BIG BOSS KANNADA 11ರ ಸಂಭಾವ್ಯ ಸ್ಪರ್ಧಿಗಳ ಹೆಸರು ರಿವೀಲ್

public wpadmin

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ -11 (Bigg Boss Kannada-11) ಇದೇ ಸೆ.29ರಿಂದ ಬಿಗ್‌ ಬಾಸ್‌ ಗ್ರ್ಯಾಂಡ್‌ ಆರಂಭಗೊಳ್ಳಲಿದೆ.

ಸಾಕಷ್ಟು ಕುತೂಹಲ ಹುಟ್ಟಿಸಿದ್ದ ನಿರೂಪಕ ಯಾರೆನ್ನುವ ಪ್ರಶ್ನೆಗೆ ಪ್ರೋಮೊ ಬಿಟ್ಟು ಆಯೋಜಕರು ಸಸ್ಪೆನ್ಸ್‌ ರಿವೀಲ್‌ ಮಾಡಿದ್ದಾರೆ. ನಟ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ನಿರೂಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಪ್ರೋಮೊ ರಿಲೀಸ್‌ ಆದ ಬೆನ್ನಲ್ಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ನಾನಾ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳೂ ಈ ಪಟ್ಟಿಯಲ್ಲಿದ್ದಾರೆ.

ನಟಿ ಪ್ರೇಮಾ: ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಮ್ಮೂರ ಮಂದಾರ ಹೂವೆ, ‘ಚಂದ್ರಮುಖಿ ಪ್ರಾಣಸಖಿʼ, ‘ಉಪೇಂದ್ರʼ ಅಂತಹ ಹಿಟ್‌ ಸಿನಿಮಾಗಳಲ್ಲಿ ನಟಿಸಿ, ತೆಲುಗು, ಮಲಯಾಳಂನಲ್ಲೂ ಮಿಂಚಿದ್ದ ನಟಿ ಪ್ರೇಮಾ (Actress Prema) ಇತ್ತೀಚಿನ ವರ್ಷದಲ್ಲಿ ನಟನೆ ಬಿಟ್ಟು ಕಿರುತೆರೆ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

ಹುಲಿ ಕಾರ್ತಿಕ್:‌ ‘ಗಿಚ್ಚಿ ಗಿಲಿ ಗಿಲಿ-3ʼ ಮೂಲಕ ಪ್ರೇಕ್ಷಕರ ಮನೆಮನವನ್ನು ಗೆದ್ದು, ಕಾರ್ಯಕ್ರಮ ವಿಜೇತರಾಗಿರುವ ಹುಲಿ ಕಾರ್ತಿಕ್ (Huli Karthik) ಅವರು ಈ ಬಾರಿ ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಗೌರವ್‌ ಶೆಟ್ಟಿ: ಅಮೃತಾಂಜನ್‌ʼ ಸೇರಿದಂತೆ ಹತ್ತಾರು ಶಾರ್ಟ್‌ ಮೂವೀಸ್‌ ಹಾಗೂ ಕಾಮಿಡಿ ವಿಡಿಯೋಗಳಲ್ಲಿ ಕಾಣಿಸಿಕೊಂಡು, ಯೂಟ್ಯೂಬ್‌ನಲ್ಲಿ ಮಿಂಚಿರುವ ಗೌರವ್‌ ಶೆಟ್ಟಿ (Gaurav Shetty) ಅವರಿಗೆ ಬಿಗ್‌ ಬಾಸ್‌ ಮನೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ.

ಮಾನಸ ಸಂತು: ಬಿಗ್‌ ಬಾಸ್‌ ಸೀಸನ್‌ -10ನಲ್ಲಿ ಸ್ಪರ್ಧಿಯಾಗಿದ್ದ ಕಾಮಿಡಿಯನ್‌ ತುಕಾಲಿ ಸಂತು ಅವರ ಪತ್ನಿ ಮಾನಸ (Manasa Santu) ಈಗಾಗಲೇ ಪ್ರೇಕ್ಷಕರಿಗೆ ಪರಿಚಯವಿರುವ ಹೆಸರು. ತನ್ನ ಹಾಸ್ಯ ಪ್ರಜ್ಞೆಯಿಂದ ಗಮನ ಸೆಳೆದಿರುವ ಮಾನಸ, ಕಿರುತೆರೆ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಹರೀಶ್ ನಾಗರಾಜ್: ಕಳೆದ ಅನೇಕ ವರ್ಷದಿಂದ ನ್ಯೂಸ್ ಆ್ಯಂಕರ್‌ ಆಗಿ ಗುರುತಿಸಿಕೊಂಡಿರುವ ಹರೀಶ್ ನಾಗರಾಜ್ (Harish Nagaraj) ಅವರು ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಆಗುತ್ತಾರೆ ಎಂದು ಹೇಳಲಾಗುತ್ತಿದೆ.
ಐಶ್ವರ್ಯಾ ರಂಗರಾಜನ್: ʼಮಗಳು ಜಾನಕಿʼ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗಾಯಕಿ ಐಶ್ವರ್ಯಾ ರಂಗರಾಜನ್ (Aishwarya Rangarajan) ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಯಾಗಿ ಹೋಗುತ್ತಾರೆ ಎನ್ನಲಾಗುತ್ತಿದೆ.

ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ : ಕನ್ನಡ ಚಿತ್ರರಂಗದಲ್ಲಿ ನಟಿಯರಾಗಿ ಗುರುತಿಸಿಕೊಂಡಿರುವ ಕರಾವಳಿಯ ಅವಳಿ ಸಹೋದರಿಯರು ಅದ್ವಿತಿ ಶೆಟ್ಟಿ(Adhvithi Shetty) ಹಾಗೂ ಅಶ್ವಿತಿ ಶೆಟ್ಟಿ (ASHVITHI SHETTY) ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮೂಲ್ಯ ಭಾರದ್ವಾಜ್: ಕಿರುತೆರೆ ನಟಿಯಾಗಿ ಗುರುತಿಸಿಕೊಂಡು, ‘ದಾಸ ಪುರಂದರ’ ಹಾಗೂ ‘ಬೃಂದಾವನ’ ಧಾರಾವಾಹಿಗಳಲ್ಲಿ ನಟಿಸಿ ಮನೆ-ಮನದ ಪ್ರೀತಿ ಪ್ರೋತ್ಸಾಹ ಗಳಿಸಿರುವ ನಟಿ ಅಮೂಲ್ಯ ಭಾರದ್ವಾಜ್ (Amulya Bharadwaj) ಈ ಬಾರಿ ದೊಡ್ಡನೆ ಆಟಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ

ಭವ್ಯಾ ಗೌಡ: ಟಿಕ್‌ ಟಾಕ್‌ನಲ್ಲಿ ಖ್ಯಾತಿಗಳಿಸಿ, ಕಿರುತೆರೆಯ ‘ಗೀತಾʼ ಧಾರಾವಾಹಿಯಲ್ಲಿ ಅಭಿನಯಿಸಿ ಗಮನ ಸೆಳೆದಿರುವ ನಟಿ ಭವ್ಯಾ ಗೌಡ (Bhavya Gowda) ಅವರ ಹೆಸರು ಕೂಡ ಬಿಗ್‌ ಬಾಸ್‌ ಸ್ಪರ್ಧಿಯ ಲಿಸ್ಟ್‌ನಲ್ಲಿ ಬರುತ್ತಿದೆ.

ದೀಪಕ್‌ ಗೌಡ: ‘ನಮ್ಮನೆ ಯುವರಾಣಿʼ ಸೀರಿಯಲ್‌ನಲ್ಲಿ ‘ಅನಿಕೇತ್ʼ ಆಗಿ ಖ್ಯಾತಿ ಪಡೆದ ದೀಪಕ್‌ ಗೌಡ (Deepak Gowda) ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಕ್ಷಯ್‌ ನಾಯಕ್‌: ‘ಒಲವಿನ ನಿಲ್ದಾಣʼ ಸೀರಿಯಲ್‌ನಲ್ಲಿ ಸಿದ್ಧಾಂತ್ ಪಾತ್ರದ ಮೂಲಕ ಗಮನ ಸೆಳೆದು, ʼಕಸ್ತೂರಿ ನಿವಾಸʼದಲ್ಲೂ ಮಿಂಚಿರುವ ಅಕ್ಷಯ್‌ ನಾಯಕ್‌ (Akshay Nayak) ಬಿಗ್‌ ಬಾಸ್‌ ಮನೆಗೆ ಬರ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಲೇಖಿ ಗೋಸ್ವಾಮಿ: ‘ಲೇಖಿ ರೈಡರ್ʼ ಎಂಬ ಯೂಟ್ಯೂಬ್‌ ಚಾನೆಲ್‌‌ನಿಂದ ಖ್ಯಾತಿ ಗಳಿಸಿರುವ ಲೇಖಿ ಗೋಸ್ವಾಮಿ(Lekhi Goswami) ಈ ಬಾರಿ ‘ಬಿಗ್ ಬಾಸ್ʼ ಸ್ಪರ್ಧಿಯಾಗಿ ಎಂಟ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ.

ಇತರೆ ಹೆಸರುಗಳು.. ಇವರುಗಳಲ್ಲದೆ ರೀಲ್ಸ್ ರೇಷ್ಮಾ, ಚಂದ್ರಪ್ರಭ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ನಟ ತ್ರಿವಿಕ್ರಮ್, ನಟಿ ಸುಕೃತಾ ನಾಗ್, ನಟಿ ಗೌತಮಿ ಜಾಧವ್, ಶರತ್ ಕುಮಾರ್ ಹೆಸರುಗಳೂ ಇವೆ.

Share This Article
Leave a comment