ಚನ್ನಪಟ್ಟಣ: ಅಭಿವೃದ್ಧಿ ಕಾರ್ಯಗಳ ಶಂಕು ಸ್ಥಾಪನೆಗೆಂದು ಚನ್ನಪಟ್ಟಣಕ್ಕೆ ಬಂದಿದ್ದ ಡಿಕೆ ಶಿವಕುಮಾರ್ ಗೆ ತಮ್ಮ ಶೂನದ್ದೇ ಚಿಂತೆಯಾಗಿತ್ತು. ಹೀಗಾಗಿ ಶೂ ಕಾಯಲು ಒಬ್ಬ ಭದ್ರತಾ ಸಿಬ್ಬಂದಿಯನ್ನಿಟ್ಟುಕೊಂಡಿದ್ದಾರೆ.
ಚನ್ನಪಟ್ಟಣದಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದಾಗ ಸಾಕಷ್ಟು ಜನ ಸೇರಿದ್ದರು. ಈ ವೇಳೆ ಪುರೋಹಿತರು ಪೂಜೆ ಮಾಡಿದರು. ಇನ್ನು ಪೂಜೆ ವೇಳೆ ಡಿಕೆಶಿ ತಮ್ಮ ಶೂ ಕಳಚಲೇ ಬೇಕಾಗಿತ್ತು. ಆದರೆ ಅವರಿಗೆ ಜನರ ನೂಕುನುಗ್ಗಲಿನ ನಡುವೆ ತಮ್ಮ ಶೂ ಎಲ್ಲಿ ಕಳೆದುಹೋಗುವುದೋ ಎಂಬ ಚಿಂತೆ ಇತ್ತು. ಈ ಕಾರಣಕ್ಕೆ ಪೂಜೆ ನಡೆಯುವ ಸ್ಥಳದಲ್ಲೇ ಒಂದು ಮೂಲೆಯಲ್ಲಿ ಶೂ ಕಳಚಿಟ್ಟ ಡಿಕೆ ಶಿವಕುಮಾರ್ ತಮ್ಮ ಒಬ್ಬ ಭದ್ರತಾ ಸಿಬ್ಬಂದಿಯನ್ನು ಚಪ್ಪಲಿ ಕಾಯಲು ಅಲ್ಲೇ ನಿಲ್ಲಿಸಿದ್ದರು. ಆ ಭದ್ರತಾ ಸಿಬ್ಬಂದಿ ಆ ಚಪ್ಪಲಿಯನ್ನು ಜೋಪಾನ ಮಾಡಿದ್ದಾನೆ.