21 ಮಕ್ಕಳ‌ ಮೇಲೆ 4 ವರ್ಷ ಲೈಂಗಿಕ ದೌರ್ಜನ್ಯವೆಸಗಿದ ಸರ್ಕಾರಿ ಹಾಸ್ಟೆಲ್ ವಾರ್ಡನ್‌ಗೆ ಗಲ್ಲು ಶಿಕ್ಷೆ, ಇನ್ನಿಬ್ಬರಿಗೆ 20 ವರ್ಷ ಜೈಲು

public wpadmin

ಗುವಾಹಟಿ: 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ವಸತಿ ಶಾಲೆಯ ಮಾಜಿ ಹಾಸ್ಟೆಲ್ ವಾರ್ಡನ್‌ಗೆ ಅರುಣಾಚಲ ಪ್ರದೇಶದ ವಿಶೇಷ ಪೋಕ್ಸೊ ನ್ಯಾಯಾಲಯ ಗುರುವಾರ ಮರಣದಂಡನೆ ವಿಧಿಸಿದೆ.

ಇದು ಪೋಕ್ಸೋ ಕೇಸ್‌ನಲ್ಲಿ ದೇಶದಲ್ಲೇ ಮೊದಲು ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಪರಾಧಿ ವಾರ್ಡನ್ 2019 ಮತ್ತು 2022 ರ ನಡುವೆ ನಾಲ್ಕು ವರ್ಷಗಳ ಕಾಲ ಎಂಟು ಹುಡುಗರು ಮತ್ತು 13 ಹುಡುಗಿಯರು 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ದೌರ್ಜನ್ಯಕ್ಕೊಳಗಾಗುವ ಸಮಯದಲ್ಲಿ ಹುಡುಗಿಯರು ಆರರಿಂದ 15 ವರ್ಷ ವಯಸ್ಸಿನವರು ಮತ್ತು ಹುಡುಗರು ಏಳರಿಂದ 16 ವರ್ಷ ವಯಸ್ಸಿನವರಾಗಿದ್ದರು. ಸಂತ್ರಸ್ತರಲ್ಲಿ ನಾಲ್ವರು ಆತ್ಮಹತ್ಯೆಗೂ ಯತ್ನಿಸಿದ್ದರು.

ಶಿ-ಯೋಮಿ ಜಿಲ್ಲೆಯ ಮೊನಿಗಾಂಗ್‌ನಲ್ಲಿರುವ ಕರೋ ಸರ್ಕಾರಿ ವಸತಿ ಶಾಲೆಯ ಮಾಜಿ ಹಾಸ್ಟೆಲ್ ವಾರ್ಡನ್, ಪ್ರಧಾನ ಆರೋಪಿ ಯುಮ್ಕೆನ್ ಬಾಗ್ರಾಗೆ ಮರಣದಂಡನೆ ವಿಧಿಸಲಾಗಿದೆ.

ಜತೆಗೆ, ಯುಪಿಯಾದ ವಿಶೇಷ ನ್ಯಾಯಾಧೀಶರು (ಪೋಕ್ಸೊ) ಶಾಲೆಯ ಹಿಂದಿ ಶಿಕ್ಷಕ ಮಾರ್ಬೊಮ್ ನ್ಗೊಮ್ದಿರ್ ತಾಪಿರ್, ಮಾಜಿ ಮುಖ್ಯೋಪಾಧ್ಯಾಯ ಸಿಂಗ್ತುಂಗ್ ಯೋರ್ಪೆನ್ ಅವರಿಗೆ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಡೇನಿಯಲ್ ಪರ್ಟಿನ್ ಮತ್ತು ತಾಜುಂಗ್ ಯೋರ್ಪೆನ್ ಅವರನ್ನು ಖುಲಾಸೆಗೊಳಿಸಲಾಗಿದೆ.

ಪೋಕ್ಸೋ ಕಾಯ್ದೆಯಡಿಯಲ್ಲಿ ಭೀಕರ ಲೈಂಗಿಕ ದೌರ್ಜನ್ಯ, ತೀವ್ರತರವಾದ ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಆರೋಪದಡಿಯಲ್ಲಿ ಪ್ರಧಾನ ಆರೋಪಿ ಬಾಗ್ರಾ ಅವರನ್ನು ದೋಷಿ ಎಂದು ಘೋಷಿಸಲಾಗಿದೆ.

ದೇಶದಲ್ಲಿ ಪೋಕ್ಸೋ ಕಾಯ್ದೆಯಡಿ ಮರಣದಂಡನೆ ವಿಧಿಸಿದ ಏಕೈಕ ಪ್ರಕರಣ ಇದಾಗಿರಬೇಕು. ಪ್ರಕರಣದಲ್ಲಿ ನಾನು ಸಂಶೋಧನೆಯನ್ನು ವ್ಯಾಪಕವಾಗಿ ಮಾಡಿದ್ದೇನೆ ಮತ್ತು ಇಂತಹ ಪ್ರಕರಣಗಳನ್ನು ನಾನು ನೋಡಿಲ್ಲ ನ್ಯಾಯಾಧೀಶರು ಹೇಳಿದ್ದಾರೆ.

Share This Article
Leave a comment