ನವರಾತ್ರಿಗೆ ಕೌಂಟ್ ಡೌನ್ ಆರಂಭವಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ನವರಾತ್ರಿಯ ಸಂಭ್ರಮ ಜೋರಾಗಿದೆ. ನವರಾತ್ರಿಯಂದು ನವದುರ್ಗಿಯನ್ನ ಇಟ್ಟು ವಿಶೇಷವಾಗಿ ಪೂಜೆ ಮಾಡಿ ಹಬ್ಬವನ್ನ ಆಚಾರಿಸುವ ಪ್ರತೀತಿ ಇದೆ. ಹೀಗಾಗಿ ಈ ವರ್ಷ ಹೊಸ ಬಗೆಯ ವಿಶೇಷ ದುರ್ಗಮಾತೆಯ ಮೂರ್ತಿಗಳು ಎಂಟ್ರಿಕೊಟ್ಟಿವೆ. ನೋಡುಗರನ್ನ ಸೆಳೆಯುತ್ತಿವೆ.
ಈ ಬಾರಿ ನವದುರ್ಗಿ ಮೂರ್ತಿಗಳನ್ನ ಮಣ್ಣಲ್ಲಿ ಮಾಡಿದ್ದು, ಕೊಂಚ ಬೆಲೆಯೂ ಏರಿಕೆಯಾಗಿದೆ. ನವರಾತ್ರಿಗೆ ಒಂದು ವಾರ ಮಾತ್ರ ಬಾಕಿ ಇದ್ದು, ಸಾಕಷ್ಟು ಜನರು ಆರ್ಡಾರ್ ಕೊಟ್ಟು ಖರೀದಿ ಮಾಡ್ತಿದ್ದಾರೆ.
ಇನ್ನು, ಇದರ ಜೊತೆಗೆ ದಸರಾ ಬೊಂಬೆಗಳನ್ನ ಇಟ್ಟಿದ್ದು, ಸನಾತನ ಸಂಸ್ಕೃತಿಯನ್ನು ಸಾರುವ ಹಲವು ಬೊಂಬೆಗಳು ನೋಡುಗರನ್ನ ಸೆಳೆಯುತ್ತಿವೆ. ವ್ಯಾಪಾರ ವಹಿವಾಟು ಜೋರಾಗಿದೆ.
ಸಿಲಿಕಾನ್ ಸಿಟಿಯಲ್ಲಿ ನವದುರ್ಗಿಯರ ಮೂರ್ತಿಗಳ ಖರೀದಿ ಭರಾಟೆ ಜೋರು
Leave a comment
Leave a comment