ಬೆಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಿಶೇಷ ತನಿಖಾ ತಂಡ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದೀಗ ಅದರಲ್ಲಿ ಏನೇನು ಉಲ್ಲೇಖವಾಗಿದೆ ಎಂಬುದು ಬೆಳಕಿಗೆ ಬಂದಿದೆ. ಸುಮಾರು 1632 ಪುಟಗಳ ಚಾರ್ಜ್ಶೀಟ್ನಲ್ಲಿ 113 ಸಾಕ್ಷಿಗಳನ್ನು ಎಸ್ಐಟಿ ಉಲ್ಲೇಖಿಸಿದೆ. ಇಷ್ಟೇ ಅಲ್ಲದೆ, ಪ್ರಜ್ವಲ್ ದೌರ್ಜನ್ಯ ಯಾವ ರೀತಿ ಇತ್ತು ಎಂಬುದನ್ನು ವಿವರಿಸಲಾಗಿದೆ.
ಬನ್ನಿಕೋಡ ತೋಟದ ಮನೆಯಲ್ಲಿ ಕುಡಿಯಲು ಒಂದು ಚೊಂಬು ನೀರು ತೆಗೆದುಕೊಂಡು ಬಾ ಎಂದು ಹೇಳಿದ್ದ ಪ್ರಜ್ವಲ್, ಮಹಿಳೆ ನೀರು ತೆಗೆದುಕೊಂಡು ಕೊಠಡಿ ಒಳಗೆ ಹೋಗುತ್ತಿದ್ದಂತೆ ಬಾಗಿಲ ಚಿಲಕ ಲಾಕ್ ಮಾಡಿದ್ದ. ನಂತರ, ಮಹಿಳೆ ಬಾಗಿಲು ತೆಗೆಯಣ್ಣ ಎಂದು ಗೋಗರೆದರೂ ಬಿಡದೆ ದೌರ್ಜನ್ಯ ಎಸಗಿದ್ದಾನೆ. ‘ಸೀರೆ ಮತ್ತು ಬ್ಲೌಸ್ ತೆಗೆಯೇ ತೆಗಿ, ತೆಗೆಯಮ್ಮ’ ಎಂದು ಬಲವಂತ ಮಾಡಿ ದೌರ್ಜನ್ಯ ಎಸಗಿದ್ದಾನೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಬಲವಂತವಾಗಿ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಲ್ಲದೆ, ಅದರ ವೀಡಿಯೊವನ್ನೂ ಮಾಡಿಕೊಂಡಿದ್ದ. ಇದಾದ ಬಳಿಕ ಬಸವನಗುಡಿಯ ಮನೆ ಕ್ಲೀನ್ ಗೆ ಬಂದಾಗ ಸಹ ಇದೇ ರೀತಿಯ ವರ್ತನೆ ತೋರಿದ್ದ. ಬಟ್ಟೆ ಒಗೆಯಲು ತೆಗೆದುಕೊಂಡು ಹೋಗು ಎಂದು ಕೊಠಡಿಗೆ ಕರೆದಿದ್ದ ಪ್ರಜ್ವಲ್, ಮಹಿಳೆ ಕೊಠಡಿಯೊಳಕ್ಕೆ ಹೋಗಲು ಹಿಂಜರಿದಾಗ ಗದರಿದ್ದ. ರೂಂ ಒಳಗೆ ಹೋಗ್ತಿದ್ದಂತೆ ಚಿಲಕ ಹಾಕಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾಗಿ ಮಹಿಳೆ ದೂರಿದ್ದಾರೆ ಎಂಬುದಾಗಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಸೀರೆ ಬಿಚ್ಚಿಸಿ ದೌರ್ಜನ್ಯ:ಪ್ರಜ್ವಲ್ ರೇವಣ್ಣ ಕರ್ಮಕಾಂಡ ಬಯಲು
Leave a comment
Leave a comment