ಚೆಲೈಟಿಸ್ ಎಂದರೆ ತುಟಿಗಳ ಉರಿಯೂತ. ಸೋಂಕುಗಳು, ಕಿರಿಕಿರಿ ಉಂಟುಮಾಡುವ ಅಂಶಗಳು, ಅಲರ್ಜಿ ಮತ್ತು ಕೆಲವು ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳು ತುಟಿಗಳ ಉರಿಯೂತಕ್ಕೆ ಕಾರಣವಾಗಬಹುದು.
ಚೆಲೈಟಿಸ್ಸಿನಲ್ಲಿ ಹಲವಾರು ವಿಧಗಳಿವೆ. ಅವುಗಳಲ್ಲಿ ಅತ್ಯಂತ ಸಾಮಾನ್ಯವಾಗಿರುವ ವಿಧಗಳೆಂದರೆ:
- ಕೋನೀಯ (ಆಂಗ್ಯುಲರ್) ಚೆಲೈಟಿಸ್: ಇದು ಬಂದರೆ ಬಾಯಿಯ ಮೂಲೆಗಳಲ್ಲಿ ಉರಿಯೂತ ಮತ್ತು ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಾಗಿ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕಿನಿಂದ ಕೋನೀಯ (ಆಂಗ್ಯುಲರ್) ಚೆಲೈಟಿಸ್ ಉಂಟಾಗುತ್ತದೆ.
- ಆಕ್ಟಿನಿಕ್ ಚೆಲೈಟಿಸ್: ದೀರ್ಘ ಕಾಲ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಆಕ್ಟಿನಿಕ್ ಚೆಲೈಟಿಸ್ ಉಂಟಾಗುತ್ತದೆ, ಇದು ಸಾಮಾನ್ಯವಾಗಿ ಕೆಳ ತುಟಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಿಕಿತ್ಸೆ ನೀಡದೆ ಬಿಟ್ಟರೆ ಹೆಚ್ಚು ಗಂಭೀರ ಸಮಸ್ಯೆಯಾಗುವ ಸಂಭವವಿದೆ.
- ಕಾಂಟಾಕ್ಟ್ ಚೆಲೈಟಿಸ್: ಲಿಪ್ಸ್ಟಿಕ್, ಟೂತ್ಪೇಸ್ಟ್ ಅಥವಾ ಕೆಲವು ಆಹಾರಗಳಂತಹ ವಸ್ತುಗಳ ಸಂಪರ್ಕದಿಂದ ಉಂಟಾದ ಅಲರ್ಜಿಯ ಪ್ರತಿಕ್ರಿಯೆಯಿಂದಾಗಿ ಕಾಂಟಾಕ್ಟ್ ಚೆಲೈಟಿಸ್ ಬರುತ್ತದೆ.
- ಎಕ್ಸ್ಫೋಲಿಯೇಟಿವ್ ಚೆಲೈಟಿಸ್: ತುಟಿಗಳ ಮೇಲಿನ ಚರ್ಮದ ಸುಲಿಯುವಿಕೆ ಇದರ ಲಕ್ಷಣವಾಗಿದೆ. ಇದು ಒತ್ತಡ, ಆತಂಕ ಅಥವಾ ಆಗಾಗ ತುಟಿಗಳನ್ನು ಅಭ್ಯಾಸಬಲದಿಂದ ಲಾಲಾರಸದಿಂದ ಒದ್ದೆ ಮಾಡಿಕೊಳ್ಳುವುದರಿಂದ ಬರುತ್ತದೆ..
- ಎಕ್ಜಿಮಾಟಸ್ ಚೆಲೈಟಿಸ್: ಕಿರಿಕಿರಿ ಉಂಟುಮಾಡುವ ಪದಾರ್ಥಗಳು, ಉತ್ಪನ್ನಗಳು, ಅಂಶಗಳು ಅಥವಾ ಅಲರ್ಜಿಕಾರಕಗಳು ತುಟಿಗಳ ಮೇಲೆ ಪರಿಣಾಮ ಬೀರಿದಾಗ ಇದು ಕಂಡುಬರುತ್ತದೆ.ಚೆಲೈಟಿಸ್ಸಿನ ಲಕ್ಷಣಗಳು ಪರಿಸ್ಥಿತಿಯ ಪ್ರಕಾರ ಮತ್ತು ತೀವ್ರತೆಯನ್ನು ಅವಲಂಬಿಸಿ ಬದಲಾಗಬಹುದು. ಆದರೆ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ:
- ತುಟಿಗಳು ಅತಿಯಾಗಿ ಒಣಗಿದಂತೆ, ಒಡೆದುಹೋದಂತೆ ಅಥವಾ ಬಿರುಕು ಬಿಟ್ಟಂತೆ ಕಾಣುತ್ತವೆ. ವಿಶೇಷವಾಗಿ ಕೋನೀಯ (ಆಂಗ್ಯುಲರ್) ಮತ್ತು ಎಕ್ಸ್ಫೋಲಿಯೇಟಿವ್ ಚೆಲೈಟಿಸ್ ಬಂದಾಗ ತುಟಿಗಳು ಒಣಗಿದಂತೆ ಅಥವಾ ಬಿರುಕು ಬಿಟ್ಟಂತೆ ಎದ್ದು ಕಾಣುತ್ತವೆ.
- ಸಾಮಾನ್ಯವಾಗಿ ತುಟಿಗಳು ಅಥವಾ ಬಾಯಿಯ ಮೂಲೆಗಳಲ್ಲಿ ಗಮನಾರ್ಹವಾಗಿ ಕೆಂಪು ಬಣ್ಣ ಎದ್ದು ಕಾಣುವುದು.
- ಕೆಲವು ಸಂದರ್ಭಗಳಲ್ಲಿ ತುಟಿಗಳು ಊದಿಕೊಳ್ಳಬಹುದು ಅಥವಾ ಉಬ್ಬಿಕೊಳ್ಳಬಹುದು.
- ಚೆಲೈಟಿಸ್ ಅಹಿತಕಾರಿ ಅನುಭವ ಉಂಟುಮಾಡಬಹುದು. ಹೀಗಾದಾಗ ತುಟಿಗಳನ್ನು ಚಲಿಸಲು ಅಥವಾ ಮಾತನಾಡಲು ನೋವುಂಟಾಗುತ್ತದೆ.
- ತುಟಿಗಳ ಉರಿಯೂತವು ರಕ್ತಸ್ರಾವಕ್ಕೆ ಕಾರಣವಾಗಬಹುದು. ಚರ್ಮವು ಬಿರುಕು ಬಿಟ್ಟಾಗ ಅಥವಾ ಸಿಪ್ಪೆಸುಲಿಯುವ ಸಂದರ್ಭಗಳಲ್ಲಿ ರಕ್ತಸ್ರಾವವಾಗಬಹುದು.
- ತೀವ್ರತರ ಪ್ರಕರಣಗಳಲ್ಲಿ ತುಟಿಗಳ ಮೇಲೆ ಗುಳ್ಳೆಗಳು ಅಥವಾ ಹುಣ್ಣುಗಳು ಬೆಳೆಯಬಹುದು. ಇದು ಮತ್ತಷ್ಟು ಅಸ್ವಸ್ಥತೆ ಮತ್ತು ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ.
- ತುಟಿಗಳ ಮೇಲಿನ ಚರ್ಮವನ್ನು ನಿರಂತರವಾಗಿ ಒಣಗಿ ಉದುರಬಹುದು ಅಥವಾ ಕೈನಿಂದ ಅದನ್ನು ತೆಗೆದುಹಾಕಬೇಕು ಎನಿಸುತ್ತದೆ.
- ಚೆಲೈಟಿಸ್ ಗೆ ಚಿಕಿತ್ಸೆ
- ಚೆಲೈಟಿಸ್ಸಿಗೆ ಚಿಕಿತ್ಸೆಯು ಉರಿಯೂತದ ಪ್ರಕಾರ ಮತ್ತು ಮೂಲ ಕಾರಣವನ್ನು ಅವಲಂಬಿಸಿರುತ್ತದೆ. ಕೆಲವು ಸಾಮಾನ್ಯ ಚಿಕಿತ್ಸಾ ವಿಧಾನಗಳು ಹೀಗಿವೆ:
- ತುಟಿಗಳನ್ನು ಒಣಗದಂತೆ ಇಟ್ಟುಕೊಳ್ಳುವುದು ಚೆಲೈಟಿಸ್ಸಿನ ನಿರ್ವಹಣೆಯಲ್ಲಿ ಬಹಳ ಮುಖ್ಯವಾಗಿದೆ. ಜೇನುಮೇಣ, ಬೆಣ್ಣೆ, ತುಪ್ಪ, ಕೊಬ್ಬರಿ ಎಣ್ಣೆಯಂತಹ ಪದಾರ್ಥಗಳನ್ನು ಒಳಗೊಂಡಿರುವ ಕಿರಿಕಿರಿಯುಂಟುಮಾಡದ ಲಿಪ್ ಬಾಮ್ಗಳ ಬಳಕೆ ತೇವಾಂಶವನ್ನು ತುಟಿಗಳಲ್ಲಿ ಹಿಡಿದಿಡುತ್ತದೆ.
- ಆಂಟಿಫಂಗಲ್ ಅಥವಾ ಆಂಟಿಬ್ಯಾಕ್ಟೀರಿಯಲ್ ಕ್ರೀಮುಗಳು: ಬ್ಯಾಕ್ಟೀರಿಯಾ ಅಥವಾ ಫಂಗಲ್ ಸೋಂಕಿನಿಂದ ಉಂಟಾಗುವ ಕೋನೀಯ ಚೆಲೈಟಿಸ್ ಪ್ರಕರಣಗಳಲ್ಲಿ ಆಂಟಿಫಂಗಲ್ ಅಥವಾ ಆಂಟಿಬ್ಯಾಕ್ಟೀರಿಯಲ್ ಕ್ರೀಮ್ಗಳು ಆಧಾರವಾಗಿರುವ ಸೋಂಕಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತವೆ.
- ಕಿರಿಕಿರಿ ಉಂಟುಮಾಡುವ ಅಲರ್ಜಿಕಾರಕಗಳನ್ನು ಗುರುತಿಸಿ ಅವುಗಳನ್ನು ಹೋಗಲಾಡಿಸುವುದು ಬಹಳ ಮುಖ್ಯ. ಇವುಗಳಲ್ಲಿ ಕೆಲವು ಸೌಂದರ್ಯವರ್ಧಕಗಳು, ಸುಗಂಧ ದ್ರವ್ಯಗಳು ಮತ್ತು ಆಹಾರ ಪದಾರ್ಥಗಳು ಸೇರಿವೆ. ಉತ್ತಮ ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಟಿಗಳ ಉರಿಯೂ
Advertisements