ಇತ್ತೀಚಿನ ದಿನಗಳಲ್ಲಿ ನಟ-ನಟಿಯರು ಯಾವುದೇ ಡ್ರೆಸ್ ತೊಟ್ರು ಅದೇ ಫ್ಯಾಷನ್ ಆಗುತ್ತೆ, ಕೆಲ ದಿನಗಳ ಬಳಿಕ ಫುಲ್ ಟ್ರೆಂಡ್ ಆಗುತ್ತೆ. ಕೊಡಗಿನ ಕುವರಿ, ನಟಿ ರಶ್ಮಿಕಾ ಮಂದಣ್ಣ ಇದೀಗ ಹರಿದ ಪ್ಯಾಂಟ್ ಧರಿಸಿ, ಟೈಟ್ ಟಾಪ್ ಹಾಕಿ ತೊಟ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಮಾರ್ಡನ್ ಲುಕ್ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಪ್ಯಾಂಟ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹರಿದ ಪ್ಯಾಂಟ್, ಮಾರ್ಡನ್ ಲುಕ್ ನೋಡಿದ ನೆಟ್ಟಿಗರು ಫೋಟೋಗೆ ಬಗೆ ಬಗೆಯ ಕಮೆಂಟ್ ಮಾಡ್ತಿದ್ದಾರೆ. ರಶ್ಮಿಕಾ ನ್ಯೂ ಲುಕ್ಗೆ ಫ್ಯಾನ್ಸ್ ಲೈಕ್ಗಳ ಸುರಿಮಳೆಗೈದಿದ್ದಾರೆ. ಕೆಲವರು ನಟಿಯ ಹರಿದ ಪ್ಯಾಂಟ್ ನೋಡಿ, ನ್ಯಾಷನಲ್ ಕ್ರಶ್ಗ್ಯಾಕೆ ಇದೆಂಥಾ ಸ್ಥಿತಿ ಬಂತು ಎಂದು ಕಮೆಂಟ್ ಮಾಡ್ತಿದ್ದಾರೆ.
ಅನೇಕ ಬ್ರ್ಯಾಂಡ್ಗಳಿಗೆ ನಟಿ ರಶ್ಮಿಕಾ ಮಾಡೆಲ್ ಕೂಡ ಆಗಿದ್ದಾರೆ. ನಟಿ ರಶ್ಮಿಕಾ ಇದೀಗ ಇನ್ಸ್ಟಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಟಾಪ್ , ಬ್ಲೇಸರ್ ಹಾಗೂ ಫ್ಯಾಷನ್ ಪ್ಯಾಂಟ್ ಧರಿಸಿದ್ದು, ಕೈಯಲ್ಲಿ ರೆಡ್ ಕಲರ್ ಬ್ಯಾಗ್ ಹಿಡಿದು ಹಾಲಿವುಡ್ ಬ್ಯೂಟಿಯಂತೆ ಕಾಣ್ತಿದ್ದಾರೆ. ರಶ್ಮಿಕಾ ಫೋಟೋಗಳು ಇದೀಗ ಫುಲ್ ವೈರಲ್ ಆಗಿದೆ.
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ, ಸಾನ್ವಿ ಜೋಸೆಫ್ ಪಾತ್ರದಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹೃದಯ ಕದ್ದಿದ್ರು. ಬಳಿಕ ಚಲೋ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟ ನಟಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ರಶ್ಮಿಕಾ ಸದ್ಯ ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.