ಪುನೀತ್ ರಾಜ್‌ಕುಮಾರ್ ಕಳೆದುಕೊಂಡು ಕರುನಾಡಿನ ಅಭಿಮಾನಿಗಳು ಆನಂದ್ ಆರ್ಯ ಎಂಬುವವರಲ್ಲಿ ಅಪ್ಪುನನ್ನು ಕಾಣುತ್ತಿದ್ದಾರೆ.
ಆದ್ರೆ ಇದೀಗ ಇದೇ ಜೂನಿಯರ್ ಅಪ್ಪು, ಹಾಸಿಗೆ ಹಿಡಿದಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜ್ಯೂನಿಯರ್ ಅಪ್ಪು ಅಂತ್ಲೇ ಜನ ಇವರನ್ನು ಗುರ್ತಿಸುತ್ತಾರೆ. ಅಲ್ಲದೇ, ಇವರು ಮಾರಕಾಸ್ತ್ರ ಮತ್ತು ಛಾಯಾ ಎಂಬ ಎರಡು ಸಿನಿಮಾಗಳಲ್ಲಿ ಛಾನ್ಸ್ ಗಿಟ್ಟಿಸಿಕೊಂಡಿದ್ದರು. ಈಗ ಗಂಭೀರ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದಾರೆ.
ಕಳೆದ 4 ವರ್ಷಗಳಿಂದ ರಕ್ತದೊತ್ತಡದಿಂದ ನಟ ಆನಂದ್ ಆರ್ಯ ಬಳಲುತ್ತಿದ್ದಾರೆ. ನಿಯಮಿತವಾಗಿ ಔಷಧೋಪಚಾರವನ್ನೂ ಪಾಲಿಸುತ್ತ ಬಂದಿದ್ದಾರೆ. ಆದರೆ, ಇತ್ತೀಚಿನ ಕೆಲ ದಿನಗಳ ಹಿಂದೆ ಶೂಟಿಂಗ್ ಸಮಯದಲ್ಲಿ ಬಿಪಿ ಮಾತ್ರೆ ತೆಗದುಕೊಳ್ಳುವುದನ್ನೇ ಬಿಟ್ಟಿದ್ದರು. ಹಾಗೆ ಮಾತ್ರೆ ಬಿಟ್ಟಿದ್ದೇ ಇದೀಗ ಅವರನ್ನು ಆಸ್ಪತ್ರೆಗೆ ತಂದು ಮಲಗಿಸಿದೆ. ಪರೀಕ್ಷೆ ಮಾಡಿದ ವೈದ್ಯರು, ಎರಡೂ ಕಿಡ್ನಿ ಫೇಲ್ ಆಗಿದೆ ಎಂದು ತಿಳಿಸಿದ್ದಾರೆ. ಕಿಡ್ನಿ ಕಸಿ ಮಾಡಿಸಬೇಕಿದೆಯಂತೆ. ಜತೆಗೆ ಡಯಾಲಿಸಿಸ್ ಸಹ ನಡೆಯುತ್ತಿದೆ .