ಸಖತ್ ಸ್ಟೈಲಿಷ್ ಲುಕ್​​ನಲ್ಲಿ ರಮೇಶ್ ಅರವಿಂದ್! ಏಜ್ ಗೆಸ್ ಮಾಡಿ ನೋಡೋಣ

public wpadmin

ಕನ್ನಡದ ನಟ-ನಿರ್ದೇಶಕ ರಮೇಶ್ ಅರವಿಂದ್ ವರ್ಷ ವರ್ಷಕ್ಕೂ ಯಂಗ್ ಆಗುತ್ತಿದ್ದಾರೆ. ಏಜ್ ಎಷ್ಟು ಅನ್ನೋರಿಗೆ ಉತ್ತರವೇ ಸಿಗದಷ್ಟು ಯಂಗ್ ಆಗಿಯೇ ಕಾಣಿಸುತ್ತಿದ್ದಾರೆ. ದಿನೇ ದಿನೇ ಏನ್ ಸೂಪರ್ ಆಗಿಯೇ ಕಾಣಿಸುತ್ತಾರೆ ಅನ್ನುವ ಮಟ್ಟಿಗೆ ರಮೇಶ್ ಅರವಿಂದ್ ಹೊಳೆಯುತ್ತಿದ್ದಾರೆ.

ರಮೇಶ್ ಅರವಿಂದ್ ಅವರು ತಮ್ಮ ಜನ್ಮ ದಿನದ ಒಂದು ದಿನ ಮೊದಲೇ ಒಂದು ಕೆಲಸ ಮಾಡಿದ್ದಾರೆ. ತಮ್ಮ ಸ್ಪೆಷಲ್ ಫೋಟೋ ಶೂಟ್‌ನ ಒಂದಷ್ಟು ಫೋಟೋಗಳನ್ನ ಕೂಡ ಶೇರ್ ಮಾಡಿದ್ದಾರೆ. ಆ ಫೋಟೋಗಳ ಜೊತೆಗೆ ಒಂದೆರಡು ಲೈನ್‌ಗಳನ್ನೂ ಕೂಡ ಬರೆದುಕೊಂಡಿದ್ದಾರೆ. ಅವರಿಗೆ 59 ವರ್ಷ ಆಗಿದ್ದು ಈ ಫೋಟೋ ನೋಡಿದರೆ ಹಾಗೆ ಕಾಣುವುದಿಲ್ಲ.

ನಾನು ಇನ್ನೊಂದು ವರ್ಷಕ್ಕೆ ಕಾಲಿಡುವ ಮೊದಲು, ಈ ದಶಕದ ಕೊನೆಯ ದಿನದ ಕ್ಷಣಗಳನ್ನು ಕ್ಯಾಪ್ಚರ್ ಮಾಡಬೇಕಿದೆ. ಹಾಗಾಗಿಯೇ ಈ ಒಂದು ಫೋಟೋ ಶೂಟ್ ಅಂತಲೆ ಬರೆದುಕೊಂಡಿದ್ದಾರೆ. ಹಾಗೆ ಇಂಗ್ಲೀಷ್‌ನಲ್ಲಿ ಬರೆದ ಆ ಸಾಲು ಹೀಗಿವೆ; Before I enter into another year, thought I must freeze moments from last day of this decade. ರಮೇಶ್ ಅರವಿಂದ್ ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅದ್ಭುತ ನಟರಾಗಿಯೇ ಕನ್ನಡಿಗರ ಹೃದಯದಲ್ಲಿ ಈಗಲೂ ಇದ್ದಾರೆ. ಕಾಲಕ್ಕೆ ತಕ್ಕನಾಗಿಯೇ ಬದಲಾಗುತ್ತಿರೋ ರಮೇಶ್ ಅರವಿಂದ್ ಕಿರುತೆರೆಯಲ್ಲಿ ಪ್ರೀತಿಯಿಂದ ರಮೇಶ್ ಶೋ ಮಾಡಿದ್ದಾರೆ. ಜೀ ಕನ್ನಡದಲ್ಲಿ ವೀಕೆಂಡ್ ವಿತ್ ರಮೇಶ್ ಶೋ ಕೂಡ ಮಾಡಿದ್ದಾರೆ

Share This Article
Leave a comment