ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ – ಇಂದು ಮಧ್ಯಾಹ್ನ ತೆರೆಯಲಿದೆ ಗರ್ಭಗುಡಿ ಬಾಗಿಲು

public wpadmin

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ, ಶಕ್ತಿದೇವತೆ ಹಾಸನಾಂಬೆಯ ದರ್ಶನೋತ್ಸವ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆಶ್ವೀಜ ಮಾಸದ ಮೊದಲವಾದ ಇಂದು ಮಧ್ಯಾಹ್ನ 12 ಗಂಟೆ ನಂತರ ದೇವಿಯ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ. ನ.3ರ ಬೆಳಿಗ್ಗೆವರೆಗೆ ದೇವಿಯ ದರ್ಶನೋತ್ಸವಕ್ಕೆ ಅವಕಾಶವಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ವರ್ಷಕ್ಕೊಮ್ಮೆ ದರ್ಶನ ನೀಡಲು ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಮಳೆ-ಬಿಸಿಲಿನಿಂದ ಭಕ್ತರು ಆಶ್ರಯ ಪಡೆಯಲು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. 

ಹಾಸನಾಂಬೆ ದೇವಾಲಯದ ಒಳ-ಹೊರಗೆ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ಹಾಸನಾಂಬೆಯ ಬಾಗಿಲ ಮುಂಭಾಗ ಕಲಶದ ರೀತಿಯ ಹೂವಿನ ಕುಂಡ ಎಲ್ಲರ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ದೇವಾಲಯದ ಬಳಿಗೆ ಬರುವ ಗಣ್ಯಾತಿಗಣ್ಯರಿಗೆ ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ಎರಡು ಮಾರ್ಗ ಮಾಡಲಾಗಿದೆ. ಹಾಗೆಯೇ ಲಡ್ಡು-ಪ್ರಸಾದ ವಿತರಣೆಗೆ 24 ಕೌಂಟರ್ ತೆರೆಯಲಾಗಿದೆ. ಹಾಸನ ನಗರವನ್ನು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ 1400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 

Share This Article
Leave a comment