ನವದೆಹಲಿ: ಭಾರತದಲ್ಲಿ ನಿನ್ನೆಯಷ್ಟೇ 1000 ರೂಪಾಯಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಶುಕ್ರವಾರ ಸೆಪ್ಟಂಬರ್ 13ರಂದು ಏರುಮುಖವಾಗಿದೆ. ಒಂದೇ ದಿನದಲ್ಲಿ ನೂರು ಗ್ರಾಂ ಚಿನ್ನ 12 ಸಾವಿರ ರೂ.ಗಳಷ್ಟು ದುಬಾರಿಯಾಗಿದೆ.

ಇದರಿಂದ ಬಂಗಾರ ಪ್ರಿಯರು ಶಾಕ್ ಆಗಿದ್ದಾರೆ. ದರ ಇಳಿಕೆ ಆಯಿತೆಂದು ಹಬ್ಬದ ಸಂದರ್ಭಗಳಲ್ಲಿ ಗ್ರಾಹಕರು ಚಿನ್ನ ಖರೀದಿ ಪ್ಲಾನ್ ಮಾಡಿದ್ದವರು ಈಗ ಕಂಗಾಲಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಚಿನ್ನದ ದರ ಬರೋಬ್ಬರಿ 12000 ರೂಪಾಯಿ ಏರಿಕೆ ಆಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆ ಗುರುವಾರ 7,31,500 ರೂ. ಇತ್ತು. ಅದು ಶುಕ್ರವಾರ 7,44,500 ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಗುರುವಾರ 73,150 ರೂಪಾಯಿ ಇದ್ದದ್ದು ಇಂದು (ಸೆ.13ಕ್ಕೆ) ಬರೋಬ್ಬರಿ 74,450 ರೂಪಾಯಿಗೆ ಹೆಚ್ಚಾಗಿದೆ. ಈ ಮೂಲಕ ಹತ್ತು ಗ್ರಾಂ ಚಿನ್ನದೇ ಬೆಲೆ ಒಂದೇ ದಿನಕ್ಕೆ 1040 ರೂ.ನಷ್ಟು ಹೆಚ್ಚಾಗಿದೆ.
22 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆ ಇಂದು 68250 ರೂಪಾಯಿಗೆ ಏರಿಕೆ ಆಗಿದೆ. ನಿನ್ನೆಗೆ ಹೋಲಿಸಿದರೆ ಒಟ್ಟು 1200 ರೂಪಾಯಿ ಹೆಚ್ಚಾಗಿದೆ ಎಂದು ವರದಿ ಆಗಿದೆ. ಇನ್ನೂ 100 ಗ್ರಾಮ್ ಬೆಳ್ಳಿ ಬೆಲೆ 8,640 ರೂಪಾಯಿ ಇದೆ.