ಸಪ್ತಮಿ ಗೌಡ ಲುಕ್ ಗೆ ಫ್ಯಾನ್ಸ್ ಫಿದಾ; ನಿಮ್ಮಿಂದಲೇ ಸೀರೆಗೆ ಅಂದ ಎಂದ ಅಭಿಮಾನಿಗಳು

public wpadmin

ಸ್ಯಾಂಡಲ್‌ವುಡ್‌ನ ಸಪ್ತಮಿ ಗೌಡ ತುಂಬಾ ಸುಂದರವಾಗಿಯೇ ಕಾಣಿಸುತ್ತಿದ್ದಾರೆ. ನೇರಳೆ ಬಣ್ಣದ ಸೀರೆಯುಟ್ಟು ದಸರ ಹಬ್ಬಕ್ಕೆ ಚೆಂದಗೆ ರೆಡಿ ಆಗಿದ್ದಾರೆ. ಸೀರಿಗೆ ತಕ್ಕನಾಗಿಯೇ ಆಭರಣಗಳನ್ನ ತೊಟ್ಟಿದ್ದಾರೆ. ಧರಿಸಿರೋ ಸಿಲ್ವರ್ ಕಲರ್ ವಾಚ್ ಕೂಡ ಇಂಟ್ರಸ್ಟಿಂಗ್ ಆಗಿಯೇ ಕಾಣಿಸುತ್ತಿದೆ.

ಸಪ್ತಮಿ ಗೌಡ ಸದ್ಯ ಮೈಸೂರಿನಲ್ಲಿಯೇ ಇದ್ದಾರೆ ಅನಿಸುತ್ತದೆ. ದಸರ ಹಬ್ಬ ಅಲ್ವೇ.? ಊರ ಹಬ್ಬ ಅನ್ನುವ ಹಾಗೆ ಖುಷಿಯಿಂದಲೇ ಓಡಾಡಿದ್ದಾರೆ. ಚೆಂದಗೆ ಸೀರೆಯುಟ್ಟು ಹೊಳೆಯುತ್ತಿದ್ದಾರೆ.
ಸಪ್ತಮಿ ಗೌಡ ನೇರಳೆ ಬಣ್ಣದ ಸೀರೆಯಲ್ಲಿ ತುಂಬಾನೆ ಸುಂದರವಾಗಿಯೇ ಕಾಣಿಸುತ್ತಿದ್ದಾರೆ. ಒಳ್ಳೆ ಹೈಟ್ ಕೂಡ ಇದೆ. ಹಾಗಾಗಿಯೇ ಸೀರೆ ಇನ್ನೂ ಚೆಂದಗೆ ಕಾಣಿಸುತ್ತಿದೆ. ಎತ್ತರ ಇರೋರಿಗೆ ಸೀರೆ ಒಪ್ಪುತ್ತದೆ. ಶಿಲ್ಪಾ ಶೆಟ್ಟಿ ತುಂಬಾನೆ ಚೆನ್ನಾಗಿಯೇ ಸೀರೆಯುಡುತ್ತಾರೆ ನೋಡಿ.

ಸಪ್ತಮಿ ಗೌಡ ಸದ್ಯ ಯಾವುದೇ ಚಿತ್ರ ಒಪ್ಪಿದಂತೆ ಕಾಣಿಸೋದಿಲ್ಲ. ಆದರೆ, ಮಾಡಿರೋ ಕಾಂತಾರ ಚಿತ್ರ ಈಗಲೂ ನೇಮ್ ಆ್ಯಂಡ್ ಫೇಮ್ ಉಳಿಸಿದೆ. ಯುವ ಚಿತ್ರದಲ್ಲಿ ನಟಿಸಿರೋದು ಗೊತ್ತೇ ಇದೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಅದ್ಭುತ ಪಾತ್ರವನ್ನೆ ಮಾಡಿದ್ದರು. ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲೂ ಸಪ್ತಮಿ ಗೌಡ ನಟಿಸಿದ್ದಾರೆ. ಈ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ.
ಒಟ್ಟಾರೆ ಸಪ್ತಮಿ ಗೌಡ ಆ್ಯಕ್ಟೀವ್ ಆಗಿದ್ದಾರೆ. ಫೋಟೋ ಶೂಟ್ ಅಂತಲೂ ಟೈಮ್ ಸ್ಪೆಂಡ್ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಈ ಮೂಲಕ ತಮ್ಮ ಫ್ಯಾನ್ಸ್ ಜೊತೆಗೆ ಕನೆಕ್ಟ್ ಆಗಿದ್ದಾರೆ ಅಂತಲೂ ಹೇಳಬಹುದು.

Share This Article
Leave a comment