ಹುಡುಗಿಯರಿಗೂ ಪ್ರೈವೇಟ್ ಪಾರ್ಟ್ ಇರತ್ತೆ ಅನ್ನೋದು ನೆನಪಿರಲಿ: ಗೋಲ್ಡ್ ಸುರೇಶ್ ವಿರುದ್ಧ ಗೌತಮಿ ಗರಂ

public wpadmin

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಏಳನೇ ವಾರವೂ ಸ್ಪರ್ಧಿಗಳ ಮಧ್ಯೆ ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ. ಸುರೇಶ್ ಹಾಗೂ ಗೌತಮಿ ಮಧ್ಯೆ ಮಾತಿನ ಸಮರವೂ ನಡೆದಿದೆ. ‘ಹುಡುಗಿಯರಿಗೂ ಪ್ರೈವೇಟ್ ಪಾರ್ಟ್ ಇರುತ್ತೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ ಪ್ರಕಾರ ಪ್ರತಿ ಜೋಡಿಗಳು ಸ್ಟ್ಯಾಚ್ಯೂ ಮಾದರಿಯಲ್ಲಿ ನಿಲ್ಲಬೇಕು. ಅವರಿಗೆ ಎದುರಾಳಿಗಳು ನೀರನ್ನು ಎರಚಬೇಕು. ಪ್ರತಿ ಸುತ್ತಿನಲ್ಲಿ ಮೂರು ಜೋಡಿಗಳು ನಿಲ್ಲುತ್ತವೆ. ಈ ಮೂರು ಜೋಡಿಗಳ ಪೈಕಿ ಅತಿ ಕಡಿಮೆ ಫೌಲ್ ಮಾಡಿದವರಿಗೆ 100 ಅಂಕ, ಎರಡನೇ ಸ್ಥಾನದಲ್ಲಿ ಇರುವವರಿಗೆ 50 ಅಂಕ ಹಾಗೂ ಅತೀ ಹೆಚ್ಚು ಫೌಲ್ ಮಾಡಿದವರಿಗೆ ಶೂನ್ಯ ಅಂಕ ನೀಡಲಾಗುತ್ತದೆ.
ಭವ್ಯಾ ಗೌಡ ಹಾಗೂ ಮಂಜು ಅವರು ಸ್ಟ್ಯಾಚ್ಯೂ ಆಗಿ ನಿಂತಿದ್ದರು. ಈ ವೇಳೆ ಆಟದ ನಿಯಮದಂತೆ ಸುರೇಶ್ ಹಾಗೂ ಅನುಷಾ ಅವರು ಬಕೆಟ್ನಲ್ಲಿ ನೀರು ಹಾಕಿ ತೊಂದರೆ ಕೊಡುವ ಪ್ರಯತ್ನ ಮಾಡಿದ್ದಾರೆ. ಇದು ಭವ್ಯಾ ಅವರ ಕಾಲಿಗೆ ಹೊಡೆದಿದೆ. ಆಗ ಭವ್ಯಾ ಅವರು ಅಳು ಬಂದರೂ ತಡೆದುಕೊಂಡಿದ್ದಾರೆ. ಇದನ್ನು ಗೌತಮಿ ಅವರು ಖಂಡಿಸಿದ್ದು, ಸುರೇಶ್‌ಗೆ ಎಚ್ಚರಿಕೆ ನೀಡಿದ್ದಾರೆ.
‘ಸುರೇಶ್ ನೀವು ಮಾಡಿದ್ದು ತಪ್ಪು. ಗಂಡು ಮಕ್ಕಳಿಗೆ ಮಾತ್ರ ಪ್ರೈವೇಟ್ ಪಾರ್ಟ್ ಇರೋದಾ? ಹೆಣ್ಣುಮಕ್ಕಳಿಗೂ ಇರುತ್ತೆ. ನೀರನ್ನು ಹಾಕುವಾಗ ಸ್ವಲ್ಪ ಎಚ್ಚರಿಕೆಯಿಂದ ಹಾಕಿ’ ಎಂದು ಗೌತಮಿ ಅವರು ಹೇಳಿದ್ದಾರೆ.

ಗೌತಮಿ ಜಾಧವ್ ಅವರು ಹೆಣ್ಣುಮಕ್ಕಳ ವಿಚಾರ ಬಂದಾಗ ಜೋರು ಧ್ವನಿಯಲ್ಲಿ ಮಾತನಾಡುತ್ತಾರೆ. ಎಲ್ಲರಿಗೂ ಖಡಕ್ ಉತ್ತರ ಕೊಡುವ ಮೂಲಕ ಅವರು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

Share This Article
Leave a comment