ವೈದ್ಯರ ವರದಿ ಬಳಿಕ ಬಳ್ಳಾರಿ ಜೈಲಿನಿಂದ ನಟ ದರ್ಶನ್ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ!

public wpadmin

ಬಳ್ಳಾರಿ(ಅ.11) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್‌ ಈಗಾಗಲೇ ವೈದ್ಯರ ತಪಾಸಣೆಗೆ ಒಳಗಾಗಿದ್ದಾರೆ. ನ್ಯೂರೋ ಸರ್ಜನ್ ವರದಿ ಬಳಿಕ ನಟ ದರ್ಶನ್ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಜೈಲಿನಲ್ಲಿ ಬೆನ್ನು ನೋವು ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ಪೊಲೀಸರು ಕೋರ್ಟ್ ಅನುಮತಿ ಪಡೆದು ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

ನಟ ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಇರುವ ಕಾರಣ ಇತ್ತೀಚೆಗೆ ಸರ್ಜಿಕಲ್ ಚೇರ್‌ಗೆ ಮನವಿ ಮಾಡಿದ್ದು ಭಾರಿ ಸದ್ದು ಮಾಡಿತ್ತು. ಇದಾದ ಬಳಿಕ ದರ್ಶನ್ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಹೋಗಿದೆ. ಕಳೆದ ವಾರ ಆರ್ಥೋಪೆಡಿಕ್ ಸರ್ಜನ್ ದರ್ಶನ್ ಬೆನ್ನು ನೋವಿನ ಕುರಿತು ತಪಾಸಣೆ ಮಾಡಿದ್ದಾರೆ. ಆದರೆ ವರದಿ ನೀಡಲು ನ್ಯೂರೋ ಸರ್ಜನ್ ಕೂಡ ತಪಾಸಣೆ ಮಾಡಬೇಕಿದೆ. ಹೀಗಾಗಿ ಇದೀಗ ವಿಮ್ಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ದರ್ಶನ್ ತಪಾಸಣೆ ಮಾಡಲಿದ್ದಾರೆ.

ವಿಶ್ವನಾಥ್ ತಪಾಸಣೆ ಬಳಿಕ ಆರ್ಥೋಪೆಡಿಕ್ ಸರ್ಜನ್ ದರ್ಶನ್ ಬೆನ್ನು ನೋವಿನ ಕುರಿತು ಸಂಪೂರ್ಣ ವರದಿ ನೀಡಲಿದ್ದಾರೆ. ವರದಿಯಲ್ಲಿ ದರ್ಶನ್‌ಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಮಾತ್ರ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ವೈದ್ಯರ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದ್ದರೆ, ಈ ವೈದ್ಯರ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿ ನಟ ದರ್ಶನ್‌ನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

Share This Article
Leave a comment