ಬಾಲ ಕಲಾವಿದೆಯಾಗಿ ಎಂಟ್ರಿಕೊಟ್ಟು ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಬೆಳೆದ ನಟಿ ಮೀನಾ, ಈಗಲೂ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾರೆ. 48ನೇ ವಯಸ್ಸಿಗೆ ಮೀನಾ 2ನೇ ಮದುವೆ ಆಗ್ತಿದ್ದಾರಂತೆ. 90ರ ದಶಕದ ಟಾಪ್ ಹೀರೋಯಿನ್ ಆಗಿ ನಟಿ ಮೀನ ಮಿಂಚಿದ್ರು. ಕಾಲಿವುಡ್, ಮಾಲಿವುಡ್, ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನ ಟಾಪ್ ಹೀರೋಗಳ ಜೊತೆ ನಟಿಸಿದ್ರು. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಮೀನಾ ನಟಿಸಿದ್ದಾರೆ.
ಬಾಲ ಕಲಾವಿದೆಯಾಗಿ ಎಂಟ್ರಿಕೊಟ್ಟ ಮೀನಾ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಬೆಳೆದ್ರು. ಮೀನಾ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದಾರೆ. ಟಾಪ್ ಹೀರೋಗಳ ಎದುರು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ದೃಶ್ಯ ಚಿತ್ರದ ಮೂಲಕ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಅವರು ಮತ್ತೊಮ್ಮೆ ತಮ್ಮ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟಿ ಮೀನಾ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.
ಮೀನಾ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅವ್ರು 1982ರ ತಮಿಳು ಚಲನಚಿತ್ರ ‘ನೆಂಜುಂಗಲ್’ ನಲ್ಲಿ ನಟಿಸಿದ್ರು. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತಮಿಳು ಸಿನಿಮಾಗಳಲ್ಲಿ ಮೀನಾ ನಟಿಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ತನ್ನ ಅತ್ಯುತ್ತಮ ನಟನೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಟಾಲಿವುಡ್ನಲ್ಲಿ ಮೀನಾ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ , ರವಿಚಂದ್ರನ್, ವಿಷ್ಣುವರ್ಧನ್ ಜೊತೆ ನಟಿಸಿ ಉತ್ತಮ ಹಿಟ್ಗಳನ್ನು ಪಡೆದ್ರು. ನವಯುಗಂ, ಎನ್ ರಸವಿನ ಮನಸಿಲೆ, ಸಾಂತ್ವನಂ, ರಾಜೇಶ್ವರಿ ಕಲ್ಯಾಣಂ, ಚಂಟಿ, ವೀರ, ಮುತ್ತು ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಮೀನಾ ನಾಯಕಿಯಾಗಿ ನಟಿಸಿದ್ದರು.
ಮೀನಾ ಅವರ ಪತಿ ವಿದ್ಯಾಸಾಗರ್ ಇತ್ತೀಚೆಗೆ ನಿಧನರಾದರು. ಕೋವಿಡ್ ಬಳಿಕ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದಾಗಿ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತಿಯನ್ನು ಕಳೆದುಕೊಂಡ ಮೀನಾ ತನ್ನ ಮಗಳೊಂದಿಗೆ ಒಂಟಿಯಾಗಿ ವಾಸಿಸುತ್ತಿದ್ರು. ಇದೀಗ ನಟಿ ಮೀನಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಹರಿದಾಡುತ್ತಿದೆ. ತನಗಿಂತ ಕಿರಿಯ ವ್ಯಕ್ತಿಯನ್ನು ಮೀನಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಮೀನಾ ಅವರಿಗೆ 48 ವರ್ಷ ವಯಸ್ಸಾಗಿದ್ದು, ಇದೀಗ ನಟಿ ಮದುವೆಯಾಗಲಿದ್ದಾರೆ ಎನ್ನಲಾಗ್ತಿದೆ.