ನಿಮ್ಮ ಮೆದುಳು ಅತ್ಯಂತ ಚುರುಕಾಗಿ ಕೆಲಸ ಮಾಡುವುದೇ ಬಾತ್ರೂಮ್ನಲ್ಲಿ. ಅಲ್ಲಿಯೇ ಹೊಸ ಹೊಸ ಐಡಿಯಾಗಳು ಸೃಷ್ಟಿಯಾಗುವುದು. ಅತ್ಯಂತ ಮೇಧಾವಿಗಳೆಲ್ಲಾ ಹೆಚ್ಚು ಹೆಚ್ಚು ಐಡಿಯಾಗಳನ್ನು ಕಂಡುಕೊಂಡಿದ್ದೇ ಅಲ್ಲಿ ಎಂಬ ಮಾತುಗಳು ಕೂಡ ಇವೆ. ಅದೊಂದೇ ಜಾಗದಲ್ಲಿ ನೀವು ನೀವಾಗಿ ಉಳಿಯಲು ಸಾಧ್ಯ. ಇತ್ತೀಚೆಗೆ ಇಂತಹ ಏಕಾಂತ ಸಮಯವನ್ನೂ ಕೊಲ್ಲಲು ಈಗ ಮೊಬೈಲ್ ಎಂಬ ಬೇಡದ ಸಂಗಾತಿಯೂ ಕೂಡ ಅಲ್ಲಿ ಅಲ್ಲಿ ಸೆಟ್ಲ್ ಆಗಿಬಿಟ್ಟಿದೆ. ಇದು ನಿಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಲಿದೆ ಅನ್ನೋದು ಗೊತ್ತಾ?
ಯಾವಾಗಲೇ ಆಗಲಿ ಬೆಳಗ್ಗೆ ನೀವು ಬಹಿರ್ದೆಸೆಗೆ ಅಂತ ಹೋದಾಗ ಆಗಲಿ. ಇಲ್ಲವೇ ಬೇರೆ ಸಮಯದಲ್ಲಾಗಲಿ ಟಾಯ್ಲೆಟ್ನಲ್ಲಿ ನೀವು ಮೊಬೈಲ್ನೊಂದಿಗೆ ಅಂಟಿಕೊಂಡರೆ ಹಲವು ಸಮಸ್ಯೆಗಳು ಶುರುವಾಗುತ್ತವೆ. ನೀವು ಮೊಬೈಲ್ನ್ನು ಟಾಯ್ಲೆಟ್ಗೆ ತೆಗೆದುಕೊಂಡು ಹೋಗಿದ್ದೇ ಆದಲ್ಲಿ ಹಲವು ಆರೋಗ್ಯ ಹಾನಿಕಾರ ಸಮಸ್ಯಗಳು ಉಂಟಾಗೋದು ಗ್ಯಾರಂಟಿ. ಅದು ಹಲವು ಕೀಟಾಣುಗಳಿಂದಲೇ ಶುರುವಾಗುತ್ತದೆ. ನಮಗೆಲ್ಲಾ ಗೊತ್ತು ಬಾತ್ರೂಮ್ ಅಂದ್ರೆ ಅದು ಬ್ಯಾಕ್ಟಿರಿಯಾಗಳ ಗೂಡು ಅಂತ. ಅಲ್ಲಿ ನೀವು ಮೊಬೈಲ್ ತೆಗೆದುಕೊಂಡು ಹೋಗುವುದರಿಂದ, ಅಲ್ಲಿರುವ ಬ್ಯಾಕ್ಟಿರಿಯಾಗಳು,ನೀವು ಅಲ್ಲಿ ಮೊಬೈಲ್ ಬಳಸುವುದರಿಂದ ಬಾತ್ರೂಮ್ ಆಚೆಗೂ ಹರಡಿಕೊಂಡು ಹಲವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗೋದು ಪಕ್ಕಾ.
ಬಾತ್ರೂಮ್ಗಳಲ್ಲಿ ಇತ್ತೀಚೆಗೆ ಮೊಬೈಲ್ನಲ್ಲಿ ಕಾಲ ಕಳೆಯುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ನೀವು ಟಾಯ್ಲೆಟ್ನಲ್ಲಿ ಮೊಬೈಲ್ನೊಂದಿಗೆ ಕೂತಾಗ ಏನೇನೋ ನೋಡುತ್ತಾ ಸುಮ್ಮನೆ ಕೆಲಸ ಮುಗಿದ ಮೇಲೆಯೂ ಕೂಡ ಅಲ್ಲಿ ಸಮಯ ಕಳೆಯುತ್ತಿರುತ್ತಾರೆ. ಅನಾವಶ್ಯಕವಾಗಿ ನಮ್ಮ ಗುದನಾಳದ ರಕ್ತನಾಳದ ಮೇಲೆ ಅನವಾಶ್ಯಕವಾಗಿ ಹೆಚ್ಚು ಒತ್ತಡ ಬೀಳುವುದರಿಂದ ಪೈಲ್ಸ್ನಂತಹ ಸಮಸ್ಯೆಗಳು ಶುರುವಾಗುತ್ತವೆ. ಧರ್ಮಶಿಲಾ ನಾರಾಯಣ ಆಸ್ಪತ್ರೆಯ ವೈದ್ಯರಾದ ಡಾ. ಮಹೇಶ್ ಗುಪ್ತಾ ಅವರು ಹೇಳುವ ಪ್ರಕಾರ. ನೀವು ಒಂದು ವೇಳೆ ನಾನು ಮೊಬೈಲ್ ಮರೆತು ಬಂದೆ ಅಂತ ವಾಪಸ್ ಟಾಯ್ಲೆಟ್ಗೆ ಹೋಗಿ ಬಂದಿರುವವರಲ್ಲಿ ಒಬ್ಬರಾದರೆ ತಿಳಿದುಕೊಳ್ಳಿ ನೀವು ಅವಶ್ಯಕತೆಗಿಂತ ಹೆಚ್ಚು ಸಮಯವನ್ನು ಅಲ್ಲಿ ಕೊಂದಿದ್ದೀರಿ ಎಂದು. ಅಲ್ಲಿ ಅನಾವಶ್ಯಕವಾಗಿ ಸ್ಕ್ರೀನ್ ಸ್ಕ್ರಾಲ್ ಮಾಡುತ್ತಾ ಕುಳಿತರೆ. ರೀಲ್ಸ್ಗಳಲ್ಲಿ ಕಳೆದು ಹೋದರೆ ಆಗುವ ದೊಡ್ಡ ಪರಿಣಾಮಗಳು ಬಹಳ ಇವೆ. ಈ ತರಹದ ರೂಢಿಗಳು ನಿಮಗೆ ಪೈಲ್ಸ್ನಂತಹ ಸಮಸ್ಯೆಗಳನ್ನ ತಂದಿಡುವುದರಲ್ಲಿ ಸಂದೇಹವೇ ಇಲ್ಲೆ ಎನ್ನುತ್ತಾರೆ ಡಾ. ಮಹೇಶ್ ಗುಪ್ತಾ.
ಹೀಗ ದೀರ್ಘವಾಗಿ ಒಂದೇ ಜಾಗದಲ್ಲಿ ಒಂದೇ ಭಂಗಿಯಲ್ಲಿ ಕೂಡುವುದಿಂದಾಗಿ ಗುದನಾಳದಲ್ಲಿರುವ ರಕ್ತನಾಳಗಳ ಮೇಲೆ ಹೆಚ್ಚು ಪ್ರೆಶರ್ ಉಂಟಾಗಿ ಪೈಲ್ಸ್ನಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚೆಗೆ ಜನರು ಬಾತ್ರೂಮ್ನಲ್ಲಿ 45 ರಿಂದ 50 ನಿಮಿಷಗಳ ಕಾಲ ಕುಳಿತಿರುತ್ತಾರೆ. ಇದು ಅತ್ಯಂತ ಸುದೀರ್ಘವಾದ ಸಮಯ. ಹೀಗಾಗಿ ಇದು ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಗುದದ್ವಾರದಲ್ಲಿ ನೋವು, ನೆವೆ ಹಾಗೂ ರಕ್ತಸ್ರಾವದಂತಹ ಸಮಸ್ಯೆಗಳು ಇದರಿಂದ ಶುರುವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ.