಧಿಸಿದಂತೆ ಅನೇಕ ಸವಾಲುಗಳು ಎದುರಾಗುತ್ತದೆ. ಏಕೆಂದರೆ ಹುಡುಗಿಯರು ತಾವು ಭೇಟಿಯಾಗಲಿರುವ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ಅದರಲ್ಲೂ ಡೇಟಿಂಗ್ ಅಪ್ಲಿಕೇಶನ್ಗಳಲ್ಲಿ ನಕಲಿ ಪ್ರೊಫೈಲ್ಗಳನ್ನು ಕ್ರಿಯೆಟ್ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಅವರ ಉದ್ದೇಶಗಳೇನು ಎಂಬುವುದನ್ನು ಊಹಿಸಲು ಕಷ್ಟವಾಗುತ್ತದೆ. ಈ ರೀತಿಯ ಡೇಟಿಂಗ್ ದೈಹಿಕ ಮತ್ತು ಮಾನಸಿಕ ಶೋಷಣೆಯ ಅಪಾಯವನ್ನು ಹೆಚ್ಚಿಸುತ್ತದೆ.
ಡೇಟಿಂಗ್ ವೇಳೆ ಅತ್ಯಾಚಾರ ಮತ್ತು ಕಿರುಕುಳ: ಬ್ಲೈಂಡ್ ಡೇಟಿಂಗ್ನಿಂದ ಎದುರಾಗುವ ದೊಡ್ಡ ಅಪಾಯವೆಂದರೆ ಲೈಂಗಿಕ ಕಿರುಕುಳ ಅಥವಾ ಡೇಟಿಂಗ್ ನೆಪದಲ್ಲಿ ಅತ್ಯಾಚಾರ. ಸಾಮಾನ್ಯವಾಗಿ ಹುಡುಗಿಯರು ತಾವು ಡೇಟಿಂಗ್ ಮಾಡಲು ಹೊರಟಿರು ವ್ಯಕ್ತಿ ಎಷ್ಟು ನಂಬಿಕೆಗೆ ಎಷ್ಟು ಅರ್ಹರು ಎಂಬುವುದರ ಬಗ್ಗೆ ತಿಳಿದಿರುವುದಿಲ್ಲ.
ಅನೇಕ ಬಾರಿ ಇಂತಹ ವೇಳೆ ಹುಡುಗಿಯರ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ. ಇದಲ್ಲದೇ, ಕಿರುಕುಳದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹುಡುಗಿಯರು ಬ್ಲೈಂಡ್ ಡೇಟಿಂಗ್ನಲ್ಲಿ ಈ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹುಡುಗರು ಕೆಲವು ವೈಯಕ್ತಿಕ ಫೋಟೋಗಳನ್ನು ತೆಗೆದುಕೊಳ್ಳುವ ಮೂಲಕ ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡಬಹುದು.
ಸೈಬರ್ ಕ್ರೈಂ ಮತ್ತು ಗೌಪ್ಯತೆಯ ಮೇಲೆ ದಾಳಿ: ಡೇಟಿಂಗ್ ಅಪ್ಲಿಕೇಶನ್ಗಳ ಮೂಲಕ ಮಾಡುವ ಬ್ಲೈಂಟ್ ಡೇಟಿಂಗ್ನಲ್ಲಿ ಸೈಬರ್ ಕ್ರೈಂ ಅಪಾಯವೂ ಹೆಚ್ಚಾಗಿರುತ್ತದೆ. ನಕಲಿ ಪ್ರೊಫೈಲ್ಗಳ ಮೂಲಕ ಜನರು ಹುಡುಗಿಯರ ವೈಯಕ್ತಿಕ ಮಾಹಿತಿಯನ್ನು ಪಡೆಯಬಹುದು ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಕೆಲವೊಮ್ಮೆ ಹುಡುಗಿಯರ ಫೋಟೋಗಳು ಅಥವಾ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ದುರುಪಯೋಗಪಡಿಸಿಕೊಳ್ಳಬಹುದು, ಇದು ಅವರ ಖಾಸಗಿತನದ ಮೇಲೆ ಪರಿಣಾಮ ಬೀರಬಹುದು.
ಹುಡುಗಿಯರೇ ಇದೆಷ್ಟು ಡೇಂಜರ್ ಗೊತ್ತಾ?; ಗೊತ್ತಿಲ್ಲದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡೋ ಮುನ್ನ ಹುಷಾರ್
Leave a comment
Leave a comment