ಶುಭೋದಯ
ಈ ದಿನ- ರಾಶಿ ಭವಿಷ್ಯ
28-09-2024, ಶನಿವಾರ
ಮೇಷ
ಪತ್ರ ವ್ಯವಹಾರಗಳಿಂದ ಅನುಕೂಲ, ಸ್ಥಳ ಬದಲಾವಣೆಗೆ ಮನಸ್ಸು, ಆರೋಗ್ಯದಲ್ಲಿ ವ್ಯತ್ಯಾಸ. ನಿಮ್ಮ ಫಿಟ್ನೆಸ್ ಸಾಮಾನ್ಯವಾಗಿರುತ್ತದೆ. ಊಟದಲ್ಲಿ ಹೆಚ್ಚಿನ ಪ್ರೋಟೀನ್ ಸೇರಿಸಿಕೊಳ್ಳಲು ಯೋಚಿಸುತ್ತೀರಿ. ಕೆಲವರು ಜಿಮ್‌ಗೆ ಹೋಗಲು ಬಯಸುತ್ತಾರೆ. ಯೋಗ ಮತ್ತು ಧ್ಯಾನವು ನಿಮ್ಮ ಮನಸ್ಸು ಮತ್ತು ಆತ್ಮವನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತದೆ. ಕನಿಷ್ಠ 6 ಗಂಟೆಗಳ ನಿದ್ರೆ ಮಾಡಿ.
ವೃಷಭ
ಕೌಟುಂಬಿಕವಾಗಿ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಬದಲಾವಣೆಯಿಂದ ಸಂಕಷ್ಟ. ಹಣಕಾಸಿನ ವಿಷಯದಲ್ಲಿ ಸ್ಥಿರತೆ ಮತ್ತು ಬೆಳವಣಿಗೆ ಇರುತ್ತದೆ. ನಿರೀಕ್ಷೆಗಳು ಮೃದುವಾಗಿದ್ದರೂ, ಯೋಜನೆಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಕುಟುಂಬವಾರು ಆಚರಣೆಗಳು, ಹಬ್ಬಗಳು ಮತ್ತು ಧಾರ್ಮಿಕ ಸಮಾರಂಭಗಳಿಂದ ತುಂಬಿದ ದಿನವಾಗಿರುತ್ತೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ, ಸಂಬಂಧಗಳನ್ನು ಬಲಪಡಿಸಲು, ಒಗ್ಗಟ್ಟಿನ ಭಾವನೆಯನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.
ಮಿಥುನ
ಆರ್ಥಿಕ ಸಮಸ್ಯೆಯಿಂದ ಮುಕ್ತಿ, ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ, ಆಕಸ್ಮಿಕ ಅವಘಡ, ಉದ್ಯೋಗದಲ್ಲಿ ಆಲಸ್ಯ. ಆರ್ಥಿಕವಾಗಿ ಮಿಶ್ರಫಲಗಳಿವೆ. ಹಣವನ್ನು ಆಸ್ತಿ ವ್ಯವಹಾರದಲ್ಲಿ ಹೂಡಿಕೆ ಮಾಡದಿರಲು ಪ್ರಯತ್ನಿಸಿ. ವೃತ್ತಿಜೀವನದ ಅತ್ಯುತ್ತಮವಾಗಿರುತ್ತೆ. ಯಶಸ್ಸನ್ನು ಪಡೆಯಲು ಕೆಲಸದಲ್ಲಿ ಪ್ರಮುಖವಾದದ್ದನ್ನು ಸಾಧಿಸುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಪತ್ನಿಯನ್ನು ಹೊರಗಡೆ ಕೆರೆದುಕೊಂಡು ಹೋಗಬಹುದು.
ಕರ್ಕಾಟಕ
ಕಟಕ ರಾಶಿಯವರಿಗೆ ಉತ್ತಮ ದಿನವಾಗಿರುತ್ತೆ. ಕೆಲಸದಿಂದ ಒಂದು ದಿನ ರಜೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪ್ರೀತಿಪಾತ್ರರೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತೀರಿ. ಗೃಹಿಣಿಯರು ಸಂತೋಷದ ಕೂಟಗಳ ಭಾಗವಹಿಸುತ್ತಾರೆ. ಕೆಲಸದ ವಿಚಾರದಲ್ಲಿ ಒತ್ತಡ ಎದುರಿಸುತ್ತೀರಿ.
ಸಿಂಹ
ಆರ್ಥಿಕ ಭವಿಷ್ಯ ಆಶಾದಾಯಕವಾಗಿ ಕಾಣುತ್ತಿದೆ. ಐಷಾರಾಮಿ ವಸ್ತುವನ್ನು ಖರೀದಿಸುತ್ತೀರಿ. ಕುಟುಂಬವು ಆರ್ಥಿಕವಾಗಿ ಸುರಕ್ಷಿತವಾಗಿರುತ್ತೆ. ನಿಮ್ಮ ಸಂತೋಷದ ಮೂಲ ಕುಟುಂಬವಾಗಿರುತ್ತೆ. ಒತ್ತಡ ಇರುವುದಿಲ್ಲ. ಕುಟುಂಬದೊಂದಿಗೆ ಯಾವುದೇ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲು ಬಯಸಿದರೆ ನೀವು ಅದೃಷ್ಟಶಾಲಿಯಾಗಬಹುದು. ಹೆತ್ತವರೊಂದಿಗೆ ಮಾತನಾಡುವ ಮೂಲಕ ಅವರ ಬೆಂಬಲ ಪಡೆಯುತ್ತೀರಿ.
ಕನ್ಯಾ
ಆರೋಗ್ಯ ಸಾಮಾನ್ಯವಾಗಿರುತ್ತೆ. ಧ್ಯಾನ ಮಾಡುತ್ತೀರಿ. ಸಾಕಷ್ಟು ವಿಶ್ರಾಂತಿ ಪಡೆಯಲು ಪ್ರಯತ್ನಿಸುತ್ತೀರಿ. ಕೆಲಸದಲ್ಲಿ ಸ್ಥಿರತೆ ಇರುತ್ತೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ತಂಡದಿಂದ ಸಹಾಯ ಸಿಗುತ್ತೆ. ವೃತ್ತಿ ಜೀವನದಲ್ಲಿ ಸವಾಲುಗಳು ಇರುತ್ತವೆ. ಕಾಮೆಂಟ್‌ಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೀರಿ.
ತುಲಾ
ವ್ಯಾಪಾರ ಸಮಸ್ಯೆಯಿಂದ ಮುಕ್ತಿ, ಆರ್ಥಿಕವಾಗಿ ಸಂತೃಪ್ತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಭಾವನಾತ್ಮಕವಾಗಿ ಬಲಶಾಲಿಯಾಗಿರುತ್ತೀರಿ. ಕುಟುಂಬದಲ್ಲಿನ ಒಬ್ಬರು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಾರೆ. ಮೊದಲಿಗಿಂತ ಉತ್ತಮವಾಗಿರುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯ ದಿನ. ನೀವು ಚಿಂತೆನೆಗಳಿಂದ ಮುಕ್ತರಾಗಲು ಚಿತ್ರ ಬಿಡಿಸಬಹುದು.
ವೃಶ್ಚಿಕ
ಉದ್ಯೋಗನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ ಕಾಡುವುದು, ತಂದೆಯಿಂದ ಧನಾಗಮನ. ಆದಾಯದ ನಡುವೆ ಖರ್ಚುಗಳು ಇರುತ್ತವೆ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು ತೊಂದರೆಯಾಗಬಹುದು. ಅಗ್ಗದ ಒಪ್ಪಂದದಿಂದ ಹಣವನ್ನು ಉಳಿಸಬಹುದು. ಹಣವು ಸ್ಥಿರವಾಗಿ ಉಳಿಯುತ್ತದೆ. ಕುಟುಂಬದಲ್ಲಿನ ಸಣ್ಣ ಸಮಸ್ಯೆಗಳು ಬಗೆಹರಿಯತ್ತವೆ. ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.
ಧನುಸ್ಸು
ತಾಳ್ಮೆಯಿಂದಿರಲು ಪ್ರಯತ್ನಿಸಿ. ಉದ್ಯೋಗ ಸಂದರ್ಶನಗಳಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಸರ್ಕಾರದಿಂದ ಬೆಂಬಲ ಸಿಗಲಿದೆ. ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಕುಟುಂಬದಿಂದ ಗೌರವವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ಉದ್ಯೋಗದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕೌಟುಂಬಿಕ ಸಮಸ್ಯೆಗಳು ಇರುತ್ತವೆ.
ಮಕರ
ಅನಗತ್ಯ ಖರ್ಚುಗಳಿಂದಾಗಿ ಉಳಿತಾಯ ಖಾಲಿಯಾಗುವ ಸಾಧ್ಯತೆಯಿದೆ. ದುಂದುವೆಚ್ಚದ ನಿಮ್ಮ ಬಯಕೆಯನ್ನು ನಿಯಂತ್ರಿಸಿ. ಹಣಕಾಸಿನ ಕಾರ್ಯತಂತ್ರದ ಬಗ್ಗೆ ಯೋಚಿಸಲು ಪ್ರಾರಂಭಿಸಲು ಉತ್ತಮ ಸಮಯ. ಸಂಗಾತಿ ನಿಮ್ಮೊಂದಿಗೆ ಸಮಯ ಕಳೆಯಲು ಬಯಸುತ್ತಾರೆ, ಆದ್ದರಿಂದ ಅವರಿಗೆ ಸಮಯ ಕೊಡಲು ಪ್ರಯತ್ನಿಸಿ. ಆರ್ಥಿಕ ಲಾಭಗಳು ಇರುತ್ತವೆ.
ಕುಂಭ
ಪ್ರೀತಿಯ ಜೀವನ ಉತ್ತಮವಾಗಿರುತ್ತದೆ. ಸಂಗಾತಿಯಲ್ಲಿ ಹೊಸ ಮಟ್ಟದ ಉತ್ಸಾಹವನ್ನು ಕಾಣುತ್ತೀರಿ. ಪರಸ್ಪರ ಮೆಚ್ಚುಗೆಯನ್ನು ವ್ಯಕ್ತಪಡಿಸಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ವೃತ್ತಿಜೀವನದಲ್ಲಿ ಯಶಸ್ಸಿನ ಅವಕಾಶಗಳನ್ನು ಸಹ ಇರುತ್ತೆ. ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.
ಮೀನ
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆಹಾರ ಮತ್ತು ಜೀವನಶೈಲಿಯಲ್ಲಿ ಮಿತತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ನಿಮ್ಮ ದೈನಂದಿನ ದಿನಚರಿಯಲ್ಲಿ ಪೌಷ್ಟಿಕ ಆಹಾರ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳುವುದನ್ನು ಪರಿಗಣಿಸುತ್ತೀರಿ. ನಿಮ್ಮ ವೃತ್ತಿಜೀವನಕ್ಕೆ ಉತ್ತಮ ದಿನವಲ್ಲ. ಉದ್ಯೋಗ ಹುಡುಕಾಟ ಅಥವಾ ಪ್ರಸ್ತುತ ಉದ್ಯೋಗದಲ್ಲಿ ಸವಾಲುಗಳು ಅಥವಾ ಅಡೆತಡೆಗಳನ್ನು ಎದುರಿಸುತ್ತೀರಿ.