ಟೆಲ್ ಅವೀವ್: ಇರಾನ್ ಬೆಂಬಲಿತ ಹಿಜ್ಬುಲ್ಲಾ ಭಯೋತ್ಪಾದಕ ಗುಂಪಿನೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಲೆಬನಾನ್ಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಕೆಲ ಗಂಟೆಗಳ ನಂತರ ನೆತನ್ಯಾಹು ವೀಡಿಯೋವೊಂದರಲ್ಲಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಪ್ರಾಕೃತಿಕ ಸೌಂದರ್ಯ, ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದ ಮಧ್ಯಪ್ರಾಚ್ಯ ಈಗ ಹಿಜ್ಬುಲ್ಲಾ ಮದ್ದು ಗುಂಡುಗಳನ್ನು ಸಂಗ್ರಹಿಸಿದ್ದು, ಇರಾನಿನ ಮಿಲಿಟರಿ ನೆಲೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಕೂಡಲೇ ನಿಮ್ಮ ದೇಶವನ್ನು ಕೂಡಲೇ ಹಿಂತೆಗೆದುಕೊಳ್ಳಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇದು ಲೆಬನಾನ್ ಜನತೆಗೆ ನಮ್ಮ ಸಂದೇಶ. ನಿಮ್ಮ ದೇಶವನ್ನು ಮಧ್ಯಪ್ರಾಚ್ಯದ ಮುತ್ತು ಎಂದು ಕರೆಯುತ್ತಿದ್ದದ್ದು ನೆನಪಿದೆಯಾ? ಈಗ ಲೆಬನಾನ್ಗೆ ಏನಾಯಿತು? ನಿರಂಕುಶಾಧಿಕಾರಿಗಳು ಮತ್ತು ಭಯೋತ್ಪಾದಕರ ಗುಂಪು ಅದನ್ನು ನಾಶಪಡಿಸಿದರು. ಒಂದು ಕಾಲದಲ್ಲಿ ಲೆಬನಾನ್ ಸಹನೆ, ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಇಂದು ಅದು ಅವ್ಯವಸ್ಥೆಯ ಸ್ಥಳವಾಗಿದೆ, ಯುದ್ಧದ ಕೇಂದ್ರವಾಗಿದೆ ಎಂದು ಹೇಳಿದ್ದಾರೆ.