ಬೆಂಗಳೂರು: 50 ದಿನದ ಬಳಿಕ ಬಿಗ್ ಬಾಸ್ ಮನೆಗೆ ಬಂದ ರಜತ್, ಶೋಭಾ ಮನೆಯಲ್ಲಿ ಆರಂಭದಿಂದಲೂ ಇದ್ದ ಸ್ಪರ್ಧಿಗಳಿಗೆ ಸವಾಲು ಆಗಿದ್ದಾರೆ. ಮನೆಯ ಸಾಮಾಗ್ರಿ ಬಳಕೆ ಹಾಗೂ ಮನೆ ಕೆಲಸದ ವಿಚಾರದಲ್ಲೂ ರಜತ್, ಶೋಭಾ ಅವರೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಪಡೆದುಕೊಂಡಿರುವುದು ಮನೆಮಂದಿಗೆ ತಲೆನೋವಿನ ಸಂಗತಿ ಆಗಿದೆ.
ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿರುವ ಶೋಭಾ ಹಾಗೂ ರಜತ್ ಅವರ ಪೈಕಿ ತಂಡದ ನಾಯಕರಾಗಲು ಯಾರು ಅರ್ಹ ಹಾಗೂ ಅನರ್ಹರು ಎನ್ನುವ ಆಯ್ಕೆಯನ್ನು ಮಾಡಲು ಇತರೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಅವಕಾಶ ನೀಡಿದ್ದಾರೆ. ಈ ವಿಚಾರದಲ್ಲಿ ಮಂಜು ಹಾಗೂ ಶೋಭಾ ನಡುವೆ ಮಾತಿನ ಯುದ್ಧವೇ ನಡೆದಿದೆ. ಮನೆಯ ನೀತಿ ನಿಯಮಗಳನ್ನು ಅಲ್ಲಾಡಿಸಿದ್ದು ಶೋಭಾ ಅವರು ಅಂಥ ನನಗೆ ಅನ್ನಿಸುತ್ತದೆ ಎಂದು ಮಂಜು ಹೇಳಿದ್ದಾರೆ. ಇದಕ್ಕೆ ಗರಂ ಆದ ಶೋಭಾ ಅಲ್ಲಾಡಿಸುವುದಕ್ಕೆ ಗಿಲ್ಲಾಡಿಸುವುದ್ದಕ್ಕೆ ವಾಟ್. ನಿಮಗೆ ಕ್ಲಾರಿಟಿಯೇ ಇಲ್ಲ. ನಾನ್ ಸೆನ್ಸ್ ರೀಸನ್ ಕೊಡುತ್ತಿದ್ದೀರಿ ಎಂದಿದ್ದಾರೆ.
ಇದಕ್ಕೆ ಮಂಜು ಕಿರುಚಬೇಡಿ ರೀ ಇಲ್ಲೇ ಇದ್ದೀನಿ. ಕ್ಲಾರಿಟಿಯೇ ಹೇಳ್ತಾ ಇರೋದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ. ಕೇಳಿಸಿಕೊಳ್ಳಿ ರೆಸ್ಪೆಕ್ಟ್ ಕಳೆದುಕೊಳ್ಳಬೇಡಿ ಎಂದು ಆಕ್ರೋಶದ ಧ್ವನಿಯಲ್ಲೇ ಶೋಭಾ ಮಂಜು ಮೇಲೆ ರೇಗಾಡಿದ್ದಾರೆ.