ಎರಡೂವರೆ‌ ಕೋಟಿಯ ಲೆಕ್ಸಸ್ ಕಾರಿಗೆ ಭಾರತದಲ್ಲಿ ಭಾರೀ ಬೇಡಿಕೆ: ಬುಕಿಂಗ್ ತಾತ್ಕಾಲಿಕ ಸ್ಥಗಿತ!

public wpadmin

ಲೆಕ್ಸಸ್‌ ಇಂಡಿಯಾವು LM 350h ಎಂಬ ಲಕ್ಷುರಿ ಎಂಪಿವಿಯ ಬುಕ್ಕಿಂಗ್‌ ಭಾರತದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಹೊಸ ಲೆಕ್ಸಸ್‌ ಲಕ್ಷುರಿ ಕಾರಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಕಷ್ಟವಾಗಿರುವುದರಿಂದ ತಾತ್ಕಾಲಿಕವಾಗಿ ಬುಕ್ಕಿಂಗ್‌ ಸ್ಥಗಿತಗೊಳಿಸಲಾಗಿದೆ.

ಶೀಘ್ರದಲ್ಲಿ ಬುಕ್ಕಿಂಗ್‌ ಪುನರ್‌ ಆರಂಭಿಸಲಾಗುವುದು ಎಂದು ಕಂಪನಿ ಹೇಳಿದೆ. ಈಗಾಗಲೇ ಬುಕ್ಕಿಂಗ್‌ ಮಾಡಿರುವ ಗ್ರಾಹಕರಿಗೆ ಹೊಸ ಕಾರು ಪೂರೈಕೆ ಮಾಡಿದ ಬಳಿಕ ಹೊಸ ಬುಕ್ಕಿಂಗ್‌ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದೆ.

ಸೆಪ್ಟೆಂಬರ್‌ 21ರಿಂದ ಅನ್ವಯವಾಗುವಂತೆ ಬುಕ್ಕಿಂಗ್‌ ಸ್ಥಗಿತಗೊಳಿಸಿರುವುದಾಗಿ ಕಂಪನಿ ತಿಳಿಸಿದೆ.

ಲೆಕ್ಸಸ್‌ ಎಲ್‌ಎಂ 350ಎಚ್‌ಗೆ ಗ್ರಾಹಕರಿಂದ ದೊರಕಿದೆ ಅಭೂತಪೂರ್ವ ಪ್ರತಿಕ್ರಿಯೆಯಿಂದ ಲೆಕ್ಸಸ್‌ ಇಂಡಿಯಾ ವಿನಮ್ರವಾಗಿದೆ. ನಿಮ್ಮ ಬೆಂಬಲ ಮತ್ತು ಸಹಕಾರಕ್ಕೆ ಧನ್ಯವಾದ. ಪ್ರಶಾಂತವಾದ ಮತ್ತು ವಿಲಾಸಿ ಪ್ರಯಾಣದ ಅನುಭವಕ್ಕಾಗಿ ವಿನ್ಯಾಸಗೊಳಿಸಲಾದ ಈ ಐಷಾರಾಮಿ ವಾಹನವು ಅಸಾಧಾರಣ ಸೌಕರ್ಯ, ನವೀನ ವಿನ್ಯಾಸ ಮತ್ತು ಸಾಟಿಯಿಲ್ಲದ ಭವ್ಯತೆಯನ್ನು ಗ್ರಾಹಕರಿಗೆ ತಲುಪಿಸುವ ಲೆಕ್ಸಸ್‌ನ ಬದ್ಧತೆಯನ್ನು ಒಳಗೊಂಡಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯದ ಪೂರೈಕೆಯ ಸವಾಲಿನ ಕಾರಣದಿಂದ, ಈಗಿನ ಆರ್ಡರ್‌ಗಳನ್ನು ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ ತಾತ್ಕಾಲಿಕವಾಗಿ ಎಲ್‌ಎಂ 350 ಎಚ್‌ ಬುಕ್ಕಿಂಗ್‌ ಸ್ಥಗಿತಗೊಳಿಸುತ್ತೇವೆ. ಆದಷ್ಟು ಬೇಗ ಬುಕ್ಕಿಂಗ್‌ ಪುನಾರಂಭ ಮಾಡುತ್ತೇವೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವರ್ಷದ ಆರಂಭದಲ್ಲಿ Lexus LM 350h ಭಾರತದಲ್ಲಿ ಬಿಡುಗಡೆಯಾಗಿತ್ತು. ಇದರ ಎಕ್ಸ್‌ ಶೋರೂಂ ಆರಂಭಿಕ ದರ 2-2.5 ಕೋಟಿ ರೂಪಾಯಿ ಇದೆ. ಇದು ಅದ್ಭುತ ಆರಾಮದಾಯಕ ಕ್ಯಾಬಿನ್‌ ಹೊಂದಿದೆ. ಇದರ ಎರಡನೇ ಸಾಲಿನ ಸೀಟನ್ನು ವಿಮಾನದ ಫಸ್ಟ್‌ ಕ್ಲಾಸ್‌ ಸೀಟ್‌ನಂತೆ ವಿನ್ಯಾಸ ಮಾಡಲಾಗಿದೆ. ಇದು ಜಿಎ-ಕೆ ಮಾಡ್ಯುಲರ್‌ ಪ್ಲಾಟ್‌ಫಾರ್ಮ್‌ನಿಂದ ಸ್ಪೂರ್ತಿ ಪಡೆದಿದೆ. ಬೃಹತ್‌ ಸ್ಪೈಂಡಲ್‌ ಗ್ರಿಲ್‌, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ವರ್ಟಿಕಲ್‌ ಆಗಿ ಜೋಡಿಸಿರುವ ಫಾಗ್‌ ಲ್ಯಾಂಪ್‌ಗಳು ಸೇರಿದಂತೆ ಹಲವು ವಿನೂತನ ವಿನ್ಯಾಸವನ್ನು ಈ ಕಾರು ಹೊಂದಿದೆ.

ಇದು ನಾಲ್ಕು ಸೀಟುಗಳನ್ನು ಹೊಂದಿದೆ. ವಿಮಾನದಂತೆ ರಿಕ್ಲೈನರ್‌ ಸೀಟುಗಳನ್ನು ಹೊಂದಿದೆ. 23 ಸ್ಪೀಕರ್‌ಗಳ ಸೌಂಡ್‌ ಸಿಸ್ಟಮ್‌ ಹೊಂದಿದೆ. ಪಿಲ್ಲೊ ಮಾದರಿಯ ಹೆಡ್‌ರೆಸ್ಟ್‌ ಇದೆ. ಒಂದು ರೆಫ್ರಿಜರೇಟರ್‌, 48 ಇಂಚಿನ ಟೆಲಿವಿಷನ್‌ ಇದೆ. ಮಡಚಬಹುದಾದ ಟೇಬಲ್‌ಗಳು, ಕೈ ಇಡುವ ಸ್ಥಳ, ಯುಎಸ್‌ಬಿ ಪೋರ್ಟ್‌ಗಳು, ವೈರ್‌ಲೆಸ್‌ ಫೋನ್‌ ಚಾರ್ಜರ್‌, ರೀಡಿಂಗ್‌ ಲೈಟ್‌, ವ್ಯಾನಿಟಿ ಮಿರರ್‌ ಸೌಲಭ್ಯಗಳಿವೆ.

Share This Article
Leave a comment