ಬಾಲಿವುಡ್ ನಟಿ ಆಲಿಯಾ ಭಟ್ ಸದ್ಯ ‘ಜಿಗ್ರಾ’ ಸಿನಿಮಾದ ರಿಲೀಸ್ಗೆ ಎದುರು ನೋಡ್ತಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇನ್ನೂ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಲಿಯಾ ತಂಡಕ್ಕೆ ಸೌತ್ ನಟಿ ಸಮಂತಾ ಸಾಥ್ ನೀಡಿದ್ದಾರೆ. ಈ ವೇಳೆ, ಪುರುಷರ ಪ್ರಪಂಚದಲ್ಲಿ ಒಬ್ಬ ಮಹಿಳೆಯಾಗಿ ನೀವು ಇದೀಗ ನಿಂತಿರೋದು ಸುಲಭವಲ್ಲ ಎಂದು ಸಮಂತಾರನ್ನು ಆಲಿಯಾ ಹಾಡಿಹೊಗಳಿದ್ದಾರೆ.
ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಹಿಂದಿ ಮಾತ್ರವಲ್ಲ ತೆಲುಗಿನಲ್ಲೂ ಕೂಡ ಬಿಡುಗಡೆಯಾಗುತ್ತಿದೆ. ಹೈದರಾಬಾದ್ನಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯದಲ್ಲಿ ಸಮಂತಾ ಅತಿಥಿಯಾಗಿ ಭಾಗವಹಿಸಿದ್ದರು. ನಟಿಯ ಕುರಿತು ಆಲಿಯಾ ಮಾತನಾಡಿ, ಪ್ರೀತಿಯ ಸಮಂತಾ, ನೀವು ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ನಲ್ಲಿ ನಿಜವಾದ ಹೀರೋ. ಬದುಕಿನಲ್ಲಿ ನೀವು ಎದುರಿಸಿದ ಕಷ್ಟಗಳನ್ನು ಸಹಿಸಿಕೊಂಡು ಮತ್ತೆ ಎದ್ದು ನಿಲ್ಲುವ ರೀತಿ ಮತ್ತು ನಿಮ್ಮ ಟ್ಯಾಲೆಂಟ್ಗೆ ನಾನು ಅಭಿಮಾನಿ ಎಂದಿದ್ದಾರೆ. ಪುರುಷರ ಪ್ರಪಂಚದಲ್ಲಿ ಒಬ್ಬ ಮಹಿಳೆಯಾಗಿ ನೀವು ಇದೀಗ ನಿಂತಿರೋದು ಸುಲಭವಲ್ಲ. ಆದರೆ ನೀವು ಎಲ್ಲವನ್ನು ಮೀರಿ ನಿಂತಿದ್ದೀರಿ ಎಂದು ಹೊಗಳಿದ್ದಾರೆ.
ನೀವು ನಿಮ್ಮ ಕಾಲುಗಳ ಮೇಲೆ ನಿಂತು, ನಿಮ್ಮ ಶಕ್ತಿ, ಪ್ರತಿಭೆ, ಆತ್ಮವಿಶ್ವಾಸದಿಂದ ಹಲವಾರು ಮಹಿಳೆಯರಿಗೆ ಸ್ಪೂರ್ತಿ ಆಗಿದ್ದೀರಿ. ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಾನು ತುಸು ದೀರ್ಘವಾದ ಸಂದೇಶವನ್ನೇ ನಿಮಗೆ ಕಳಿಸಿದ್ದೆ. ಆದರೆ ನೀವು ಕೆಲವೇ ಸೆಕೆಂಡ್ಗಳನ್ನು ಪ್ರತಿಕ್ರಿಯಿಸಿ ನಾನು ಬರುತ್ತೇನೆ ಎಂದು ಖಾತ್ರಿಪಡಿಸಿದಿರಿ ಎಂದು ಸಮಂತಾಗೆ ನಟಿ ಧನ್ಯವಾದ ತಿಳಿಸಿದರು.