ನಟಿ ಅನನ್ಯಾ ಪಾಂಡೆ ಅವರ ಮುದ್ದಿನ ನಾಯಿ ಫಡ್ಜಿ ಸಾವನ್ನಪ್ಪಿದೆ. ಇನ್ ಸ್ಟಾಗ್ರಾಮ್ ಮೂಲಕ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಅನನ್ಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಪೆಟ್ ಜೊತೆಗಿನ ತನ್ನ ಬಾಲ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅನನ್ಯಾ ಅವರ ನೆಚ್ಚಿನ ಪೆಟ್ ಸಾವನ್ನಪ್ಪಿದ್ದು, ನೋವಲ್ಲಿ ನಟಿ ಕಣ್ಣೀರು ಹಾಕಿದ್ದಾರೆ.
ಫಡ್ಜ್ ಜೊತೆ ಇರುವ ಪೋಟೋಗಳನ್ನು ಕೂಡ ನಟಿ ಶೇರ್ ಮಾಡಿದ್ದಾರೆ. ತಾಯಿ ಭಾವನಾ, ಸಹೋದರಿ ರೈಸಾ ಪಾಂಡೆ ಮತ್ತು ಅನನ್ಯಾ ತನ್ನ ಪೆಟ್ ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋವನ್ನು ಪೋಸ್ಟ್ ಮಾಡಿದ ನಟಿ ‘ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಐ ಲವ್ ಯು ಫೈಟರ್. 16 ವರ್ಷಗಳ ಜೀವನವು ನಿಮ್ಮೊಂದಿಗೆ ತುಂಬಾ ಸಂತೋಷದಿಂದ ತುಂಬಿತ್ತು, ನಾನು ಪ್ರತಿದಿನ ನಿನ್ನನ್ನು ಮಿಸ್ ಮಾಡಿಕೊಳ್ತೇನೆ ಎಂದು ನಟಿ ಬರೆದಿದ್ದಾರೆ.
ನಟಿ ಅನನ್ಯಾ ಅವರ ಸ್ನೇಹಿತೆ ಶನಯಾ ಕಪೂರ್ ಕೂಡ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ ಲವ್ ಯೂ ಎಂದು ಬರೆದಿದ್ದಾರೆ. ಇನ್ನು ನಟಿಗೆ ಅಭಿಮಾನಿಗಳು ಸಮಾಧಾನದ ಕಮೆಂಟ್ ಮಾಡ್ತಿದ್ದಾರೆ. ಭಾವನಾ, ಇಶಾ ಗುಪ್ತಾ ಮತ್ತು ಮಹೀಪ್ ಕಪೂರ್ ಕಾಮೆಂಟ್ ವಿಭಾಗದಲ್ಲಿ ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಅನನ್ಯಾ ಪಾಂಡೆ ಅವರ ಮುದ್ದಿನ ನಾಯಿ ಫಡ್ಜಿಯನ್ನು 2008 ರಲ್ಲಿ ಅವರ ಮನೆಗೆ ಕರೆತಂದಿದ್ರು.
ನಟಿ ಅನನ್ಯಾ ಪಾಂಡೆ ನಟ ಚಂಕಿ ಪಾಂಡೆ ಮತ್ತು ಕಾಸ್ಟ್ಯೂಮ್ ಡಿಸೈನರ್ ಭಾವನಾ ಅವರ ಪುತ್ರಿಯಾಗಿದ್ದಾರೆ. 2019 ರಲ್ಲಿ ಬಿಡುಗಡೆಯಾದ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಇದು 2012 ರ ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮುಂದುವರಿದ ಭಾಗವಾಗಿದೆ. ಟೈಗರ್ ಶ್ರಾಫ್, ತಾರಾ ಸುತಾರಿಯಾ ಮತ್ತು ಆದಿತ್ಯ ಸೀಲ್ ಕೂಡ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ನಲ್ಲಿ ಇದ್ದರು.
ಪುರಿ ಜಗನ್ನಾಥ್ ನಿರ್ದೇಶನದ 2022 ರ ಸ್ಪೋರ್ಟ್ಸ್ ಆಕ್ಷನ್ ಚಿತ್ರ ‘ಲೈಗರ್’ ಮೂಲಕ ಅನನ್ಯಾ ತೆಲುಗು ಪದಾರ್ಪಣೆ ಮಾಡಿದರು. ಈ ಚಿತ್ರವನ್ನು ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿತ್ತು. ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಅನನ್ಯಾ ಕಾಣಿಸಿಕೊಂಡಿದ್ರು. ಇದಲ್ಲದೆ ರಮ್ಯಾ ಕೃಷ್ಣ, ರೋನಿತ್ ರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕದ ಬಾಕ್ಸರ್ ಮೈಕ್ ಟೈಸನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.