ಸುಂದರ, ಕಾಂತಿಯುಕ್ತ ಚರ್ಮ ನಿಮ್ಮದಾಗಬೇಕೇ? ತಪ್ಪದೇ ತಿನ್ನಿ ಈ ಹಣ್ಣು-ತರಕಾರಿ

public wpadmin

ಸುಂದರವಾದ ತ್ವಚೆ ಹೊಂದಲು ಯಾರಿಗೆ ತಾನೇ ಇಷ್ಟವಿಲ್ಲ, ಹೇಳಿ? ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು, ಮೃದುತ್ವವನ್ನು ಕಾಪಾಡಿಕೊಳ್ಳಲು ನಾನಾ ರೀತಿಯ ಕ್ರೀಮ್ ಗಳನ್ನು ಬಳಸುತ್ತಾರೆ. ತಮ್ಮ ನೆಚ್ಚಿನ ನಟ-ನಟಿಯರು ಜಾಹೀರಾತುಗಳಲ್ಲಿ ತೋರಿಸುವ ತ್ವಚೆಯ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದು ಒಂದು ಮಟ್ಟಿಗೆ ಪ್ರಯೋಜನಕಾರಿಯಾಗಬಹುದೇನೋ, ಆದರೆ, ಇದು ತಾತ್ಕಾಲಿಕವಷ್ಟೇ. ಅಲ್ಲದೇ, ಇದು ಆರೋಗ್ಯಪೂರ್ಣ ಹೊಳಪಂತೂ ಆಗಿರುವುದಿಲ್ಲ. ಹಾಗಾದರೆ, ಚರ್ಮದ ಉತ್ಪನ್ನಗಳನ್ನು ಹೆಚ್ಚಾಗಿ ಬಳಸದೆ,

ಹಣ್ಣುಗಳು ಹಾಗೂ ತರಕಾರಿಗಳ ಬಳಕೆ

ಸಾಮಾನ್ಯವಾಗಿ ಪೆರಿಮೆನೋಪಾಸ್ ಅಥವಾ ಋತುಬಂಧದ ಹಂತದಲ್ಲಿರುವ ಮಹಿಳೆಯರು, ಅಥವಾ ಆಗಾಗ್ಗೆ ಶಾಖ, ಧೂಳು ಮತ್ತು ಇತರ ಮಾಲಿನ್ಯಕಾರಕ ವಾತಾವರಣದಲ್ಲಿ ಕೆಲಸ ಮಾಡುವವರಿಗೆ ತ್ವಚೆ ಕಪ್ಪಾಗುವುದು, ಅಥವಾ ಬೇಗನೇ ವಯಸ್ಸಾದಂತೆ ಕಾಣುವುದು ಸಾಮಾನ್ಯ.

ಅಂತಹವರು ಸೂಕ್ತವಾದ ತ್ವಚೆ ಉತ್ಪನ್ನಗಳನ್ನು ಬಳಸುವುದರ ಜೊತೆಗೆ, ಅತಿಯಾದ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಸೇವನೆಗೆ ಕಡಿವಾಣ ಹಾಕಿ ಸಮತೋಲಿತ ಆಹಾರವನ್ನು ಸೇವಿಸಿದರೆ ಅದು ಚರ್ಮವನ್ನು ರಕ್ಷಿಸಲು ಮತ್ತು ಅಕಾಲಿಕವಾಗಿ ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಚರ್ಮಕ್ಕೆ ಹಾನಿಯುಂಟಾಗುವುದನ್ನು ತಡೆಗಟ್ಟಲು ಮತ್ತು ಚರ್ಮದ ಚೇತರಿಕೆಗೆ ಸಹಾಯ ಮಾಡಲು ನೀವು ವಿಟಮಿನ್‌ಗಳು, ಖನಿಜಗಳಿಂದ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಬೇಕು.

ಚರ್ಮದ ಆರೋಗ್ಯಕ್ಕೆ ಯಾವ್ಯಾವ ಹಣ್ಣುಗಳು ಒಳ್ಳೆಯದು?

ಆವಕಾಡೊ: ಅವಕಾಡೋವಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಜೊತೆಗೆ, ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಮತ್ತು ಚರ್ಮವನ್ನು ಸುಂದರಗೊಳಿಸಲು ಸಹಾಯ ಮಾಡುವ ಇತರ ಅಗತ್ಯ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಹೊಂದಿದೆ ಈ ಅವಾಕಾಡೊ. ಹಾಗಾಗಿ, ಅವಕಾಡೋವನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಕಾಂತಿಯುಕ್ತ ಚರ್ಮ ನಿಮ್ಮದಾಗುವುದರಲ್ಲಿ ಅನುಮಾನವಿಲ್ಲ.

ಮಾಗಿದ ಪಪ್ಪಾಯಿ: ಹಣ್ಣಾದ ಪಪ್ಪಾಯಿಯಲ್ಲಿ ವಿಟಮಿನ್ ಎ, ಸಿ, ಕೆ ಇದ್ದು, ಈ ಖನಿಜಗಳು ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಬೆರಿಹಣ್ಣುಗಳು: ಬೆರಿಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಸಿ ಮತ್ತು ಆಂಟಿಆಕ್ಸಿಡೆಂಟ್ ಆಂಥೋಸಯಾನಿನ್‌ಗಳಿದ್ದು, ಇದು ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ, ಬೆರಿಹಣ್ಣುಗಳ ಸೇವನೆಯು ಚರ್ಮದ ಆರೋಗ್ಯ, ಹಾಗೂ ಸೌಂದರ್ಯವನ್ನು ಕಾಪಾಡಲು, ಬಹಳ ಸಹಕಾರಿ.

Share This Article
Leave a comment