5 ಮದುವೆಯಾದ ಈ ನಟಿ ಕೊನೆಗಾಲದಲ್ಲಿ ಒಬ್ಬಂಟಿ!

public wpadmin

ದೇಶ ವಿಭಜನೆಯ ನಂತರ ಪಂಜಾಬ್ ನಲ್ಲಿ ಖ್ಯಾತ ನಟಿ ಜನಿಸಿದರು. ಬಳಿಕ ನಟಿ ಲಾಹೋರ್ ನಲ್ಲಿ ಬೆಳೆದ್ರು. ಆಕೆಯ ಸಹೋದರಿ ಮುಂಬೈನ ಪ್ರಸಿದ್ಧ ಕುಟುಂಬಕ್ಕೆ ಸೊಸೆಯಾಗಿ ಬಂದ್ರ. ಮದುವೆಯಾದಾಗ ಈ ನಟಿ ಮುಂಬೈನಲ್ಲಿ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ರು. ಆ ನಟಿಯ ಹೆಸರು ಖುರ್ಷಿದ್ ಬೇಗಂ. ಬ್ಯೂಟಿಫುಲ್ ನಟಿ ಆಗಿದ್ರು. ನಟಿಯಾಗುವ ಆಸೆ ಹೊತ್ತ ಖರ್ಷಿದ್ ಬೇಗಂಗೆ ಸೊಹ್ರಾಬ್ ಮೋದಿ ಅವರು ಮೀನಾ ಎಂದು ಹೆಸರಿಟ್ಟರು. ಖುರ್ಷಿದ್ ಬೇಗಂ ಅವರು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ್ರು. ಆಕೆ ಮನೆಯ 2ನೇ ಮಗಳಾಗಿದ್ಲು. ಆದ್ರೆ ಅವಳ ತಂದೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ನಂತರ, ಆಕೆಗೆ ಯಾವುದೇ ಆದಾಯದ ಮೂಲವಿರಲ್ಲ. ಹಣಕ್ಕಾಗಿ ನಟಿಯ ತಂದೆ, ಮಗಳು ಮತ್ತು ತಾಯಿಯನ್ನು ಪೀಡಿಸುತ್ತಿದ್ದನಂತೆ

ಆಕೆಯ ತಂದೆ ನಟಿಯ ಅಕ್ಕ ವಜೀರ್ ಬೇಗಂ ಅವರನ್ನು ಶ್ರೀಮಂತ ಹುಡುಗನಿಗೆ ಮದುವೆ ಮಾಡಿಕೊಟ್ಟರು, ನಂತರ ಅವರು ಮುಂಬೈಗೆ ಹೋಗಿ ವಾಸಿಸಲು ಪ್ರಾರಂಭಿಸಿದ್ರು. ನಂತರ ಖುರ್ಷಿದ್ಗೆ ಒಳ್ಳೆಯ ಹುಡುಗನನ್ನು ಹುಡುಕಲು ನಟಿಯನ್ನು ಕೂಡ ತಾಯಿ ಮುಂಬೈಗೆ ಕಳಿಸಿದ್ರಂತೆ. ಆಕೆಯ ತಂದೆ ನಟಿಯ ಅಕ್ಕ ವಜೀರ್ ಬೇಗಂ ಅವರನ್ನು ಶ್ರೀಮಂತ ಹುಡುಗನಿಗೆ ಮದುವೆ ಮಾಡಿಕೊಟ್ಟರು, ನಂತರ ಅವರು ಮುಂಬೈಗೆ ಹೋಗಿ ವಾಸಿಸಲು ಪ್ರಾರಂಭಿಸಿದ್ರು. ನಂತರ ಖುರ್ಷಿದ್ಗೆ ಒಳ್ಳೆಯ ಹುಡುಗನನ್ನು ಹುಡುಕಲು ನಟಿಯನ್ನು ಕೂಡ ತಾಯಿ ಮುಂಬೈಗೆ ಕಳಿಸಿದ್ರಂತೆ.

‘ಸಿಕಂದರ್’ ಯಶಸ್ವಿಯಾದಾಗ, ಮೀನಾಗೆ ಹಲವು ಚಿತ್ರಗಳಿಗೆ ಆಫರ್ ಗಳು ಬರಲಾರಂಭಿಸಿದವು, ಅದರಲ್ಲಿ ‘ರೂಪ್ ಕುಮಾರ್’ ಮತ್ತು ‘ಹುಮಾಯೂನ್’ ಚಿತ್ರಗಳೂ ಸೇರಿದ್ದವು. ಬಳಿಕ ನಟಿಯ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಾರಂಭಿಸಿತು. ಆದರೆ, ಮೀನಾಗೆ ಸೊಹ್ರಾಬ್ ಮೋದಿಯಿಂದ ನೋಟಿಸ್ ಬಂದಿತ್ತು. ಅವರು 3 ಚಿತ್ರಗಳಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದ್ದರಿಂದ ಹೆಚ್ಚಿನ ಚಿತ್ರಗಳಿಗೆ ಸಹಿ ಹಾಕಲು ಅವಕಾಶವಿಲ್ಲ ಎಂದು ತಿಳಿಸಿದ್ದರು.

ಸೊಹ್ರಾಬ್ ಮೋದಿ ಅವರ ನೋಟಿಸ್ ನಲ್ಲಿ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಪರಿಹಾರವಾಗಿ 3 ಲಕ್ಷ ರೂ. ನೀಡುವಂತೆ ಬರೆದಿತ್ತು. ಇದನ್ನು ಕಂಡು ಮೀನಾ ಕೂಡ ಶಾಕ್ ಆದ್ರು. ಏಕೆಂದರೆ ಅವರು ಮೂರು ಚಿತ್ರಗಳಿಗೆ ಅಲ್ಲ ಒಂದು ಚಿತ್ರಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ನಟಿ ಮೀನಾ, ಸೊಹ್ರಾಬ್ ಮೋದಿ ಮತ್ತು ಅವರ ಪತ್ನಿಯೊಂದಿಗೆ ಮಾತನಾಡಿ ದಂಡವನ್ನು 30 ಸಾವಿರಕ್ಕೆ ಇಳಿಸಿದ್ರು. ನಟಿ ಮೀನಾ, ‘ಸಿಕಂದರ್’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದ ನಟ ಮತ್ತು ಚಲನಚಿತ್ರ ನಿರ್ಮಾಪಕ ಜಹೂರ್ ರಾಜಾ ಅವರನ್ನು ಮೊದಲು ವಿವಾಹವಾದರು. ಅವರು ಅಲ್ ನಾಸಿರ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ರೂಪ್ ಎಂಬುವರ ಜೊತೆ ಮೀನಾ ಮೂರನೇ ಮದುವೆ ಆಗಿದ್ರು. ಶೌರಿ, ಆಕೆಗೆ ಮೀನಾ ಶೌರಿ ಎಂಬ ಹೆಸರನ್ನು ನೀಡಿದ್ರು. ಪಾಕಿಸ್ತಾನ ಪ್ರವಾಸದ ನಂತರ ಇಬ್ಬರೂ ಬೇರ್ಪಟ್ಟರು. ಡಿಎನ್ ಎ ಇಂಡಿಯಾ ಡಾಟ್ ಕಾಮ್ ನ ವರದಿಯ ಪ್ರಕಾರ, ನಟಿ ಭಾರತ ತೊರೆದು ಪಾಕಿಸ್ತಾನದಲ್ಲಿಯೇ ನೆಲೆಸಿದ್ರು. ಆದರೆ ರೂಪ್ ಭಾರತಕ್ಕೆ ಮರಳಿದರು.

ಮೀನಾ ಅವರ ನಾಲ್ಕನೇ ವಿವಾಹವು ಪಾಕಿಸ್ತಾನಿ ಛಾಯಾಗ್ರಾಹಕ ಮತ್ತು ನಿರ್ಮಾಪಕ ರಜಾ ಮಿರ್ ಅವರೊಂದಿಗೆ ನಡೆದಿತ್ತು. ಸಾಲು ಸಾಲು ಮದುವೆಯಾದ ಈ ನಟಿಯ ಐದನೇ ವಿವಾಹವು ‘ಜಮಾಲೋ’ ಚಿತ್ರದ ಕೋಸ್ಟಾರ್ ಅಸದ್ ಬೊಖಾರಿ ಅವರೊಂದಿಗೆ ಆಗಿತ್ತು. ಮೀನಾ ಅವರ ಮದುವೆಯಲ್ಲಿ ಇಬ್ಬರು ಪುತ್ರರು ಸೇರಿದಂತೆ ಮೂವರು ಮಕ್ಕಳಿದ್ದರು. ಆತನು ಕೂಡ ಹೆಣ್ಣು ಮಗುವನ್ನು ದತ್ತು ಪಡೆದಿದ್ದ. 1974-75ರ ನಂತರ ಅವರ ಆರ್ಥಿಕ ಸ್ಥಿತಿ ಹದಗೆಡತೊಡಗಿತು. ನಟಿ ದಿವಾಳಿಯಾಗಿದ್ರು. 9 ಫೆಬ್ರವರಿ 1989 ರಂದು ತಮ್ಮ ಕೊನೆಯುಸಿರೆಳೆದ್ರು. ಐವರು ಗಂಡಂದಿರಲ್ಲಿ ಯಾರೂ ನಟಿಯ ಕೊನೆಯ ಕ್ಷಣಗಳಲ್ಲಿ ಜೊತೆಗಿರಲಿಲ್ಲ. ಅವರ ಅಂತ್ಯಕ್ರಿಯೆಗಾಗಿ ಜನರು ದೇಣಿಗೆಯ ಮೂಲಕ ಹಣವನ್ನು ಸಂಗ್ರಹಿಸಿದ್ದರು ಎನ್ನುವ ವಿಚಾರ ನಿಜಕ್ಕೂ ಬೇಸರದ ಸಂಗತಿ ಆಗಿದೆ.

Share This Article
Leave a comment