ಮುಂಬೈ: ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ ಪಡೆದು ಬೇರೆಯಾಗಿರುವ ಸುದ್ದಿ ಮಾಸುವ ಮುನ್ನವೇ ನತಾಶಾ ಹೊಸ ಬಾಯ್ಫ್ರೆಂಡ್ ಜೊತೆಗೆ ಮಸ್ತಿ ಮಾಡ್ತಿದ್ದಾರೆ.
ಸರ್ಬಿಯಾದಿಂದ ವಾಪಾಸ್ಸಾಗಿರೋ ನತಾಶಾ ಸದ್ಯ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಅಂದ್ಹಾಗೆ ಜಾಲಿ ಮೂಡ್ನಲ್ಲಿ ಸ್ವಿಮ್ಮಿಂಗ್ಫೂಲ್ನಲ್ಲಿ ಮಸ್ತಿ ಮಾಡ್ತಿರೋ ನತಾಶಾ ಜೊತೆಗಿರೋದು ರೂಮರ್ಡ್ ಬಾಯ್ಫ್ರೆಂಡ್ ಅಲೆಕ್ಸಾಂಡೆರ್ ಲಿಕ್.
ಹಾರ್ದಿಕ್ ಜೊತೆ ಡಿವೋರ್ಸ್ ಆದ ಬಳಿಕ ಸರ್ಬಿಯಾಗೆ ಹಾರಿದ್ದ ನತಾಶಾ, ಕಳೆದ ತಿಂಗಳು ಭಾರತಕ್ಕೆ ವಾಪಾಸ್ಸಾಗಿದ್ರು. ವಾಪಾಸ್ಸಾದ ಬೆನ್ನಲ್ಲೇ ಮಗನನ್ನ ಹಾರ್ದಿಕ್ ಸುಪರ್ದಿಗೆ ನೀಡಿದ ನತಾಶಾ, ಕೆಲವೇ ಸಮಯದಲ್ಲಿ ಬಾಯ್ ಫ್ರೆಂಡ್ ಜೊತೆಗೆ ಓಡಾಟ ನಡೆಸುತ್ತಿದ್ದಾರೆ. ಅಲೆಕ್ಸಾಂಡರ್ ಎಂಟ್ರಿಯೇ ಹಾರ್ದಿಕ್ ಜೊತೆಗಿನ ದಾಂಪತ್ಯ ಜೀವನ ಅಂತ್ಯಕ್ಕೆ ಕಾರಣಾನ ಅನ್ನೋ ಅನುಮಾನದ ಪ್ರಶ್ನೆ ಸದ್ಯ ಚರ್ಚೆಯಲ್ಲಿದೆ.