ಶುಭೋದಯ‌… ಪಂಚಾಂಗ- ದಿನ ಭವಿಷ್ಯ, 16-09-2024, ಸೋಮವಾರ, ಇಂದಿನ ನಿಮ್ಮ ಭವಿಷ್ಯ ಹೇಗಿದೆ?

public wpadmin

ಶುಭೋದಯ

ನಿತ್ಯ ಪಂಚಾಂಗ- ದಿನ ಭವಿಷ್ಯ

16-09-2024, ಸೋಮವಾರ

*

ಶಾಲಿವಾಹನ ಶಕೆ 1947, ಕ್ರೋಧಿ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಸುಕರ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:32 ಗಂಟೆ, ರಾಹು ಕಾಲ ಬೆಳಗ್ಗೆ 07:54 ರಿಂದ 09:25, ಯಮಘಂಡ ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:27ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:58 ರಿಂದ ಸಂಜೆ 03:30ರ ವರೆಗೆ.

*

ಮೇಷ

ನ್ಯಾಯ ಪಡೆಯಲು ಬೇರೆ ದಾರಿಗಳಿಂದ ಪ್ರಯತ್ನಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗ ಕೊಡುವಿರಿ. ವಾಹನದಿಂದ ನಿಮಗೆ ತೊಂದರೆಯಾಗಲಿದೆ. ಆಸ್ತಿಯ ಖರೀದಿಯ ಬಗ್ಗೆ ನೀವು ಹೊಸ ಪಾಲುದಾರಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳಾಗಬಹುದು. ವಿದ್ಯುತ್ ಯಂತ್ರಗಳ ಖರೀದಿಯಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಸಬಲತೆಗೆ ಕ್ರಮವನ್ನು ಕೈಗೊಳ್ಳುವುದು ಉತ್ತಮ. ನಿಮ್ಮ‌ ಭಾವನೆಯನ್ನು ಕುಟುಂಬವು ಗೌರವಿಸುವುದು. ಹೆಚ್ಚಿನ‌ ಸಮಯವನ್ನು ಧಾರ್ಮಿಕ ಕೆಲಸಕ್ಕೆ ಮೀಸಲಿಡಿ. ಸಂಗಾತಿಯ ವಿಚಾರವನ್ನು ಇನ್ನೊಬ್ಬರ ಬಳಿ ಹೇಳಿ ಸಮಾಧಾನ ಪಡುವಿರಿ. ಉದ್ಯಮದ ವಿಚಾರದಲ್ಲಿ ನೌಕರರಿಂದ ಹಿನ್ನಡೆಯಾಗಲಿದೆ. ಅವಶ್ಯಕತೆ ಇರುವಷ್ಟನ್ನು ಮಾತ್ರ ಖರೀದಿಸಿ. ಉದ್ಯೋಗದಲ್ಲಿ ಸುಲಭದ ಉಪಾಯ ಕಂಡುಕೊಳ್ಳುವಿರಿ.

ವೃಷಭ

ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯ. ನಿಮ್ಮ ನಿಶ್ಚಿತವಾದ ಯೋಜನೆ ಬದಲಾಯಿಸುವಿರಿ. ತಾಯಿಯ‌ ಕಡೆಯಿಂದ ನಿಮಗೆ ಆರ್ಥಿಕ ಸಹಾಯ ಸಿಗಲಿದೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಆತಂಕ ಉಂಟಾಗಬಹುದು. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ನಿಮ್ಮ ಕಾರ್ಯದ‌ ಬಗ್ಗೆ ಸಕಾರಾತ್ಮಕ ಭಾವನೆ ಕಡಿಮೆ ಆಗಬಹುದು. ಉದ್ವಿಗ್ನತೆ ಹೆಚ್ಚಲಿದೆ. ಅವಿವಾಹಿತರು ಯೋಗ್ಯವಾದ ಸಂಗಾತಿಯನ್ನು ಪಡೆಯುವರು. ನೀವು ಕೆಲಸದಲ್ಲಿ ಬದಲಾವಣೆ ಇಚ್ಛಿಸುವಿರಿ. ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ವಿದೇಶ ಪ್ರಯಾಣದ ಗುಂಗಿನಿಂದ ಹೊರಬನ್ನಿ. ನಿಮ್ಮ ಮೇಲೆ ವಿರೋಧಿಗಳ ಆಕ್ರಮಣವಾಗಬಹುದು. ಬೇಡದಿದ್ದರೂ ಸಹಾಯವು ನಿಮ್ಮ ಪಾಲಿಗೆ ಬರುವುದು. ಒತ್ತಡದ ಕಾರಣಕ್ಕೆ ಉದ್ಯೋಗ ಬದಲಿಸುವಿರಿ.

ಮಿಥುನ

ಹಲವಾರು ಖರ್ಚುಗಳು ಎದುರಾಗಿ ನಿಮಗೆ ಚಿಂತೆ ಕಾಡಲಿದೆ. ನಿಮ್ಮ ಬಗ್ಗೆ ಅಪರಿಚಿತರು ಪ್ರೀತಿ ತೋರಿಸಿದರೆ ಮುಜುಗರವಾಗುವುದು. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನ ಸಾಧ್ಯತೆ. ಬೇಸರ ಕಳೆಯಲು ಒಂಟಿಯಾಗಿ ದೂರ ಹೋಗುವಿರಿ. ಪ್ರೇಯಸಿಯನ್ನು ದೂರಮಾಡಿಕೊಂಡು ಸಂಕಟಪಡುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯ ಸುಧಾರಿಸಲು ಅವಕಾಶ ಸಿಗಲಿದೆ. ಯಾರಾದರೂ ನಿಮಗೆ ಉತ್ತಮ ಮಾರ್ಗದರ್ಶನ ಮಾಡಬಹುದು. ನಿಮ್ಮ ಅನುಭವದ ಆಧಾರದ ಮೇಲೆ ಕೆಲಸವು ಇರಲಿದೆ. ಯಂತ್ರೋಪಕರಣಗಳ‌ ವಿಚಾರದಲ್ಲಿ ನೀವು ಜಾಗರೂಕರಾಗಿರುವುದು ಅಗತ್ಯ. ವಿದೇಶಿ ಕಂಪನಿ ಉದ್ಯೋಗ ಬಯಸುವಿರಿ. ಸಣ್ಣ ವಿಚಾರಕ್ಕೆ ದ್ವೇಷ ಸಾಧಿಸುವುದು ಸರಿಯಾಗದು. ಹೊಂದಾಣಿಕೆಯ ಕಡೆ ನಿಮ್ಮ ಗಮನವಿರಲಿ. ಕಾರ್ಯದಲ್ಲಿ ದಕ್ಷತೆ ತೋರಿಸುವಿರಿ.

ಕರ್ಕಾಟಕ

ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವುದು ಇಷ್ಟವಾಗುವುದು. ನಿಮ್ಮ ಪ್ರೇಮವು ಸ್ನೇಹಿತರ ಮೂಲಕ ಸಫಲವಾಗುವುದು. ಕೆಲಸದ ಸ್ಥಳದಲ್ಲಿ ಹಿರಿಯರು ಮಾರ್ಗದರ್ಶನ ಪಡೆಯಿರಿ. ಮಕ್ಕಳು ನಿಮ್ಮ ವರ್ತನೆ ವಿರೋಧಿಸುವರು. ಸಾಲ ತೀರಿಸುವುದರಿಂದ ಸಂತೃಪ್ತಿ ಸಿಗುವುದು. ವ್ಯಾಪಾರದ ಉದ್ದೇಶಕ್ಕೆ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ. ನಿಮ್ಮ ಸಂಗಾತಿಯಿಂದ‌ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದೀತು. ನಿಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ನಿಮ್ಮ ವೃತ್ತಿ, ಹಣಕಾಸಿನ‌ ವಿಚಾರಕ್ಕೆ ಬಂದಾಗ ನೀವು ಬಹಳ ದುರ್ಬಲರಾಗುವಿರಿ. ಅಪರಿಚಿತರ ಬಗ್ಗೆ ಎಚ್ಚರಿಕೆ ಅವಶ್ಯ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯ ಸಾಧಿಸಿಕೊಳ್ಳುವರು. ಬಂಧುಗಳ‌ ಟೀಕೆಗೆ ನೀವು ಸೊಪ್ಪು ಹಾಕಲಾರಿರಿ. ಕಾರ್ಯದಲ್ಲಿ ಇನ್ನೊಬ್ಬರ ಸಹಾಯ ಬಯಸುವಿರಿ.

ಸಿಂಹ

ಉದ್ಯೋಗದ ನಿಷ್ಠೆಯು ನಿಮ್ಮ ಮೇಲಧಿಕಾರಿಗಳಿಗೆ ಇಷ್ಟವಾಗುವುದು. ನೀವು ನಿಶ್ಚಿಂತೆಯಿಂದ ವೃತ್ತಿಯಲ್ಲಿ ತೊಡಗಿಕೊಳ್ಳುವಿರಿ. ಸಾಲದ ವಿಚಾರದಲ್ಲಿ ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ. ಬಂಧುಗಳ ಅಸಹಜವಾದ ಮಾತನ್ನು ತಿರಸ್ಕರಿಸುವಿರಿ. ನಿಮ್ಮ ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಕುಟುಂಬದಲ್ಲಿ ನೀವು ಗಂಭೀರವಾದ ವಿವಾದಗಳನ್ನು ಸೃಷ್ಟಿಸುವಿರಿ. ನೀವು ಮತ್ತು ಸಂಗಾತಿ ನಡುವೆ ಹಣದ ಬಗ್ಗೆ ಬಿಸಿ ಬಿಸಿ ಚರ್ಚೆ ಆಗಲಿದೆ. ನಿಮ್ಮ ಒತ್ತಡವನ್ನು ಇತರರ ಸಹಾಯದಿಂದ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಸ್ವಂತ ಉದ್ಯೋಗ ನಡೆಸಲು ಚಿಂತಿಸುವುದು ಉತ್ತಮ.

ಕನ್ಯಾ

ಯಾವ ಒಪ್ಪಂದವನ್ನೂ ಬಾಯಿ ಮಾತಿನಲ್ಲಿ ಮಾಡಿಕೊಳ್ಳಬೇಡಿ. ನೀವು ಆಪ್ತರನ್ನೇ ದ್ವೇಷಿಸುವಿರಿ. ಹಣದ ತೊಂದರೆಗೆ ಅನ್ಯರ ಸಹಾಯ ಕೇಳಬೇಕಾಗುವುದು. ಸ್ಥಿರಾಸ್ತಿಯಲ್ಲಿ ಹೆಚ್ಚು ಲಾಭ ಪಡೆಯಲು ನೀವು ಯೋಚಿಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದುವಾಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಅನ್ಯರ ಬೆಂಬಲ ಸಿಗಲಿದೆ. ನೀವು ಲವಲವಿಕೆಯಿಂದ ಇದ್ದು ಇನ್ನೊಬ್ಬರನ್ನೂ ಹಾಗೆ ನೋಡಿಕೊಳ್ಳುವಿರಿ. ಶೈಕ್ಷಣಿಕ ಪ್ರಗತಿಯಿಂದ ನಿಮಗೆ ಉತ್ತಮ ಅವಕಾಶಗಳು ಲಭ್ಯವಾಗುವವು. ಕಷ್ಟಗಳಿಂದ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಹೆಣ್ಣುಮಕ್ಕಳ ಬಗ್ಗೆ ನಿಮಗೆ ಅತಿಯಾದ ಕನಿಕರ ಇರುವುದು. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಸಣ್ಣ ಉದ್ಯೋಗವಾದರೂ ಪ್ರಾಮಾಣಿಕತೆ ಇರಲಿ.

ತುಲಾ

ಅವಸರದಲ್ಲಿ ಉದ್ಯೋಗ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳದಿರಿ. ವ್ಯಾಪಾರದಲ್ಲಿ ಅಜ್ಞಾನದಿಂದ ನಷ್ಟವಾಗುತ್ತದೆ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವ ಮನಸ್ಥಿತಿಯನ್ನು ಹೊಂದುವಿರಿ. ನೀವು ಸಭ್ಯರಂತೆ ಕಂಡರೂ ಯಾರೂ ನಂಬಲಾರರು. ಆರ್ಥಿಕ ಸ್ಥಿತಿಯು ನಿಮಗೆ ಹೆಚ್ಚು ಸುಖ ಕೊಡುವುದು. ಸಂಗಾತಿಯಿಂದ ನೀವು ಬೇಸರ ಅನುಭವಿಸಬೇಕಾದೀತು. ಇಂದಿನ ಕೆಲಸಗಳು ಹೆಚ್ಚು ಸಮಾಧಾನ ತರಲಿವೆ. ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ. ಗೊಂದಲಗಳಿಗೆ ನೀವೇ ಉತ್ತರ ಕಂಡುಕೊಳ್ಳುವಿರಿ. ಬೆಲೆಬಾಳುವ ವಸ್ತುಗಳ ಖರೀದಿಯಿಂದ ಆರ್ಥಿಕ ಹೊರೆಯಾಗುವುದು. ಉದ್ಯೋಗದ ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಬಂದ ಹಣವನ್ನು ಸರಿಯಾಗಿ ವಿನಿಯೋಗವಾಗುವಂತೆ ಮಾಡಿ.

ವೃಶ್ಚಿಕ

ಕೌಟುಂಬಿಕ ವಾತಾವರಣವನ್ನು ಸಂತೋಷದಿಂದ ಅನುಭವಿಸುವಿರಿ. ಸ್ನೇಹಿತರಿಂದ ಅಗತ್ಯ ಸಲಹೆಯನ್ನು ಪಡೆಯುವಿರಿ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತನೆ ಆರಂಭವಾಗಲಿದೆ. ನಿಮ್ಮ ಸ್ಥಿರಾಸ್ತಿಯ ಬಗ್ಗೆ ಶಂಕೆ ಇರುವುದು. ನಿಮ್ಮ‌ ಸುತ್ತಮುತ್ತಲಿನವರು ನಿಮಗೆ ತೊಂದರೆ ಕೊಡಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆಯುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು. ಹೊಸದಾಗಿ ಕೆಲಸಕ್ಕೆ ಸೇರಿದವರು ಕಾರ್ಯದಲ್ಲಿ ಉತ್ಸಾಹ ತೋರಿಸುವರು. ನೀವು ಆಸ್ತಿಕತೆಯನ್ನು ರೂಢಿಸಿಕೊಳ್ಳುವಿರಿ. ನಿಮ್ಮ ವೃತ್ತಿಪರ ಜೀವನದಲ್ಲಿ ಅದೃಷ್ಟವು ನಿಮ್ಮ ಪರವಾಗಿರಬಹುದು.

ಧನುಸ್ಸು

ನಿಮ್ಮ ಬೆಳವಣಿಗೆ ಸಾತ್ತ್ವಿಕ ರೀತಿಯಲ್ಲಿ ಇರಲಿ. ಸಿಟ್ಟಿನ ಭರದಲ್ಲಿ ನೀವು ವಿವೇಚನೆ ಕಳೆದುಕೊಳ್ಳುವಿರಿ. ಚಂಚಲ ಮನಸ್ಸಿನಿಂದ ಕಾರ್ಯ ಸಾಧಿಸಲಾಗದು. ಪ್ರೀತಿಯಿಂದ ಕೊಟ್ಟ ಹಣವನ್ನು ನೀವು ಕೇಳುವುದರೊಳಗೆ ಹಿಂದಿರುಗಿಸಿ. ವಾಸದ ಸ್ಥಳವನ್ನು ನೀವು ಬದಲಾಯಿಸುವಿರಿ. ನೀವು ಹೊಂದಾಣಿಕೆಯ ಮನೋಭಾವ ಬೆಳೆಸಿಕೊಳ್ಳಬೇಕಾದೀತು. ನಿಮ್ಮ ಸಾಧನೆಯನ್ನು ನೀವು ಎಲ್ಲರ ಬಳಿ ಹೇಳಿಕೊಳ್ಳುವಿರಿ. ಮಹತ್ತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ಷ್ಮ ವಿವೇಕದ ಅಗತ್ಯ ಇದೆ. ತಂತ್ರವನ್ನು ಹೂಡಿ ನಿಮ್ಮ ಹಿತಶತ್ರುವನ್ನು ಕಂಡುಕೊಳ್ಳುವಿರಿ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಕಳೆದುಕೊಂಡಿದ್ದನ್ನು ಹೇಗಾದರೂ ಮಾಡಿ ಪಡೆದುಕೊಳ್ಳುವಿರಿ. ವ್ಯಾಪಾರದಲ್ಲಿ ಜಾಗರೂಕತೆ ಮುಖ್ಯ.

ಮಕರ

ವ್ಯವಹಾರದಲ್ಲಿ ಮಧ್ಯವರ್ತಿಗಳಿಂದ ಕೆಲವು ತೊಂದರೆಗಳು ಎದುರಾಗುವುದು. ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಅಧಿಕವಾಗಿ ಇರಲಿದೆ. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರದರ್ಶನ ಇರಲಿದೆ. ಮಿತ್ರರು ನಿಮ್ಮ ಸಹಾಯಕ್ಕೆ ಬರುವರು. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ. ವ್ಯಕ್ತಿಗತ ಸಂಬಂಧಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ನೀವು ಎಲ್ಲವನ್ನೂ ಪ್ರಾಯೋಗಿಕ ಹಿನ್ನೆಲೆಯಲ್ಲಿ ನೋಡುವಿರಿ. ನೀವು ಮಕ್ಕಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ. ಕೆಲವು ಸವಾಲುಗಳು ಉದ್ಭವಿಸಬಹುದು. ಯಾರ ಮಾತನ್ನಾದರೂ ಸಮಾಧಾನದಿಂದ ಕೇಳಿ.

ಕುಂಭ

ಪರಧನದಿಂದ ನಿಮಗೆ ಹಿಂಜರಿಕೆ ಇರಲಿದೆ. ಹೂಡಿಕೆಯ ಕಾರಣದಿಂದ‌ ನಿಮ್ಮ ಖರ್ಚನ್ನು ಆದಾಯವಾಗಿ ಪರಿವರ್ತಿಸಲು ಯತ್ನಿಸುವಿರಿ. ಹಳೆಯ ರೋಗವು‌ ಮರುಕಳಿಸಬಹುದು. ವಿದೇಶದ ವ್ಯಾಪಾರವನ್ನು ಮಾಡುವವರಿಗೆ ಶುಭ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗಲಿದೆ. ಸಂಗಾತಿಯ ಜತೆ ಸಮಯ ಕಳೆಯುವಿರಿ.‌ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವರು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಸಂಗಾತಿಯಿಂದ ನಿಮಗೆ ಬೇಸರವಾಗಲಿದೆ. ದುಸ್ಸಾಹಸಕ್ಕೆ ಹೋಗಿ ಕೈ ಸುಟ್ಟುಕೊಳ್ಳುವಿರಿ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯ ಸಿಗಬಹುದು. ಕಳೆದುಕೊಂಡು ವಸ್ತುವಿನ ಮೌಲ್ಯ ಗೊತ್ತಾಗಲಿದೆ.

ಮೀನ

ನಿಮ್ಮ ಮೇಲೆ ಯಾರಾದರೂ ಅಪವಾದ ಮಾಡಬಹುದು. ಸಣ್ಣಮಟ್ಟಿನ‌ ಗೌರವ ನಿಮಗೆ ಸಿಗಲಿದೆ. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ತೊಂದರೆ. ನಿಮಗೆ ವ್ಯವಹಾರವು ಅಂದುಕೊಂಡಷ್ಟು ಸಾಧಿಸಲಾಗದೆ ಬೇಸರವಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಆಸಕ್ತಿ ಇರಲಿದೆ. ಮಾನಸಿಕ ಅಸ್ಥಿರತೆಯನ್ನು ನಿಯಂತ್ರಣ ಮಾಡಬೇಕಾಗುವುದು. ನೀವು ಸ್ಪರ್ಧೆಯಲ್ಲಿ ಜಯ ಗಳಿಸಲು ಬಹಳ ಪ್ರಯತ್ನ ಮಾಡುವಿರಿ. ಕಾನೂನು‌ ಸಮರಕ್ಕೆ ನಿಮಗೆ ಹೊಸ ಆಯಾಮ‌ ಸಿಗಲಿದೆ. ಲಾಭ ಪಡೆಯಲು ಹೋಗಿ ಇರುವ ಸಂಪತ್ತನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಭವಿಷ್ಯದ‌ ಕುರಿತಂತೆ ನಿಮ್ಮ ಉದ್ದೇಶವನ್ನು ಸಂಗಾತಿಯ ಜತೆ ಚರ್ಚಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗ ಕೊಡುವಿರಿ. ನಿಮಗೆ ಆತ್ಮತೃಪ್ತಿ ಸಿಗಲಿದೆ. ನಂಬಿಕಸ್ಥರ ಜತೆ ವ್ಯವಹರಿಸಿ. ನಿಮ್ಮನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವಿರಿ.

Share This Article
Leave a comment