ಹಾಸನ: ಹಾಸನಾಂಬೆ ದೇವಿ (Hasanamba Temple) ದರ್ಶನಕ್ಕೆ ಎರಡನೇ ದಿನವಾದ ಶನಿವಾರದಂದು ಭಕ್ತರ ದಂಡು ಹರಿದು ಬರುತ್ತಿದೆ.
ನಸುಕಿನ ನಾಲ್ಕು ಗಂಟೆಯಿಂದಲೇ ಹಾಸನ (Hassan) ದೇವಿ ದರ್ಶನ ಆರಂಭಗೊಂಡಿದೆ. ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸಾವಿರ ರೂ., ಮುನ್ನೂರು ರೂ. ಪಾವತಿಸಿದರೆ ವಿಶೇಷ ದರ್ಶನವಿರುತ್ತದೆ. ಈ ಸಾಲಿನಲ್ಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆಯುತ್ತಿದ್ದಾರೆ.
ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತರು, ರಾಜಕೀಯ ಗಣ್ಯರು, ಸೆಲೆಬ್ರಿಟಿಗಳು ಆಗಮಿಸಿ ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತವಾಗಿ ತೆರೆಯಲಾಯಿತು.